ಶ್ರೀಶೈಲದಲ್ಲಿ ಬಸವ ನಾಡಿನ ಬೃಹತ್ ದಾಸೋಹ

0e3b3c15-ce05-4c73-b066-67fb68d06c28
Published on

ವಿಜಯಪುರ-ಬಾಗಲಕೋಟೆ: ಯುಗಾದಿ ಹಬ್ಬದ ಅಂಗವಾಗಿ ಆಂಧ್ರಪ್ರದೇಶದ ಶ್ರೀಶೈಲಂ ಮಲ್ಲಿಕಾರ್ಜುನ ಜಾತ್ರೆಯ ಸಂಭ್ರಮ ಮುಗಿಲು ಮುಟ್ಟಿದ್ದು, ಬಸವ ನಾಡಿನ ವಿಜಯಪುರ, ಬಾಗಲಕೋಟೆ ಜಿಲ್ಲೆಯ ಸಾವಿರಾರು ಭಕ್ತರ ದಂಡ ಅಲ್ಲಿ ನೆಲೆಸಿದೆ.

ದೇವರ ಕೃಪೆಗೆ ಪಾತ್ರರಾಗಲು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯ ಶ್ರೀಶೈಲ ಮಲ್ಲಿಕಾರ್ಜುನ ವಿವಿದ್ದೋದ್ದೇಶಗಳ ಸೇವಾ ಸಂಸ್ಥೆ, ಶ್ರೀಶೈಲ ಭಕ್ತರ ಸಮಿತಿ ಜಾತ್ರೆಗೆ ಆಗಮಿಸುವ ಸಾವಿರಾರು ಜನರಿಗೆ ಪ್ರಸಾದ ಒದಗಿಸುತ್ತಿದೆ. ನಿತ್ಯವು 5 ಸಾವಿರ ಜನರಿಗೆ ಅನ್ನ ಸಂತರ್ಪಣೆ ಏರ್ಪಡಿಸಿ ದಾಸೋಹ ಪರಂಪರೆ ಸಾಕ್ಷಿಕರಿಸುತ್ತಿದೆ.

ಇದು ಜಾತ್ರೆಯಲ್ಲಿನ ಬೃಹತ್ ಅನ್ನ ದಾಸೋಹ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಲ್ಲದೇ ನಿತ್ಯ ದಾಸೋಹದಲ್ಲಿ ವಿಭಿನ್ನವಾದ, ರುಚಿಕರ ಸಿಹಿ ತಿಂಡಿ, ತಿನಿಸು, ಉತ್ತರ ಕರ್ನಾಟಕದ ಜವಾರಿ ಊಟ ಉಣಬಡಿಸಿ ಮಲ್ಲಿಕಾರ್ಜುನ ಕೃಪೆಗೆ ಪಾತ್ರರಾಗಿದ್ದಾರೆ.

ಸದಪ್ಪ ದಾದಪ್ಪ, ಅರಕೇರಿ, ಕುಮಾರಗೌಡ. ಬ. ಪಾಟೀಲ, ಗಿರೇಶ. ಸ. ಹಾರಿವಾಳ, ಬಾಬು. ಬ. ಕುಂಟೋಜಿ, ವೀರಗಂಗಾಧರ. ಗು. ಕಾಳಹಸ್ತೇಶ್ವರಮಠ, ಗುರಸಂಗಯ್ಯ. ಮ. ಮಠಪತಿ, ಪವಾಡೆಪ್ಪ. ಸಿ. ಕೊಂಡಗೂಳಿ, ಮಹೇಶ. ಚ. ನಿಡಗುಂದಿ, ಬಸಪ್ಪ. ಜ. ಏವೂರ, ರಮೇಶ. ಸಿ. ಉಕ್ಕಲಿ, ಸಿದ್ಧಲಿಂಗಪ್ಪ, ಶಂ. ಹಾರಿವಾಳ, ಅಶೋಕ ಅಗರವಾಲ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net