ಸಂಭ್ರಮದ ಮಲ್ಲಿಕಾರ್ಜುನ ದೇವರ ಮಹಾರಥೋತ್ಸವ

bkt-13-4
ಬಾಗಲಕೋಟೆ ನಗರದ ಸಮೀಪದ ಮಲ್ಲಾಪುರ ಮಲ್ಲಿಕಾರ್ಜುನ ರಥೋತ್ಸವ ಶನಿವಾರ ಸಂಜೆ ಸಂಭ್ರಮ, ಸಡಗರದಿಂದ ಜರುಗಿತು.
Published on

ಬಾಗಲಕೋಟೆ: ನಗರದ ಸಮೀಪದ ಐತಿಹಾಸಿಕ ಗುಡ್ಡದ ಮಲ್ಲಾಪುರ ಗ್ರಾಮದ ಆರಾಧ್ಯ ದೈವ ಮಲ್ಲಿಕಾರ್ಜುನ ದೇವರ ಜಾತ್ರಾ ಮಹೋತ್ಸವದ ಮಹಾರಥೋತ್ಸವ ಶನಿವಾರ ಸಂಜೆ ಅದ್ದೂರಿಯಾಗಿ ಜರುಗಿತು.

ಪ್ರತಿ ವರ್ಷ ದವನದ ಹುಣ್ಣಿಮೆ ಅಂಗವಾಗಿ ಮಲ್ಲಿಕಾರ್ಜುನ ದೇವರ ಮಹಾ ರಥೋತ್ಸವ ನಡೆಯುತ್ತದೆ. ಬೆಳಗ್ಗೆ ಮಲ್ಲಿಕಾರ್ಜುನ ಸ್ವಾಮಿಗೆ ಮಹಾರುದ್ರಾಭಿಷೇಕ ನಂತರ ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಿತು. ಮಲ್ಲಾಪುರ ಗ್ರಾಮದಿಂದ ಕಳಶದ ಮೆರವಣಿಗೆ ಆರಂಭವಾಗಿ ಸಂಭ್ರಮ, ಸಡಗರದಿಂದ ದೇವಸ್ಥಾನಕ್ಕೆ ತಲುಪಿತು. ಗೆಳೆಯರ ಬಳಗದಿಂದ ರುದ್ರಾಕ್ಷಿ ಮಾಲೆ ಅರ್ಪಿಸಲಾಯಿತು. ಹೊನ್ನಾಕಟ್ಟಿ ಗ್ರಾಮದಿಂದ ರಥದ ಹಗ್ಗ, ಕಿರಸೂರ ಗ್ರಾಮದಿಂದ ನಂದಿಕೋಲು, ಹುಬ್ಬಳ್ಳಿಯಿಂದ ಹೂವಿನ ಮಾಲೆ ಸೇವೆ ನಡೆಯಿತು. ಈ ರಥೋತ್ಸವದಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ವಿವಿಧ ಜಿಲ್ಲೆಯಿಂದ ಅಪಾರ ಭಕ್ತರು ಆಗಮಿಸಿ ದರ್ಶನ ಪಡೆದುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net