ಶ್ರೀರಂಗಪಟ್ಟಣದಲ್ಲಿ ಪವಿತ್ರ ಗಂಧದ ಮೆರವಣಿಗೆ

20230618_155202
Published on

ಶ್ರೀರಂಗಪಟ್ಟಣ: ಹಜರತ್ ಟಿಪ್ಪು ಸುಲ್ತಾನ್ 231ನೇ ಉರುಸ್ ಪ್ರಯುಕ್ತ ಪಟ್ಟಣದಲ್ಲಿ ಭಾನುವಾರ ಪವಿತ್ರ ಗಂಧದ ಮೆರವಣಿಗೆ ನಡೆಯಿತು.


ಐತಿಹಾಸಿಕ ಜಾಮಿಯಾ ಮಸೀದಿ(ಮಸ್ಜೀದ್-ಎ-ಆಲಾ)ಯಲ್ಲಿ ಮುಸ್ಲಿಂ ಧರ್ಮ ಗುರುಗಳು ಇಸ್ಲಾಂ ಧರ್ಮದ ಸಂಪ್ರದಾಯದಂತೆ ಪೂಜಾ ಆಚರಣೆ ನಡೆಸಿ ಬಳಿಕ ಸುಗಂಧ ಬೀರುವ ಗಂಧಗಳಿರುವ ಕಳಸಗಳಿಗೆ ಹೂವಿನ ಅಲಂಕಾರ ಮಾಡಿ ಮೌಲ್ವಿಗಳು ತಲೆಯ ಮೇಲೆ ಹೊತ್ತು 5 ಕಿ.ಮೀ.ದೂರದ ಗಂಜಾಂನಲ್ಲಿನ ಗುಂಬಸ್‌ವರೆಗೆ ಪಾದಯಾತ್ರೆ ಮೂಲಕ ಮೆರವಣಿಗೆ ಸಾಗಿದರು.


ಕವ್ವಾಲಿ ಪದಗಳನ್ನು ಮೌಲ್ವಿಗಳು ಹಾಡಿದರು. ಟಿಪ್ಪು ಗೀತೆಗಳ ಗಾಯನ, ತಮಟೆ-ನಗಾರಿ ವಾದ್ಯಗಳು ಮೊಳಗಿದವು. ಮೆರವಣಿಗೆಯಲ್ಲಿ ಟಿಪ್ಪು ಸುಲ್ತಾನ್ ವೇಷಧಾರಿ ಬಾಲಕ ಸಾಗಿದ. ಅಲಂಕೃತಗೊಂಡಿದ್ದ ಕುದುರೆಗಳನ್ನು ನಗಾರಿ ಸದ್ದಿಗೆ ಕುಣಿಸಿ ನಲಿಸಿದರು. ಫಿರಂಗಿ ಮಾದರಿಯ ಕುಶಾಲ ತೋಪುಗಳಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಬಳಿಕ ಗುಂಬಸ್‌ನ ಟಿಪ್ಪು ಸಮಾಧಿ ಮುಂದೆ ವಿಶೇಷ ಪ್ರಾರ್ಥನೆ ಸಲ್ಲಿಸಿ ಧರ್ಮ ಬೋಧನೆ ನಡೆಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net