ಸಂಗೀತ ಸಂಜೆ ೪ರಂದು

Kishorekumar
Published on

ಕಲಬುರಗಿ: ಹಿಂದಿ ಚಿತ್ರರಂಗದ ಖ್ಯಾತ ಹಿನ್ನಲೆ ಗಾಯಕ ಮತ್ತು ನಟ ಕಿಶೋರ ಕುಮಾರ ೯೫ನೇ ಜನ್ಮ ದಿನಾಚರಣೆ ಅಗಸ್ಟ್ ೪ ರಂದು ಸಂಜೆ ೬ಕ್ಕೆ ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದ ಬಳಿಯ ಕನ್ನಡ ಭವನದಲ್ಲಿ ಕಲಾಕಾರ ತಂಡದ ಕಲಾವಿದರಿಂದ ಸಂಗೀತ ಸಂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಗಾಯಕರಾದ ಚಾಂದ್ ಜಾಕ್ಸನ್, ವಿಠಲï ಮೇತ್ರೆ, ರಾಜೇಶ ರಾಂಪೂರೆ, ಚಂದ್ರಶೇಖರ ರೆಡ್ಡಿ, ರಾಜು ರೆಡ್ಡಿ, ಝಮೀರ್ ಅಹ್ಮದ್, ಮಹಾಲಿಂಗ ಸುಂಕದ, ಮಹಾದೇವ ಅಸ್ಟಗಿ, ರಾಜು ಕೋಬಾಳ, ಪಾರ್ವತಿ ಉರ್ಕಿಮಠ, ಶೈಲಜ ಬಗ್ಗಲ್, ಡಾ.ಶಶಿರೇಖಾ ಕಿಶೋರ ಕುಮಾರ ಹಾಡು ಹಾಡುವ ಮೂಲಕ ಸಂಗೀತ ಸಂಜೆ ನಡೆಸಿಕೊಡುವರು. ಸಾರ್ವಜನಿಕರು ತಮ್ಮ ಕುಟುಂಬ ಮತ್ತು ಗೆಳೆಯರೊಂದಿಗೆ ಆಗಮಿಸಿ ಸಂಗೀತದ ಆನಂದ ಸವಿಯಲು ಕಲಾಕಾರ ತಂಡದ ಪ್ರಮುಖ ಚಾಂದ ಅಕ್ತರ್ ಪ್ರಕಟಣೆಯಲ್ಲಿ ತಿಳಿಸಿz್ದÁರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net