ಸಂಭ್ರಮದ ಹುಚ್ಚಮ್ಮ ದೇವಿ ಪಲ್ಲಕ್ಕಿ ಉತ್ಸವ

18BANNU1
filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: video;hw-remosaic: false;touch: (-1.0, -1.0);sceneMode: null;cct_value: 0;AI_Scene: (-1, -1);aec_lux: 0.0;aec_lux_index: 0;HdrStatus: off;albedo: ;confidence: ;motionLevel: -1;weatherinfo: null;temperature: 38;
Published on

ಬನ್ನೂರು: ಪಟ್ಟಣದ ಸಮೀಪದ ಬಿ.ಸೀಹಳ್ಳಿ ಗ್ರಾಮದಲ್ಲಿ ಆದಿಶಕ್ತಿ ಹುಚ್ಚಮ್ಮ ದೇವಿಯ ಜಾತ್ರಾ ಮಹೋತ್ಸವ ಅಂಗವಾಗಿ ದೇವಿಯ ಪಲ್ಲಕ್ಕಿ ಉತ್ಸವ ಸೋಮವಾರ ವಿಜೃಂಭಣೆಯಿಂದ ಜರುಗಿತು.

ವಿದ್ಯುತ್ ಅಲಂಕಾರದಿಂದ ಕೂಡಿದ ಮಂಟಪದಲ್ಲಿ ದೇವಿಯನ್ನು ಪ್ರತಿಷ್ಠಾಪಿಸಿ ದೇವಾಲಯದ ಸುತ್ತ ಒಂದು ಸುತ್ತು ಪಲ್ಲಕ್ಕಿ ಉತ್ಸವವನ್ನು ಯಶಸ್ವಿಯಾಗಿ ನಡೆಸಿದರು. ಗ್ರಾಮದ ಯುವಕರು, ಹಿರಿಯರು ಜಾನಪದ ನೃತ್ಯ ಮಾಡಿದರು.

ಜಿಲ್ಲಾ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಅತ್ತಹಳ್ಳಿ ಸ್ವಾಮಿರಾಜ್ ಮಾತನಾಡಿ, ಸುತ್ತಮುತ್ತಲಿನ ಗ್ರಾಮದಲ್ಲಿಯೇ ಹುಚ್ಚಮ್ಮ ದೇವಿಯ ಜಾತ್ರಾ ಮಹೋತ್ಸವ ಬಹಳಷ್ಟು ವಿಜೃಂಭಣೆಯಿಂದ ವಾರಗಳ ಕಾಲ ನಡೆಯಲಿದೆ. ರೈತರು ರಾಜ್ಯದ ನಾನಾ ಭಾಗಗಳಿಂದ ಬಂದು ತಮ್ಮ ರಾಸುಗಳನ್ನು ಕಟ್ಟುವ ಪ್ರತೀತಿಯನ್ನು ಬೆಳೆಸಿಕೊಂಡು ಬಂದಿದ್ದಾರೆ. ಎಲ್ಲೇ ಜಾತ್ರೆ, ಉತ್ಸವ ನಡೆದರೂ ಅಲ್ಲಿ ಪೊಲೀಸರ ರಕ್ಷಣೆ ಕೇಳುವುದು ಸಹಜ. ಆದರೆ, ಇಲ್ಲಿ ಜಾತ್ರೆ ಆರಂಭವಾದ ವರ್ಷದಿಂದ ಇಲ್ಲಿಯವರೆಗೂ ಯಾರೂ ಪೊಲೀಸರ ರಕ್ಷಣೆಗೆ ಹೋಗದೆ ಗ್ರಾಮದ ಪ್ರತಿಯೊಬ್ಬರೂ ತಮ್ಮದೆ ಆದ ಕೆಲಸ ಕಾರ್ಯಗಳನ್ನು ಹಂಚಿಕೊಂಡು ಯಾವುದೇ ಅವಘಡಗಳು ನಡೆಯದಂತೆ ವಿಜೃಂಭಣೆಯಿಂದ ನಡೆಸುವುದು ಇಲ್ಲಿನ ವಿಶೇಷ ಎಂದು ಹೇಳಿದರು.

ಬನ್ನೂರು ಹೋಬಳಿ ಘಟಕದ ಅಧ್ಯಕ್ಷ ಸೀಹಳ್ಳಿ ರವಿ, ಕೃಷ್ಣಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net