ಸಂತ್ರಸ್ತರ ಸಮಸ್ಯೆ ಇತ್ಯರ್ಥ ಪಡಿಸಿ

bkt-14-5
ನಾರಾಯಣಸಾ ಭಾಂಡಗೆ
Published on

ಬಾಗಲಕೋಟೆ: ಕಾವೇರಿ-೨ ತಂತ್ರಾಂಶ ಅನುಷ್ಠಾನದಿಂದ ಬಾಗಲಕೋಟೆ ಸಂತ್ರಸ್ತರಿಗೆ ತೊಂದರೆ ಆಗಿದ್ದು, ಈ ಕೂಡಲೇ ಸರ್ಕಾರ ಸಮಸ್ಯೆ ಇತ್ಯರ್ಥಕ್ಕೆ ಗಮನ ಹರಿಸಬೇಕು ಎಂದು ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಆಗ್ರಹಿಸಿದರು.

ಈ ಕುರಿತು ಪ್ರಕಟಣೆ ನೀಡಿರುವ ಅವರು, ರಾಜ್ಯದಲ್ಲಿ ನಾಲ್ಕು ಜಿ¯್ಲೆಗಳಲ್ಲಿ ಮೊದಲ ಹಂತದಲ್ಲಿ ಕಾವೇರಿ ತಂತ್ರಾಂಶ-೨ ಇ-ಆಸ್ತಿ ನೋಂದಣಿ ಜÁರಿಗೊಳಿಸಿರುವುದು ಸರಿಯಷ್ಟೇ. ಆದರೆ ಬಾಗಲಕೋಟೆಯ ನವನಗರದಲ್ಲಿನ ಆಸ್ತಿಗಳಿಗೆ ಪಿಐಡಿ ಸಂಖ್ಯೆ ಹಂಚಿಕೆ ಆಗಿರುವುದಿಲ್ಲ ಆಸ್ತಿಗಳಿಗೆ ಖಾತಾ ಕೂಡ ಇರುವುದಿಲ್ಲ. ಆದರೆ ಈಗ ಕಾವೇರಿ-೨ ತಂತ್ರಾಂಶ ಜÁರಿಗೆ ಬಂದಿರುವುದರಿಂದ ಇ-ಆಸ್ತಿ ಕಡ್ಡಾಯಗೊಳಿಸಲಾಗಿದೆï ಆದರೆ ಪಿಐಡಿ ಸಂಖ್ಯೆ ಇಲ್ಲದೆ ನವನಗರದ ನಿವೇಶನಗಳ ನೋಂದಣಿ ಆಗುತ್ತಿಲ್ಲ. ಇದರಿಂದ ಖರೀದಿ ಹಾಗೂ ಮಾರಾಟ ಎರಡೂ ಸ್ಥಗಿತವಾಗಿವೆ.

ಬಾಗಲಕೋಟೆಯ ನವನಗರವು ಸರ್ಕಾರದ ಯೋಜನೆಗಾಗಿಯೇ ನಿರ್ಮಾಣಗೊಂಡಿರುವ ಪುನರ್ವಸತಿ ನಗರವಾಗಿದೆ. ಮೊದಲೇ ಸಂಕಷ್ಟದಲ್ಲಿರುವ ಸಂತ್ರಸ್ತರಿಗೆ ಇದರಿಂದ ತೊಂದರೆ ಆಗುತ್ತಿದೆ. ಹೀಗಾಗಿ ನವನಗರವೂ ಸೇರಿ ಪುನರ್ವಸತಿ ಕೇಂದ್ರಗಳನ್ನು ವಿಶೇಷ ಪ್ರಕರಣ ಎಂದು ಭಾವಿಸಿ ತಂತ್ರಾಂಶದಲ್ಲಿ ನೋಂದಣಿ ಆಗುವ ರೀತಿಯಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡಬೇಕು, ಅಥವಾ ಪಿಐಡಿ ಸಂಖ್ಯೆ ಹಂಚಿಕೆ ಆಗುವವರೆಗೆ ಕಾವೇರಿ-೨ ತಂತ್ರಾಂಶವನ್ನು ತಾತ್ಕಾಲಿಕವಾಗಿ ಕೈಬಿಡಬೇಕೆಂದು ಎಂದು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net