ಸಂಘಟನೆ ಗಟ್ಟಿಗೊಂಡಷ್ಟು ಬೆಳವಣಿಗೆ ಸಾಧ್ಯ

bkt-4-4
ಬಾಗಲಕೋಟೆಯ ನವನಗರದ ನೀಲಕಂಠೇಶ್ವರ ಸಾಂಸ್ಕೃತಿಕ ಭವನದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಬಾಗಲಕೋಟೆ ಜಿಲ್ಲಾ ಕುರುಹಿನಶೆಟ್ಟಿ ನೇಕಾರ ಸಮಾಜ ಅಭಿವೃದ್ಧಿ ಸಂಘದ ಪದಾಽಕಾರಿಗಳಿಗೆ ಸೇವಾ ದೀಕ್ಷಾ ಸಮಾರಂಭವನ್ನು ಹುಬ್ಬಳ್ಳಿ ನೀಲಕಂಠೇಶ್ವರ ವೀರಭೀಕ್ಷಾವರ್ತಿ ಮಠದ ಪೀಠಾಧಿಪತಿ ಶಿವಶಂಕರ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು.
Published on

ಬಾಗಲಕೋಟೆ: ಸಮಾಜ ಸಂಘಟನೆಯಾಗಬೇಕು. ಸಮಾಜ ಸೇವೆ ಮಾಡುವವರಿಗೆ ಪ್ರೋತ್ಸಾಹ ನೀಡಬೇಕು. ಆದರೆ ಅವರನ್ನು ಹಿಂದೆ ಜಗ್ಗುವ ಕೆಲಸ ಮಾಡಬಾರದು ಎಂದು ಹುಬ್ಬಳ್ಳಿ ನೀಲಕಂಠೇಶ್ವರ ವೀರಭೀಕ್ಷಾವರ್ತಿ ಮಠದ ಪೀಠಾಽಪತಿ ಶಿವಶಂಕರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನವನಗರದ ನೀಲಕಂಠೇಶ್ವರ ಸಾಂಸ್ಕೃತಿಕ ಭವನದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಬಾಗಲಕೋಟೆ ಜಿಲ್ಲಾ ಕುರುಹಿನಶೆಟ್ಟಿ ನೇಕಾರ ಸಮಾಜ ಅಭಿವೃದ್ಧಿ ಸಂಘದ ಪದಾಧಿಕಾರಿಗಳಿಗೆ ಸೇವಾ ದೀಕ್ಷಾ ಸಮಾರಂಭದಲ್ಲಿ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಸಮಾಜ ಬೆಳೆದರೆ ವ್ಯಕ್ತಿ ಬೆಳೆಯುತ್ತಾನೆ. ಸಮಾಜ ಪ್ರಬಲವಾದಷ್ಟು ನಾವು ರಾಜಕೀಯ, ಸಾಮಾಜಿಕ, ಆರ್ಥಿಕವಾಗಿ ಬೆಳೆಯಲು ಸಾಧ್ಯ. ಸಮಾಜಕ್ಕೆ ಪ್ರತಿಯೊಬ್ಬರು ಕೊಡುಗೆ ನೀಡಬೇಕು. ನಿತ್ಯದ ಕೆಲಸದ ಜೊತೆಗೆ ಸಮಾಜಕ್ಕೂ ಸಮಯ ಮೀಸಲಿಡಬೇಕು ಎಂದು ಹೇಳಿದರು.

ಜಿಲ್ಲಾ ಕುರುಹಿನಶೆಟ್ಟಿ ನೇಕಾರ ಸಮಾಜ ಅಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಸಿದ್ದಣ್ಣ ಹಲಕಾಟಿ ಮಾತನಾಡಿ, ಜಿಲ್ಲೆಯ ಕುರುಹಿನಶೆಟ್ಟಿ ಸಮಾಜ ಬಾಂಧವರನ್ನು ಒಗ್ಗೂಡಿಸಲು ಸರಿಯಾದ ಸಂಘಟನೆ ಇರಲಿಲ್ಲ. ಆದರೆ ಈಗ ಜಿಲ್ಲೆಯ ಸಮಾಜದ ಎಲ್ಲರೂ ಕೂಡಿ ಶ್ರೀಗಳ ನೇತೃತ್ವದಲ್ಲಿ ಸಮಾಜ ಸಂಘಟನೆಗೆ ಸಂಘ ರಚನೆ ಮಾಡಿದ್ದು, ಎಲ್ಲರ ಸಹಾಯ ಸಹಕಾರ ಅವಶ್ಯವಾಗಿಬೇಕು ಎಂದು ತಿಳಿಸಿದರು.
ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಡೀನ್ ಡಾ.ಚಿದಾನಂದ ಮನ್ಸೂರ, ಡಾ.ಬಿ.ಎಸ್.ಮರೇಗುದ್ದಿ, ಸಂಘದ ಪ್ರಧಾನ ಕಾರ್ಯದರ್ಶಿ ಈರಣ್ಣ ಎಸ್.ಯಂಡಿಗೇರಿ ಮಾಜಿ ಶಾಸಕ ಮಲ್ಲಿಕಾರ್ಜುನ ಬನ್ನಿ, ಮುರಿಗೆಪ್ಪ ಬನ್ನಿ, ಎಂ.ಪಿ.ಶಿವಕುಮಾರ, ಮಲ್ಲಿಕಾರ್ಜುನ ಹಂಡಿ ಡಾ.ಎಂ.ಎಸ್.ದಡ್ಡೆನ್ನವರ, ಅಮರೇಶ ಕೊಳ್ಳಿ, ಮಲ್ಲಿಕಾರ್ಜುನ ರೋಣದ ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net