ಶ್ರೀಶಂಭುಲಿಂಗೇಶ್ವರ ಶಾಲೆಯಲ್ಲಿ ಸಂಕ್ರಾಂತಿ ಆಚರಣೆ

IMG_20250113_140726
Published on

ಗಂಡಸಿ: ಇಲ್ಲಿನ ಶ್ರೀಶಂಭುಲಿಂಗೇಶ್ವರ ಆಂಗ್ಲ ಮಾಧ್ಯಮ ಶಾಲೆ, (ಬಿಜಿಎಸ್) ಆವರಣದಲ್ಲಿ ಸೋಮವಾರ ಮಕರ ಸಂಕ್ರಾಂತಿ ಹಬ್ಬವನ್ನು ಶಾಲಾ ಮಕ್ಕಳು, ಶಿಕ್ಷಕರು ಜತೆಗೂಡಿ ಹೊಸ ಬಟ್ಟೆಗಳನ್ನು ಧರಿಸಿ, ಸಿರಿ ಧಾನ್ಯಗಳ ರಾಶಿಗೆ ಪೂಜೆ ಸಲ್ಲಿಸುವುದರೊಂದಿಗೆ ಆಚರಿಸಿದರು.

ವಿದ್ಯಾರ್ಥಿಗಳಿಗೆ ಎಳ್ಳು-ಬೆಲ್ಲ ವಿತರಿಸಲಾಯಿತು. ನಂತರ ಮಕ್ಕಳಿಂದ ಸಂಕ್ರಾಂತಿ ಸೊಗಡಿನ ಜನಪದ ಗೀತೆ, ಭಕ್ತಿಗೀತೆ, ಸುಗ್ಗಿ ಕುಣಿತದ ವೇಷ-ಭೂಷಣಗಳನ್ನು ತೊಟ್ಟು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ಮುಖ್ಯ ಶಿಕ್ಷಕಿ ಆಶಾರಾಣಿ ಮಾತನಾಡಿ, ಹಿಂದುಗಳಿಗೆ ಮಕರ ಸಂಕ್ರಾಂತಿಯೇ ವರ್ಷದ ಮೊದಲ ಹಬ್ಬ. ಸಂಕ್ರಾಂತಿ ಹಬ್ಬವನ್ನು ದೇಶದ ಎಲ್ಲ ರಾಜ್ಯಗಳಲ್ಲೂ ಆಚರಿಸಲಾಗುತ್ತದೆ.

ಪ್ರತಿಯೊಂದು ಮನೆಯಲ್ಲೂ ಸಿಹಿ ತಿನಿಸುಗಳನ್ನು ತಯಾರಿಸಿ ಕುಟುಂಬದ ಎಲ್ಲ ಸದಸ್ಯರು ಒಟ್ಟಿಗೆ ಊಟ ಮಾಡಿ ನಂತರ ಹೆಣ್ಣು ಮಕ್ಕಳು ಹೊಸ ಬಟ್ಟೆ ತೊಟ್ಟು ಮನೆಮನೆಗಳಿಗೆ ಎಳ್ಳು-ಬೆಲ್ಲ ಹಂಚುವುದು ವಿಶೇಷ ಮಕರ ರಾಶಿ ಪ್ರವೇಶಿಸಿ ಸೂರ್ಯನ ವಿಶೇಷವಾದ ಬೆಳಕನ್ನು ಚೆಲ್ಲುವುದನ್ನು ನೋಡುವುದೇ ಮಕರ ಸಂಕ್ರಾಂತಿ ಹಬ್ಬದ ವಿಶೇಷತೆ ಎಂದರು.

ಶಾಲಾ ಶಿಕ್ಷಕರಾದ ಶ್ವೇತಾ, ಧನುಷ, ಪರ್ವೀನ್, ಮಮತಾ, ಶಾಲಿನಿ, ಸಾನಿಯಾ, ಪವಿತ್ರಾ, ಪೂರ್ಣಿಮಾ, ಗೌರಮ್ಮ, ಪುಣ್ಯ ಶಿವಕುಮಾರ್, ತಮ್ಮೇಗೌಡ, ಚಂದನ್ ಇತರರು ಭಾಗವಹಿಸಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net