

ಕಳಸ: ಸವಿತ ಭಂಡಾರಿ ಸಮಾಜ ಮತ್ತು ಯಶಸ್ವಿನಿ ಮಹಿಳಾ ಭಂಡಾರಿ ಸಮಾಜದಿಂದ ಆಟಿಡೊಂಜಿ ದಿನ ಕಾರ್ಯಕ್ರಮ ಸಡಗರದಿಂದ ಅಚರಿಸಲಾಯಿತು.
ಸಮಾಜದ ಪ್ರಮುಖ ರಾಜು ಭಂಡಾರಿ ಕಾರ್ಯಕ್ರಮ ಉದ್ಘಾಟಿಸಿದರು. ಭಂಡಾರಿ ಸಮುದಾಯದ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ರಾಜು ಭಂಡಾರಿ ಅವರನ್ನು ಗೌರವಿಸಲಾಯಿತು. ಮಹಿಳೆಯರಿಗೆ ಪುರುಷರಿಗೆ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ಭಂಡಾರಿ ಸಂಘದ ಅಧ್ಯಕ್ಷ ಮೋಹನ್ ಭಂಡಾರಿ ಮಾತನಾಡಿ, ನಮ್ಮ ಸಮುದಾಯ ಮೂಲತಃ ತುಳುನಾಡಿನವರೇ ಇರುವುದರಿಂದ ಅವರು ತುಳುನಾಡಿನ ಸಂಸ್ಕೃತಿ ಪ್ರೀತಿಸುತ್ತಾರೆ. ಹಿಂದೆ ತುಳುನಾಡಿನಲ್ಲಿ ಆಟಿ ಮಾಸ ಬಂತೆಂದರೆ ಬಹಳ ಕಷ್ಟದ ದಿನಗಳನ್ನು ಎದುರಿಸಬೇಕಾಗಿತ್ತು. ಜೀವನ ನಡೆಸಲು ಸಾಧ್ಯವಾಗದಿದ್ದ ಸಂದರ್ಭದಲ್ಲಿ ಹೊಟ್ಟೆ ತುಂಬಿಸಲು ನೈಸರ್ಗಿಕವಾಗಿ ಸಿಗುವಂತಹ ಆಹಾರ ಉತ್ಪನ್ನಗಳನ್ನು ಬಳಸುತ್ತಿದ್ದರು. ತುಳುನಾಡಿನಲ್ಲಿ ಜನಜನಿತ ಆಚರಣೆ ಉಳಿಸಿ, ಬೆಳೆಸುವ ಪ್ರಯತ್ನ ಇದಾಗಿದೆ ಎಂದರು.
ಕಾರ್ಯಕ್ರಮದ ನಂತರ ಮನೆಯಲ್ಲಿ ತಯಾರಿಸಿ ತಂದಿದ್ದ ಆಟಿ ಮಾಸದ ವಿಶೇಷ ಖಾದ್ಯಗಳನ್ನು ಸವಿದರು. ಸಂಘದ ಕಾರ್ಯದರ್ಶಿ ರಾಘವೇಂದ್ರ, ಮಹಿಳಾ ಸಂಘದ ಅಧ್ಯಕ್ಷೆ ವನಜಾ ಭಂಡಾರಿ, ಮುಖಂಡರಾದ ಜಗದೀಶ್ ಭಂಡಾರಿ, ರಾಘವೇಂದ್ರ ಭಂಡಾರಿ, ಕುಸುಮಾವತಿ ಇತರರಿದ್ದರು.