

ಬಾಗಲಕೋಟೆ: ಆಲಮಟ್ಟಿ ಹಿನ್ನೀರಿನಿಂದ ತೊಂದರೆ ಅನುಭವಿಸಿದ್ದ ಬಾಗಲಕೋಟೆ ಸುತ್ತಮುತ್ತಲಿನ ಸಂತ್ರಸ್ತರಿಗೆ ಶಾಸಕರಾದ ಎಚ್ ವೈ ಮೇಟಿ ಆಶಾಕಿರಣವಾಗಿದ್ದರೆ ಎಂದು ಶ್ರೀಮತಿ ರಕ್ಷಿತಾ ಈಟಿ ತಿಳಿಸಿದರು.
ನಗರದ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ಆವರಣದಲ್ಲಿ ಮಾತನಾಡಿದ ಬಾಗಲಕೋಟ್ ಜಿಲ್ಲಾ ಕಾಂಗ್ರೆಸ್ ಮಹಿಳಾ ಅಧ್ಯಕ್ಷರು ಹಾಗೂ ರಾಜ್ಯ ಕೆಪಿಸಿಸಿ ಸದಸ್ಯರಾದ ಶ್ರೀಮತಿ ರಕ್ಷಿತಾ ಭರತ್ ಕುಮಾರ್ ಈಟಿ ಅವರು ರಾಜ್ಯದಲ್ಲಿ 2013 ರಿಂದ 2018 ರವರೆಗೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮಹತ್ತರ ನಿರ್ಣಯ ಕೈಗೊಂಡ ಪರಿಣಾಮವಾಗಿ ಹೆಣ್ಣು ಮಕ್ಕಳಿಗೆ ಅತಿ ಹೆಚ್ಚಿನ ನಿವೇಶನ ಕೊಡಲು ಸಾಧ್ಯವಾಗಿತ್ತು.
ಬಾಡಿಗೆದಾರರಿಗೆ ಬಿ ಮಾದರಿ ನಿವೇಶನಕ್ಕೆ ಚಾಲನೆ ನೀಡಲಾಗಿದ್ದು ಮೂಲ ಸಂತ್ರಸ್ತರಿಗೆ ಹೆಚ್ಚುವರಿ ನಿವೇಶನ ಕೊಡಲು ಸಾಧ್ಯವಾಗಿತ್ತು. ಅಲ್ಲದೆ ಯೂನಿಟ್ -2 ರ ಸಂತ್ರಸ್ತರಿಗೆ 10,000 ನಿವೇಶನ ಸಹ ನೀಡಲಾಗಿತ್ತು. ಮಾದರಿ ನಿವೇಶನವಾದ ಯೂನಿಟ್-3 ನಿರ್ಮಾಣ ಕಾಮಗಾರಿಗೆ ಚಾಲನೆ ಸಿಕ್ಕಿದ್ದು ಸಂಬಂಧಿಸಿದ ಅಧಿಕಾರಿಗಳು ಗುರುತಿಸಿ ಎರಡು ವರ್ಷದಲ್ಲಿ ಪೂರ್ಣಗೊಳಿಸಿ ನಿವೇಶನ ಹಂಚಿಕೆಗೆ ಚಾಲನೆ ನೀಡಬೇಕೆಂದು ಆಗ್ರಹಿಸಿದರು. 1982 ರಲ್ಲಿ ಸ್ಥಾಪನೆಯಾದ ಬಿಟಿಡಿಎ ಬಾಗಲಕೋಟೆ ಜನರ ಆಶಯಕ್ಕೆ ಸಾಕಷ್ಟು ಕೆಲಸ ಮಾಡಿದೆ ಹೀಗಾಗಿ ಬಿಟಿಡಿಎ ಅಂದ್ರೆ ಉಳ್ಳವರ ಪಾಲಿಗೆ ಅರಮನೆ ಆಗಬಾರದೆಂದರು. ನವನಗರಕ್ಕೆ ಸ್ಥಳಾಂತರಗೊಂಡ ಜನರ ಸ್ಥಿತಿಗತಿ ಅರಿಯಲು ಬಿಟಿಡಿಎ ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕ, ಆರ್ಥಿಕ ಸಮೀಕ್ಷೆ ನಡೆಸಿ ಜನರ ಆಶಾಕಿರಣ ಕೇಂದ್ರವಾಗಬೇಕೆಂದರು.
ಬಾಗಲಕೋಟೆ ಹಾಗೂ ಸುತ್ತಮುತ್ತಲಿನ ಸಂತ್ರಸ್ತರಿಗೆ ಮೂಲಸೌಕರ್ಯ ಒದಗಿಸುವ ಪ್ರಾಮಾಣಿಕ ಕೆಲಸವನ್ನು ಅಧಿಕಾರಿಗಳು ಮಾಡಬೇಕೆಂದರು. ಎರಡನೇ ಬಾರಿಗೆ ಬಿಟಿಡಿಎ ಅಧ್ಯಕ್ಷರಾಗಿರುವ ಹಾಗೂ ಬಾಗಲಕೋಟೆ ಶಾಸಕರಾಗಿರುವ ಎಚ್ ವೈ ಮೇಟಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಏಕೆಂದರೆ ಬದುಕಿ ಬಾಳಿದ ಮನೆ, ಮಠ, ಶಾಲೆಗಳನ್ನು ಬಿಟ್ಟು ಜನರು ಬೀದಿಗೆ ಬಂದಾಗ ಜೊತೆ ನಿಂತು ಶಾಸಕರು ಶ್ರಮಿಸಿದ್ದಾರೆ ಎಂದರು.
ನಮ್ಮ ಹಿರಿಯರೇ ಇದೀಗ ಬಾಗಲಕೋಟ ಬಿಟಿಡಿಎ ಅಧ್ಯಕ್ಷರಾಗಿರುವುದು ಖುಷಿಯ ವಿಚಾರ ಜೊತೆಗೆ 2017ರಲ್ಲಿ ಪರಿಹಾರ ಧನ ಪಡೆದ ಸಂತ್ರಸ್ತರಿಗೆ ನಿವೇಶನ ನೀಡುವ ಕಾರ್ಯವನ್ನು ಶೀಘ್ರವಾಗಿ ಆರಂಭಿಸಿ ಸಮಸ್ತ ಬಾಗಲಕೋಟೆಯ ಎಲ್ಲ ಸಂತ್ರಸ್ತರ ಬದುಕಿಗೆ ಸಂತಸ ತರುವ ಕೆಲಸವಾಗಬೇಕೆಂದು ತಿಳಿಸಿದರು.