

ಬಾಗಲಕೋಟೆ: ಕೆರೂರ ಪಟ್ಟಣದ ಆರಾಧ್ಯ ದೇವತೆ ಬನಶಂಕರಿದೇವಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವವು ಬುಧವಾರ ಸಂಭ್ರಮದಿAದ ಜರುಗಿತು.
ಮಹಾನವಮಿ ಪ್ರಯುಕ್ತ ದೇವಸ್ಥಾನದಲ್ಲಿ ಬೆಳಿಗ್ಗೆ ಬನಶಂಕರಿ ಅಮ್ಮನವರಿಗೆ ವಿಶೇಷ ಪೂಜೆ, ಹೋಮ- ಹವನ ಹಾಗೂ ವಿವಿಧ ಪೂಜಾ ಕಾರ್ಯಗಳು ನಡೆದವು.
ನವರಾತ್ರಿ ಉತ್ಸವದ ಅಂಗವಾಗಿ ಪ್ರತಿದಿನ ದೇವಿಗೆ ಒಂದೊ0ದು ವಿಶೇಷ ಅಲಂಕಾರ ಸೇವೆ ಮಾಡಲಾಗಿತ್ತು, ಪ್ರತಿದಿನ ಸಂಜೆ ದೇವಸ್ಥಾನದಲ್ಲಿ ಪುರಾಣ ಪಠಣ ಕಾರ್ಯಕ್ರಮ ಜರುಗಿತು. ದೇವಸ್ಥಾನವು ತಳಿರು ತೋರಣ,ವಿಧ್ಯುತ್ ಅಲಂಕಾರದಿ0ದ ಕಂಗೊಳಿಸುತ್ತಿತ್ತು.
ಅ0ದಾಜಿನ ೧.೫ ಕ್ವಿಂಟಲ್ ಕರಿಗಡಬಿನ ಮಹಾಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು, ನೂರಾರು ಭಕ್ತರು ದೇವಿಯ ದರ್ಶನ ಪಡೆದು ಪ್ರಸಾದದ ರುಚಿಯನ್ನು ಸವಿದರು.
ಈ ಸಂದರ್ಭದಲ್ಲಿ ದೇವಾಂಗಮಠದ ಮುದ್ದುಸಂಗಸ್ವಾಮಿಜಿ, ದೇವಸ್ಥಾನದ ಅರ್ಚಕ ಯಂಕಣ್ಣ ಗುಡಿಸಾಗರ, ಸಮಾಜದ ಅಧ್ಯಕ್ಷ ಸಂಕಣ್ಣ ಹೊಸಮನಿ, ಡಾ.ಎಂ.ಜಿ.ಕಿತ್ತಲಿ, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಸದಾನಂದ ಮದಿ, ಪ.ಪಂ.ಸದಸ್ಯ ವಿಠ್ಠಲಗೌಡ ಗೌಡರ, ಶಿವಪ್ಪ ಹೆಬ್ಬಳ್ಳಿ, ಶಂಕ್ರಪ್ಪ ಗದಗಿನ, ಮಹೇಶ ಮುಗಳಿ,ಕೊಬ್ಬಣ್ಣ ಸೂಳಿಕೇರಿ ಇದ್ದರು.