

ಕಲಬುರಗಿ: ಲೋಕಸಭೆ ಸದಸ್ಯರಾಗಿ ಆಯ್ಕೆಯಾದ ರಾಧಾಕೃಷ್ಣ ದೊಡ್ಡಮನಿ ಅವರಿಂದ ಅಭಿನಂದನೆ ಸಲ್ಲಿಸಲು ಜಿಲ್ಲೆಯ ವಿವಿಧೆಡೆ ಬುಧವಾರ ಮತ್ತು ಗುರುವಾರ ವಿವಿಧೆಡೆ ಸಭೆ ನಡೆಸಲಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ್ ತಿಳಿಸಿದ್ದಾರೆ. ಸಂಸದರ ಜತೆ ನೂತನ ಎಂಎಲ್ಸಿಗಳಾದ ಜಗದೇವ ಗುತ್ತೇದಾರ್ ಕಾಳಗಿ, ಡಾ.ಚಂದ್ರಶೇಖರ ಪಾಟೀಲ್ ಹುಮನಾಬಾದ್ ಅವರು ಭಾಗವಹಿಸಲಿದ್ದಾರೆ. ಬುಧವಾರ ಮಧ್ಯಾಹ್ನ ೧೨ಕ್ಕೆ ಗುರುಮಠಕಲ್‌ನ ಜಿ.ಎಚ್.ಫಂಕ್ಷನ್ ಹಾಲ್, ಸಂಜೆ ೪ಕ್ಕೆ ಸೇಡಂನ ವೀರಶೈವ ಕಲ್ಯಾಣ ಮಂಟಪ, ಗುರುವಾರ ಬೆಳಗ್ಗೆ ೧೧.೩೦ಕ್ಕೆ ಕಲಬುರಗಿ ಗರದ ವೀರಶೈವ ಕಲ್ಯಾಣ ಮಂಟಪ, ಜು.೧೨ರಂದು ಬೆಳಗ್ಗೆ ೧೧ಕ್ಕೆ ಅಫಜಲಪುರದ ಸರಸಂಬಾ ಕಲ್ಯಾಣ ಮಂಟಪ, ಸಂಜೆ ೪ಕ್ಕೆ ಜೇವರ್ಗಿಯ ಎನ್.ಧರ್ಮಸಿಂಗ್ ಕಲ್ಯಾಣ ಮಂಟಪದಲ್ಲಿ ಸಮಾರಂಭ ನಡೆಯಲಿದೆ ಎಂದು ತಿಳಿಸಿದ್ದಾರೆ.