

ಬಾಗಲಕೋಟೆ: ಆಲಮಟ್ಟಿ ಹಿನ್ನೀರಿಗೆ ಮನೆ, ಮಠ ಕಳೆದುಕೊಂಡಿರುವ ಬಾಗಲಕೋಟೆ ಸಂತ್ರಸ್ತರಿಗೆ ಪುನರ್ ವಸತಿ, ಪುನರ್ ನಿರ್ಮಾಣಕ್ಕೆ ಬಿಟಿಡಿಎ ಬದ್ಧವಾಗಿದೆ. ಮೂಲ ಸೌಕರ್ಯ ಒದಗಿಸಲು ಕಂಕಣ ಬದ್ಧರಾಗಿದ್ದೇವೆ ಎಂದು ಬಿಟಿಡಿಎ ಅಧ್ಯಕ್ಷ, ಶಾಸಕ ಎಚ್.ವೈ.ಮೇಟಿ ಹೇಳಿದರು.
ನಗರದ ಬಿಟಿಡಿಎ ಸಭಾಭವನದಲ್ಲಿ ಶುಕ್ರವಾರ ಸಂಜೆ ಸಂತ್ರಸ್ತರಿಗೆ ಹಕ್ಕು ಪತ್ರ ವಿತರಿಸಿ ಮಾತನಾಡಿದ ಅವರು, ಮೂಲ ಸಂತ್ರಸ್ತರಿಗೆ ಮತ್ತು ಬಾಡಿಗೆದಾರಿಗೆ ಹಕ್ಕು ಪತ್ರ ನೀಡುವ ಮೂಲಕ ಹಂತ ಹಂತವಾಗಿ ಪ್ರತಿ ತಿಂಗಳು ಅರ್ಹ ಸಂತ್ರಸ್ತರಿಗೆ ಹಕ್ಕು ಪತ್ರ ವಿತರಿಸಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮುಖ್ಯ ಅಭಿಯಂತರ ಬಸವರಾಜ, ಕಾರ್ಯನಿರ್ವಾಹಕ ಅಭಿಯಂತರ ವಿಜಯಶಂಕರ ಹೆಬ್ಬಳ್ಳಿ, ಎಸ್.ಎಸ್. ಡೊಳ್ಳಿ,ಪುನರ್ವಸತಿ ಅಽಕಾರಿ ಪ್ರಶಾಂತ ಬಾರಿಗಿಡದ ಹಾಗೂ ಮುಖಂಡರಾದ ಹೊಳಬಸ್ಸು ಶೆಟ್ಟರ, ದುಂಡಪ್ಪ ಏಳಮ್ಮಿ, ನಾಗರಾಜ ಹದ್ಲಿ, ದ್ಯಾಮಣ್ಣ ಗಾಳಿ, ಹನುಮಂತ ರಾಕುಂಪಿ, ಚಂದ್ರಶೇಖರ ರಾಠೋಡ ಇತರರು ಇದ್ದರು.