

ಹೊನ್ನಾವರ: ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಹೋರಾಟವನ್ನು ನಾಟಕದ ಹೋರಾಟವೆಂದು ಅಣಕಿಸುವ ಸಂಸದ ಅನಂತಕುಮಾರ ಹೆಗಡೆ ಅವರನ್ನು ಭಾರತದ ಸಂಸತ್ನಿಂದ ಉಚ್ಛಾಟಿಸಲು ಲೋಕಸಭೆಯ ಸ್ಪೀಕರ್ಗೆ ಆದೇಶಿಸಬೇಕು ಗುರುವಾರ ಹೊನ್ನಾವರ ಮತ್ತು ಮಂಕಿ ಬ್ಲಾಕ್ ಕಾಂಗ್ರೆಸ್ ಸಮಿತಿ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.
ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಗದೀಪ ತೆಂಗೇರಿ ಮಾತನಾಡಿ, ಕೀಳು ಮಟ್ಟದ ಹೇಳಿಕೆ ನೀಡುವ ಮೂಲಕ ರಾಷ್ಟ್ರಪಿತ ಗಾಂಧಿ ಮತ್ತು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ತ್ಯಾಗ, ಬಲಿದಾನ ಮಾಡಿದ ಸಾವಿರಾರು ಸ್ವಾತಂತ್ರ್ಯ ಹೋರಾಟಗಾರರನ್ನು ಅವಮಾನಿಸಿದ್ದಾರೆ ಎಂದರು.
ಮಂಕಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಗೋವಿಂದ ನಾಯ್ಕ ಮಾತನಾಡಿ, ಮಹಾತ್ಮ ಗಾಂಧಿಯವರನ್ನು ಅವಮಾನಿಸಿದ ಅನಂತಕುಮಾರ ಅವರು ನಾಡಿನ ಜನರ ಕ್ಷಮೆ ಕೇಳಬೇಕು ಎಂದರು.
ತಾಪಂ ಅಧ್ಯಕ್ಷ ಉಲ್ಲಾಸ ನಾಯ್ಕ, ಸದಸ್ಯೆ ಲಕ್ಷ್ಮೀ ಗೊಂಡ, ಆಗ್ನೇಲ್ ಡಯಾಸ್, ರಾಜು ನಾಯ್ಕ ಮಂಕಿ, ಜಕ್ರಿಯಾ ಸಾಬ್, ಆರ್.ಎಸ್. ರಾಯ್ಕರ್ ಉಪ್ರೋಣಿ, ಬಾಲಚಂದ್ರ ನಾಯ್ಕ, ಸುದರ್ಶನ ಹೊನ್ನಾವರ, ನೆಲ್ಸನ್ ರೋಡ್ರಿಗೀಸ್, ಬಾಬು ನಾಯ್ಕ, ಲಂಬೋದರ್ ನಾಯ್ಕ, ಉದಯ್ ಮೇಸ್ತ, ಮಂಗಲ ಎಸ್. ಮೇಸ್ತ, ರಾಜೇಂದ್ರ ನಾಯ್ಕ, ಮಾದೇವ ನಾಯ್ಕ ರ್ಕ, ಅಜಮ್ ಸಾಬ್ ಮತ್ತು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.