

ಬಾಗಲಕೋಟೆ: ವಿದ್ಯಾರ್ಥಿಗಳ ಜೀವನದಲ್ಲಿ ಶಿಕ್ಷಣದ ನಂತರ ಹೊಸ ಸಂಶೋಧನೆಗಳ ಮೂಲಕ ನಿರಂತರ ಅಧ್ಯಯನ ಬಹಳ ಮುಖ್ಯವಾಗಿದೆ ಎಂದು ಬೆಂಗಳೂರಿನ ನಿಮ್ಹಾನ್ಸ ಇಂಟಿಗ್ರೇಟೀವ್ ಮೆಡಿಸಿನ್ ವಿಭಾಗದ ಮುಖ್ಯಸ್ಥ ಡಾ.ಆರ್.ಕಿಶೋರಕುಮಾರ ಹೇಳಿದರು.
ನಗರದ ಬಿವಿವಿ ಸಂಘದ ಹೊಸ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬಿವಿವಿ ಸಂಘದ ಆಯುರ್ವೆದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ವಿಶಿಕಾನುಪ್ರವೇಶ -೨೦೨೩ ಪದವಿ ಪ್ರದಾನ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಅವರು ಮಾತನಾಡಿದರು.
ಅಧ್ಯಯನ ವಿದ್ಯಾರ್ಥಿಗಳಲ್ಲಿ ನಿರಂತರವಾಗಿರಬೇಕು, ಹೊಸ ಹೊಸ ಸಂಶೋಧನೆಗಳ ಪ್ರಕಟಣೆ ಜೊತೆಗೆ ಇತರ ವೈದ್ಯ ಪದ್ಧತಿಯ ವೈದ್ಯರೊಂದಿಗೆ ಉತ್ತಮ ಬಾಂಧವ್ಯ ಹಾಗೂ ಚಿಕಿತ್ಸಾ ಪದ್ದತಿಗಳ ಸಂಯೋಜನೆಯು ಆಯುರ್ವೇದ ಪದ್ಧತಿಯ ನೂತನ ಪದವಿ ಪಡೆದ ವೈದ್ಯರಿಗೆ ಇನ್ನು ಹೆಚ್ಚು ಯಶಸ್ಸು ಸಾಽಸಲೂ ಅನುಕೂಲವಾಗಲಿದೆ. ಭಾರತೀಯ ಸಾಂಪ್ರಾದಾಯಕ ವೈದ್ಯ ಪದ್ದತಿಯಗಳಾದ ಆಯುರ್ವೇಧ,ಯೋಗ,ಯುನಾನಿ,ಹೋಮಿಯೋಪತಿ ಇತ್ಯಾದಿ ಸೇರಿದಂತೆ ಮೊದಲಾದವುಗಳು ಕೋವಿಡ್ ಸಂದರ್ಭದಲ್ಲಿ ಸಾಕಷ್ಟು ಜನರಿಗೆ ಚಿಕಿತ್ಸೆ ಕೊಟ್ಟು ಪ್ರಾಣ ಕಾಪಾಡುವಲ್ಲಿ ಯಶಸ್ವಿಯಾಗಿವೆ ಎಂದರು.
ನಮ್ಮ ಭಾರತದಲ್ಲಿ ಶಿಕ್ಷಣ ಅನ್ನೋದು ಹಣ ಮಾಡುವುದಕ್ಕೆ ಇರುವ ವಸ್ತು ಅಲ್ಲಾ. ಇದೊಂದು ಸೇವೆಯಂದು ಭಾರತದಲ್ಲಿ ಅನಾಽಕಾಲದಿಂದ ವೈದ್ಯವೃತ್ತಿಯನ್ನು ಮಾಡಿಕೊಂಡು ಬಂದಿದೆ. ಈ ನಿಟ್ಟಿನಲ್ಲಿ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಆಯುರ್ವೇದ ಮಹಾವಿದ್ಯಾಲಯ ಉತ್ತಮ ಗುಣಮಟ್ಟದ ಶಿಕ್ಷಣ ಬೋಧನೆ ಮಾಡುವುದರ ಮೂಲಕ ಉತ್ತಮ ವೈದ್ಯರನ್ನು ಸಮಾಜಕ್ಕೆ ನೀಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.
ಬಿವಿವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ.ಎನ್.ಅಥಣಿ, ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ .ಎಸ್. ಸಾಸನೂರ, ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಮಹಾಂತೇಶ ಸಾಲಿಮಠ ಉಪಸ್ಥಿತರಿದ್ದರು. ಡಾ.ಜಿ.ಎಸ್.ಕುಲಕರ್ಣಿ ಸ್ವಾಗತಿಸಿದರು, ಡಾ.ಪ್ರಕಾಶ ನರಬೋಳೆ ವಂದಿಸಿದರು. ಡಾ.ಸುನಿಲಕುಮಾರ ನಿರೂಪಿಸಿದರು.