ಸಂಭ್ರಮದಿಂದ ಜರುಗಿದ ಬೀಳೂರ ಅಜ್ಜನ ಕಾರ್ತಿಕೋತ್ಸವ

1bedd3c0-3188-408a-820b-45e46ab4760d
ದೀಪಜ್ಯೋತಿಗಳನ್ನು ಬೆಳಗುವ ಮೂಲಕ ದೀಪೋತ್ಸವಕ್ಕೆ ಚಾಲನೆ ನೀಡಿದರು
Published on

ಬಾಗಲಕೋಟೆ: ಬಿ.ವಿ.ವಿ.ಸಂಘದ ಆವರಣದಲ್ಲಿರುವ ಬೀಳೂರ ಅಜ್ಜನ ಕಾರ್ತಿಕೋತ್ಸವ ಮಂಗಳವಾರ ಸಂಭ್ರಮದಿಂದ ಜರುಗಿತು.

ಬೆಳಿಗಿನ ಜಾವ ಬೀಳೂರು ಗುರು ಬಸವ ಮಹಾಸ್ವಾಮಿಗಳಿಗೆ ಮಹಾಪಂಚಾಮೃತ ಅಭಿಷೇಕ, ರುದ್ರಪಠಣ, ಪುಷ್ಪಾಂಜಿ ಮೂಲಕ ಮಹಾ ಮಂಗಳಾರುತಿ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಸಂಜೆ ಬಿ.ವಿ.ವಿ.ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ ಅವರು ಶ್ರೀಗಳಿಗೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿ ನಂತರ ದೀಪಜ್ಯೋತಿಗಳನ್ನು ಬೆಳಗುವ ಮೂಲಕ ದೀಪೋತ್ಸವಕ್ಕೆ ಚಾಲನೆ ನೀಡಿದರು.

ಈ ಸಂಧರ್ಭದಲ್ಲಿ ಕಾಲೇಜುಗಳ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಗುರುಬಸವ ಸೂಳಿಭಾವಿ, ವೈದ್ಯಕೀಯ ಕಾಲೇಜುಗಳ ಆಡಳಿತ ಮಂಡಳಿಯ ಕಾಯಾ೯ಧ್ಯಕ್ಷ ಅಶೋಕ ಸಜ್ಜನ, ಕುಮಾರ ಹಿರೇಮಠ, ರಾಜು ಪಾಟೀಲ, ವಿರುಪಾಕ್ಷಪ್ಪ ಕೋಟಿ, ಸುಭಾಸ ಜಿಗಜಿನ್ನಿ, ಶಂಕರಪ್ಪ ಯಾದವಾಡ, ಶರಣಪ್ಪ ರುದ್ರಾಕ್ಷಿ, ವಿ.ಆರ್.ಶಿರೋಳ, ಬಿ. ಆರ್.ಬೋಳಿಶೆಟ್ಟಿ. ಶಶಿಧರ ಬೆಂಬಳಗಿ, ಕುಮಾರ ಜಿಗಜಿನ್ನಿ, ಬಿ.ಆರ್ ಚಿನಿವಾಲರ ಹಾಗೂ ಮಹಾವಿದ್ಯಾಲಯಗಳ ಪ್ರಾಚಾರ್ಯರು ಸೇರಿದಂತೆ ಅನೇಕರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net