

ಬಾಗಲಕೋಟೆ ಗೆಳೆಯರ ಬಳಗದ ವತಿಯಿಂದ ನೀರಲಕೇರಿ ಗ್ರಾಮದ ಡಾ.ಎಚ್.ಎ-ï.ಯೋಗಪ್ಪನವರ ತೋಟದಲ್ಲಿ ಸಂಗೀತ ಸಂಕ್ರಾಂತಿ ಕಾರ್ಯಕ್ರಮ ಸಂಭ್ರಮದಿಂದ ಜರುಗಿತು.
ಸಂಗೀತ ಗಾಯಕ ಶಿವಕುಮಾರ ಪಂಚಾಳ, ಸಂಗಮೇಶ ಹೂಗಾರ ನೇತೃತ್ವದ ತಂಡ ಭಾವಗೀತೆ, ಜನಪದ ಗೀತೆ, ವಚನ ಗೀತೆ ಮೂಲಕ ಸಂಗೀತ ರಸದೌತಣ ಉಣಬಡಿಸಿತು. ಸಜ್ಜಿರೊಟ್ಟಿ, ಕೆಂಪ ಚಟ್ನಿ, ಶೇಂಗಾ ಹೋಳಿಗೆ, ಬದನೆಕಾಯಿ ಪ¯್ಲೆ ಸೇರಿದಂತೆ ಜವಾರಿ ಖ್ಯಾದ್ಯಗಳ ಉಣಬಡಿಸಲಾಯಿತು.
ಸಂಸದ ಪಿ.ಸಿ.ಗದ್ದಿಗೌಡರ, ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ಎ.ಎಸ್.ಪಾವಟೆ, ಡಾ.ಆರ್.ಟಿ.ಪಾಟೀಲ, ಗೆಳೆಯರ ಬಳಗದ ಅಧ್ಯಕ್ಷ ಎಂ.ಎಂ.ಹಂಡಿ, ಉಪಾಧ್ಯಕ್ಷ ಎಂ.ಎಸ್.ಗುಡಗುಂಟಿ, ಕಾರ್ಯದರ್ಶಿ ವಿ.ಎಂ.ಯಡಹಳ್ಳಿ, ಸಹ ಕಾರ್ಯದರ್ಶಿ ಎಂ.ಎನ್.ದರಬಾರ, ಕೋಶಾಧ್ಯಕ್ಷ ಎಚ್.ಬಿ.ತೋಟದ ಸೇರಿದಂತೆ ಇತರರು ಇದ್ದರು.