ಸಂಗೀತ ನಿರ್ದೇಶಕ ರವಿ ಬಸರೂರಗೆ ಸಿದ್ದಶ್ರೀ ರಾಷ್ಟ್ರೀಯ ಪ್ರಶಸ್ತಿ

bkt-03-11-a
ರವಿ ಬಸರೂರ
Published on

ಬಾಗಲಕೋಟೆ: ಜ. ೧೪ ಹಾಗೂ ೧೫ ರಂದು ಇಳಕಲ್ಲ ತಾಲೂಕಿನ ಸಿದ್ದನಕೊಳ್ಳದಲ್ಲಿ ನಡೆಯುವ ಸಿದ್ದಪ್ಪಜ್ಜನ ಜಾತ್ರಾ ಮಹೋತ್ಸವದ ಅಂಗವಾಗಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಹಾಗೂ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ ಕಾರ್ಯಕ್ರಮ ನಡೆಯಲಿದೆ.

ಜಾತ್ರೆಯ ವೇಳೆ ಪ್ರದಾನ ಮಾಡುವ ಸಿದ್ದಶ್ರೀ ರಾಷ್ಟ್ರೀಯ ಪ್ರಶಸ್ತಿಗೆ ಖ್ಯಾತ ಸಂಗೀತ ನಿರ್ದೇಶಕ ರವಿ ಬಸರೂರ ಅವರಿಗೆ ಹಾಗೂ ಸಿದ್ದಶ್ರೀ ರಾಜ್ಯ ಪ್ರಶಸ್ತಿಯನ್ನು ಚಿತ್ರ ಸಾಹಿತಿ ಕೊಪ್ಪಳ ಜಿಲ್ಲೆಯ ರಾಜು ಕಿನ್ನಾಳ ಅವರಿಗೆ ಪ್ರದಾನ ಮಾಡಲಾಗುವುದು ಎಂದು ಸಿದ್ದನಕೊಳ್ಳ ಮಠದ ಧರ್ಮದರ್ಶಿ ಡಾ.ಶಿವಕುಮಾರ ಸ್ವಾಮೀಜಿ ಪ್ರಕಟಿಸಿದರು.

ಸಿದ್ದನಕೊಳ್ಳ ಮಠದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸ್ವಾಮೀಜಿ, ಜ. ೧೪ ರಂದು ನಡೆಯುವ ಸಿದ್ದನಕೊಳ್ಳ ಜಾತ್ರೆಯ ರಥೋತ್ಸವದ ಬಳಿಕ ನಡೆಯುವ ವೇದಿಕೆ ಕಾರ್ಯಕ್ರಮವಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ರಾಷ್ಟಿçÃಯ ಪ್ರಶಸ್ತಿಯೂ ೫೦ ಸಾವಿರ ರೂ. ನಗದು ಹಾಗೂ ಪಾರಿತೋಷಕ ಒಳಗೊಂಡಿದ್ದು, ರಾಜ್ಯ ಪ್ರಶಸ್ತಿಯೂ ೨೫ ಸಾವಿರ ರೂ. ನಗದು ಹಾಗೂ ಪಾರಿತೋಷಕ ಇರುತ್ತದೆ. ಅಂದು ಕೇಂದ್ರ ಸಚಿವ ವಿ.ಸೋಮಣ್ಣ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದರು.

ಇದೇ ವೇಳೆ ಕಲಬುರಗಿಯ ಕೆ. ಸುನಂದ ಹಾಗೂ ಅಗ್ರಿಕಲ್ಚರ್ ಆಫೀಸರ್ ಎನ್ನುವ ಶಾರ್ಟ್ ಫಿಲ್ಮ್ ತೆಗೆದಿರುವ ಮಲ್ಲು ಬಾಗಲಕೋಟೆ ಅವರಿಗೆ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಸ್ವಾಮೀಜಿ ಹೇಳಿದರು.

ಸಿದ್ದನಕೊಳ್ಳ ಕ್ಷೇತ್ರವೂ ಕಲಾವಿದರ ಪೋಷಕ ಮಠ ಎಂದು ಖ್ಯಾತಿ ಪಡೆದಿದೆ. ಹೀಗಾಗಿ ಪ್ರತಿ ವರ್ಷ ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ಕಲಾವಿದರನ್ನು ಗೌರವಿಸಿ, ಪ್ರಶಸ್ತಿ ಪ್ರದಾನ ಮಾಡುತ್ತ ಬರಲಾಗಿದೆ. ಜ. ೧೫ ರಂದು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ ಶ್ರೀಕ್ಷೇತ್ರದಲ್ಲಿ ನಡೆಯಲಿದೆ ಎಂದರು.

ಎರಡು ದಿನ ನಡೆಯುವ ಜಾತ್ರೆ ಹಾಗೂ ಪ್ರಶಸ್ತಿ ಪ್ರದಾನ ಮತ್ತು ಚಲನಚಿತ್ರೋತ್ಸವಕ್ಕೆ ಶ್ರೀಮಠದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಹೇಳಿದ ಸ್ವಾಮೀಜಿ, ಜ. ೧೪ ರಂದು ನಡೆಯುವ ರಥೋತ್ಸವಕ್ಕೆ ಬೆಂಗಳೂರನ ಡಾ.ಆರ್.ಎಸ್.ರಾಜು ಅವರು ಹೆಲಿಕ್ಯಾಪ್ಟರ್ ಮೂಲಕ ರಥಕ್ಕೆ ಪುಷ್ಪಗೈಯುವರು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಡಾ.ಪ್ರಭು ಗಂಜಿಹಾಳ, ಸಂಗಣ್ಣ ತುರಡಗಿ, ಸಂಗಮೇಶ ಹುದ್ದಾರ, ಹುಲ್ಲಪ್ಪ ಹಳ್ಳೂರ, ಹನಮಂತ ಬಂಡಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net