ಸಂಭ್ರಮದಿಂದ ಜರುಗಿದ ಮಹೋತ್ಸವ

21blh1 ಕಲ್ಯಾಣೋತ್ಸವ
Published on

ಬೈಲಹೊಂಗಲ: ಪಟ್ಟಣದ ಮೂರುಸಾವಿರಮಠದ ಲಿಂ. ನೀಲಕಂಠ ಮಹಾಶಿವಯೋಗೀಶ್ವರ ಜಾತ್ರಾ ಮಹೋತ್ಸವ ಹಾಗೂ ಲಿಂಗೈಕ್ಯ ಗಂಗಾಧರ ಸ್ವಾಮೀಜಿ 72ನೇ ಜಯಂತಿ ಮತ್ತು ಮಹಾಶಿವರಾತ್ರಿ ಉತ್ಸವ ಅಂಗವಾಗಿ ಹಮ್ಮಿಕೊಂಡಿರುವ ಕಲಬುರ್ಗಿ ಶರಣ ಬಸವೇಶ್ವರ ಪ್ರವಚನ ಕಾರ್ಯಕ್ರಮದಲ್ಲಿ ಶರಣ ಬಸವೇಶ್ವರ ಕಲ್ಯಾಣ ಮಹೋತ್ಸವ ಗುರುವಾರ ಸಡಗರದಿಂದ ನೆರವೇರಿತು.

ಮೂರುಸಾವಿರಮಠದ ಪೀಠಾಪತಿ ಪ್ರಭುನೀಲಕಂಠ ಸ್ವಾಮೀಜಿ ನೇತೃತ್ವದಲ್ಲಿ ಬಸವೇಶ್ವರ ಕಲ್ಯಾಣ ಮಹೋತ್ಸವದ ವಿವಿಧಾನ ಶಾಸೋಸವಾಗಿ ಜರುಗಿದವು. ಭಕ್ತರಿಂದ ಬಸವೇಶ್ವರ ಕಲ್ಯಾಣ ನೆರವೇರಿತು. ಹರ್ಲಾಪುರ ಹರ್ತಮಠದ ಸದಾನಂದ ಸ್ವಾಮೀಜಿ ಹಾಗೂ ಮಠದ ಪುರೋಹಿತ ಬಳಗ ಮದುವೆ ಕಾರ್ಯ ನೆರವೇರಿಸಿದರು.

ನಟ ಶಿವರಂಜನ ಬೋಳನ್ನವರ, ಬಸವರಾಜ ಕೌಜಲಗಿ, ಮಹೇಶ ಬೆಲ್ಲದ, ಮಹಾಂತೇಶ ತುರಮರಿ, ಶ್ರೀಶೈಲ ಯಡಳ್ಳಿ, ಡಾ.ಶರಣಕುಮಾರ ಅಂಗಡಿ, ಅಜ್ಜಪ್ಪ ಅಂಗಡಿ, ಸುಭಾಸ ತುರಮರಿ, ಬಸವರಾಜ ದೊಡಮನಿ, ಮಹಾಂತೇಶ ಅಕ್ಕಿ, ಶಿವಬಸಪ್ಪ ತುರಮರಿ, ಬಸವರಾಜ ಗೂರನವರ, ಎಸ್.ಆರ್. ಕಲಹಾಳ, ನಿಂಗಪ್ಪ ಚಿಲಮೂರ, ವಿ.ಕೆ.ಬಡಿಗೇರ, ವಿ.ಎಸ್.ಗಣಾಚಾರಿ, ಡಾ.ಸುಭಾಷ ಬಾಗಡೆ, ಸಂಗಯ್ಯ ಯರಗಂಬಳಿಮಠ, ರಮೇಶ ಯರಗಟ್ಟಿ, ಮಲ್ಲಯ್ಯ ಶೀಲಯ್ಯನವರಮಠ, ಸುನೀಲ ಮೇಟಿ, ಬಸಯ್ಯ ಕಾಳಚರಂತಿಮಠ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net