ಶ್ರೀಗಳ ನೇತೃತ್ವದಲ್ಲಿ ಸಾವಿರಾರು ವಿದ್ಯಾರ್ಥಿಗಳಿಂದ ಯೋಗ ..!

bkt-21-2
ಬಿವಿವಿ ಸಂಘ ಮತ್ತು ವಿಜಯವಾಣಿ ಮಾಧ್ಯಮ ಸಹಯೋಗದಲ್ಲಿ ಹಳೇ ಬಾಗಲಕೋಟೆ ನಗರದ ಬಿವಿವಿ ಸಂಘದ ಕಾಲೇಜ್ ಮೈದಾನದಲ್ಲಿ ನಡೆದ ಯೋಗ ದಿನಾಚರಣೆಯಲ್ಲಿ ಉಡುಪಿ ಪೇಜಾವರ ಶ್ರೀಗಳ.
Published on

ಬಾಗಲಕೋಟೆ: ಕನ್ನಡದ ನಂ.೧ ದಿನ ಪತ್ರಿಕೆ ವಿಜಯವಾಣಿ ಮಾಧ್ಯಮ ಸಹಯೋಗದಲ್ಲಿ ಬಿವಿವಿ ಸಂಘವು ಹಮ್ಮಿಕೊಂಡಿದ್ದ ವಿಶ್ವ ಯೋಗ ದಿನಾಚರಣೆಯಲ್ಲಿ ಉಡುಪಿ ಪೇಜಾವರ ಮಠಾಽÃಶ ೧೦೦೮ ಶ್ರೀ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದಂಗಳವರು ಭಾಗವಹಿಸಿ ಯೋಗಾಸನ ಮಾಡಿದರು.

ಇಲ್ಲಿನ ಬಿವಿವಿ ಸಂಘದ ಮೈದಾನದಲ್ಲಿ ನಡೆದ ಸೂರ್ಯ ನಮಸ್ಕಾರ, ಧ್ಯಾನ, ವಜ್ರಾಸನ, ಪದ್ಮಾಸನ, ಸಿಂಹಾಸನ, ಶೀರಸಾನ ಹಾಗೂ ಶೀರಸಾನ ಜೊತೆಗೆ ಪದ್ಮಾಸನ, ಶವಾಸನ ಮಾಡಿದರು. ಜ್ಞಾನಸ್ಥಿತಿ ಬಗ್ಗೆ ತಿಳಿಸಿಕೊಟ್ಟರು. ಒಟ್ಟು ೧೫ ನಿಮೀಷಗಳ ಕಾಲ ಯೋಗದ ಆಸ£ ಮಾಡಿ ಪೇಜಾವರ ಶ್ರೀಗಳು ನೋಡಗರು, ಯೋಗ ಪಟುಗಳನ್ನು ರೋಮಾಂಚನಗೊಳಿಸಿದರು.

ಕಾರ್ಯಕ್ರಮದಲ್ಲಿ ಉಡುಪಿ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದಂಗಳವರು ಯೋಗದ ಕುರಿತು ಆಶೀರ್ವಚನ ನೀಡಿ, ಯೋಗ ಅಂದ್ರೆ ಜೋಡಿಸುವುದು, ಕೂಡಿಸುವುದು. ದೈಹಿಕ, ಮಾನಸಿಕ ಸ್ವಾಸ್ಥ್ಯ, ಧ್ಯಾನದ ಸ್ವಾಸ್ಥ್ಯದ ಮೂಲಕ ಭಗವಂತನ ಜೊತೆಗೆ ಆತ್ಮವನ್ನು ಕೂಡಿಸುವ ವಿದ್ಯಯೇ ಯೋಗ. ಜೀವನದಲ್ಲಿ ಕೊನೆಯ ಗುರಿ ಮೋಕ್ಷ. ದೈಹಿಕ ಬಲ, ಮನೋಬಲವನ್ನ ಕೂಡಿಸಿ, ಭಗವಂತನ ಜೊತೆ ಕೂಡಿಸುವ ವಿದ್ಯ ಯೋಗದಲ್ಲಿ ಇದೆ. ಇವತ್ತು ಜಗತ್ತಿನ ಉದ್ದಗಲಕ್ಕೂ ವ್ಯಾಪಿಸಿದೆ. ವಿಶ್ವವೇ ಯೋಗಕ್ಕೆ ಶೀರಬಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಯೋಗ ಮಹತ್ವ ಸಾರಿದ್ದಾರೆ. ಪ್ರತಿಯೊಬ್ಬ ಭಾರತೀಯ ಯೋಗ ದಿನ ನಿತ್ಯ ಮಾಡಬೇಕು ಎಂದರು.

ಬಿವಿವಿ ಸಂಘದ ಕಾರ್ಯಾಧ್ಯಕ್ಷ, ಶಾಸಕ ವೀರಣ್ಣ ಚರಂತಿಮಠ, ಗೌರವ ಕಾರ್ಯದರ್ಶಿ ಮಹೇಶ ಅಥಣಿ, ಕಾಲೇಜುಗಳ ಆಡಳಿತ ಮಂಡಳಿಗಳ ಕಾರ್ಯಾಧ್ಯಕ್ಷ ಗುರುಬಸವ ಸೂಳಿಬಾವಿ, ಆಯುಷ್ಯ ವೈದ್ಯಕೀಯ ಕಾಲೇಜುಗಳ ಮತ್ತು ಔಷದ ವಿಜ್ಞಾನ ಕಾಲೇಜಿನ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಸಾಸನೂರ, ಹೈಸ್ಕೂಲ್ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಮಹಾಂತೇಶ ಶೆಟ್ಟರ, ಸಂಘದ ಆಡಳಿತಾಽಕಾರಿ ಡಾ.ವಿಜಯಕುಮಾರ ಕಟಗಿಹಳ್ಳಿಮಠ, ಬಿವಿವಿ ಸಂಘದ ಮುಖ್ಯ ಸಲಹೆಗಾರತಿ ಡಾ.ಮೀನಾ ಚಂದಾವರಕರ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net