

ಕಲಬುರಗಿ: ೨೦೨೨ನೇ ಸಾಲಿನ ಗೃಹರಕ್ಷಕ ಹಾಗೂ ಪೌರರಕ್ಷಣಾ ಸ್ವಯಂ ಸೇವಕ/ಅಧಿಕಾರಿಗಳಿಗೆ ಕೊಡಮಾಡುವ ಮುಖ್ಯಮಂತ್ರಿಗಳ ಚಿನ್ನದ ಪದಕವನ್ನು ಪಡೆದ ಕಲಬುರಗಿ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಸಂತೋಷ್ ಕುಮಾರ್ ಪಾಟೀಲ್ ಅವರಿಗೆ ರಾಜ್ಯದ ಗೃಹ ಸಚಿವರಾದ ಜಿ.ಪರಮೇಶ್ವರ ಅವರು ಬೆಂಗಳೂರಿನ ಗೃಹರಕ್ಷಕ ಹಾಗೂ ಪೌರರಕ್ಷಣಾ ಮತ್ತು ಅಗ್ನಿ ಶಾಮಕ ಕ್ರೀಡಾಂಗಣದಲ್ಲಿ ಶುಕ್ರವಾರ ಚಿನ್ನದ ಪದಕ ನೀಡಿ ಗೌರವಿಸಿದರು.
ಅಗ್ನಿಶಾಮಕ ದಳದ ಎ.ಡಿ.ಜಿ.ಪಿ. ಹರಿಶೇಖರನ್, ಗೃಹರಕ್ಷಳ ದಳದ ಡಿ.ಜಿ. ಕಮಲಪಂತ ಹಾಗೂ ಎ.ಡಿ.ಜಿ.ಪಿ. ಎಮ್.ಎನ್.ನಂಜುಂಡಸ್ವಾಮಿ, ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್. ರವಿಕುಮಾರ ಅವರು ಉಪಸ್ಥಿತರಿದ್ದರು