ಷರತ್ತು ಬದ್ಧ ಕ್ರಯ ಪತ್ರವೆಂದು ಬದಲಾಯಿಸಿ

bkt-11-11
ಮುಳುಗಡೆ ಸಂತ್ರಸ್ತರಿಗೆ ಈ ವರೆಗೂ ಗುತ್ತಿಗೆ ಹಾಗೂ ಕ್ರಯ ಪತ್ರ ಎಂದು ನಿವೇಶನ ಹಂಚಿಕೆ ನಿಯಮವನ್ನು ಷರತ್ತು ಬದ್ಧ ಕ್ರಯ ಪತ್ರ ಎಂದು ನಿಯಮ ತಿದ್ದುಪಡಿ ಮಾಡುವಂತೆ ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಬಾಗಲಕೋಟೆ ಶಾಸಕ, ಬಿಟಿಡಿಎ ಅಧ್ಯಕ್ಷ ಎಚ್.ವೈ.ಮೇಟಿ ಸಮಸ್ಯೆ ಬಗ್ಗೆ ಬೆಳಕು ಚಲ್ಲಿ ಮನವಿ ಸಲ್ಲಿಸಿದರು. ಹೊಳಬಸು ಶೆಟ್ಟರ ಇದ್ದರು.
Published on

ಬಾಗಲಕೋಟೆ: ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಽಕಾರದಿಂದ ಮುಳುಗಡೆ ಸಂತ್ರಸ್ತರಿಗೆ ಈ ವರೆಗೂ `ಗುತ್ತಿಗೆ ಹಾಗೂ ಕ್ರಯ ಪತ್ರ' ಆಧಾರದ ಹಂಚಿಕೆ ಮಾಡುತ್ತ ಬಂದಿದ್ದ ನಿಯಮಕ್ಕೆ ತಿದ್ದುಪಡಿ ತಂದು ಅದನ್ನು `ಷರತ್ತು ಬದ್ಧ ಕ್ರಯ ಪತ್ರ' ಎಂದು ಮಾಡಬೇಕು ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರನ್ನು ಗುರುವಾರ ಬಾಗಲಕೋಟೆ ಶಾಸಕ, ಬಿಟಿಡಿಎ ಅಧ್ಯಕ್ಷ ಎಚ್.ವೈ.ಮೇಟಿ ಭೇಟಿ ಮಾಡಿ ಮನವಿ ಪತ್ರವನ್ನು ನೀಡಿದ್ದಾರೆ.

ಈ ವರೆಗೂ ಸಂತ್ರಸ್ತರಿಗೆ `ಗುತ್ತಿಗೆ ಹಾಗೂ ಕ್ರಯ ಪತ್ರ' ನೀಡಲಾಗುತ್ತಿತ್ತು. ಅದನ್ನು ಕಾವೇರಿ ೨.೦ ತಂತ್ರಾAಶದಲ್ಲಿ ನೋಂದಣಿ ಮಾಡಿದಾಗ ಉತಾರದಲ್ಲಿ ಮಾಲೀಕರ ಖಾಲಂನಲ್ಲಿ ಮುಖ್ಯ ಇಂಜನೀಯರ್‌ರು ಬಿಟಿಡಿಎ ಎಂದು ದಾಖಲಾಗುತ್ತದೆ. ಅನುಭೋಗದಾರರ ಕಾಲಂನಲ್ಲಿ ಸಂತ್ರಸ್ತರ ಹೆಸರು ನಮೂದಾಗುತ್ತಿದೆ. ಅದರಂತೆ ಮಾಡಿದಲ್ಲಿ ೧೦ ವರ್ಷ ಅವಽ ಮುಗಿದ ಮೇಲೆ ಸಂತ್ರಸ್ತರಿಗೆ `ಶುದ್ಧ ಕ್ರಯ ಪತ್ರ' ನೋಂದಣಿ ಮಾಡಿಸಬೇಕಾಗುತ್ತದೆ. ಇದರಿಂದ ದಿನಂಪ್ರತಿ ಮುಳುಗಡೆ ಸಂತ್ರಸ್ತರು ಹಾಗೂ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ ಎಂದು ಮೇಟಿ ಅವರು ಮುಖ್ಯ ಕಾರ್ಯದರ್ಶಿಗಳಿಗೆ ತಿಳಿಸಿದ್ದಾರೆ.

ಈ ಸಮಸ್ಯೆ ಬಗ್ಗೆ ಹಿರಿಯ ಉಪ ನೋಂದಣಿ ಅಽಕಾರಿಗಳ ಜೊತೆ ಚರ್ಚಿಸಿದಾಗ ಕೆಐಡಿಬಿ ಮಾದರಿಯಲ್ಲಿ `ಷರತ್ತು ಬದ್ಧ ಕ್ರಯ ಪತ್ರ' ಎಂದು ಮಾರ್ಪಡಿಸಿದಲ್ಲಿ ಮಾಲೀಕರ ಕಾಲಂನಲ್ಲಿ ಸಂತ್ರಸ್ತರ ಹೆಸರು ದಾಖಲಾಗುತ್ತದೆ. ಋಣಗಳ ಕಾಲಂನಲ್ಲಿ ಬಿಟಿಡಿಎ ಷರತ್ತುಗಳನ್ನು ನಮೂದಿಸಬಹುದಾಗಿದೆ ಎಂದು ತಿಳಿಸಿದ್ದಾರೆ.

ಸದ್ಯ ಬಿಟಿಡಿಎ ಆಸ್ತಿಗಳಿಗೆ ಇ-ಆಸ್ತಿ ಸೃಜಿಸಲು ಸಿಟಿಜನ್ ಲಾಗಿನ್ ಇಲ್ಲದೇ ಇರುವುದರಿಂದ ಸಂತ್ರಸ್ತರು ಹಾಗೂ ಸಾರ್ವಜನಿಕರಿಗೆ ಅರ್ಜಿ ಸಲ್ಲಿಸಲು ಅವಕಾಶ ಇಲ್ಲದಂತಾಗಿದೆ. ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಽಕಾರದಿಂದ ನಿರ್ಮಾಣ ಮಾಡಿರುವ ಯುನಿಟ್-೧ ಹಾಗೂ ಯುನಿಟ್-೨ರ ಒಟ್ಟು ಆಸ್ತಿಗಳು ಅಂದಾಜು ೩೩೦೦೦ ಇರುತ್ತವೆ. ಇವುಗಳಿಗೆ ಇ-ಆಸ್ತಿ ಕಡ್ಡಾಯವಾಗಿರುವುದರಿಂದ ಸಿಟಿಜನ್ ಲಾಗಿನ್ ಅತಿ ಅವಶ್ಯಕವಾಗಿದೆ.

ಈ ಅವಕಾಶವನ್ನು ಮಾಡಿಕೊಟ್ಟಲ್ಲಿ ಬಿಟಿಡಿಎ ಆಸ್ತಿಗಳನ್ನು ಇ-ಆಸ್ತಿ ಸೃಜಿಸಲು ಸಾಧ್ಯವಾಗುತ್ತದೆ. ಇದರಿಂದ ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸಬಹುದಾಗಿದೆ. ಈ ಹಿನ್ನಲೆಯಲ್ಲಿ ಕೂಡಲೆ ಬಾಗಲಕೋಟೆ ಮುಳುಗಡೆ ಸಂತ್ರಸ್ತರಿಗೆ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಇದೊಂದು ವಿಶೇಷ ಪ್ರಕರಣ ಎಂದು ಪರಿಗಣಿಸಿ ಅನುಕೂಲ ಮಾಡಿಕೊಡಲು ಸಂಬAಽಸಿದವರಿಗೆ ಆದೇಶಿಸುವಂತೆ ಎಚ್.ವೈ.ಮೇಟಿ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿಗಳನ್ನು ಕೋರಿದ್ದಾರೆ.

ಈ ವೇಳೆ ಕಾಂಗ್ರೆಸ್ ಮುಖಂಡ ಹೊಳಬಸು ಶೆಟ್ಟರ ಮುಳುಗಡೆ ಸಂತ್ರಸ್ತರಿಗೆ ಆಗುತ್ತಿರುವ ತೊಂದರೆಗಳು ಹಾಗೂ ಅದನ್ನು ನಿವಾರಿಸಲು ತುರ್ತಾಗಿ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net