

ನುಗ್ಗೇಹಳ್ಳಿ: ಶ್ರೀ ಕೃಷ್ಣನ ಭಗವದ್ಗೀತೆಯ ಸಂದೇಶಗಳನ್ನು ಓದುವುದರಿಂದ ಮನಸ್ಸಿಗೆ ಶಾಂತಿ ನೆಮ್ಮದಿ ದೊರೆಯುತ್ತದೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ತಿಳಿಸಿದರು.
ಹೋಬಳಿ ಕೇಂದ್ರದ ಇತಿಹಾಸ ಪ್ರಸಿದ್ಧ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ಆವರಣದಲ್ಲಿ ಯಾದವ ಸಂಘ ಗುರುವಾರ ಆಯೋಜಿಸಿದ್ದ ಶ್ರೀ ಕೃಷ್ಣ ಜನ್ಮಾಷ್ಟಮಿ ಮಹೋತ್ಸವ ಸಮಾರಂಭದಲ್ಲಿ ಮಾತನಾಡಿದರು. ಶ್ರೀ ಕೃಷ್ಣ ಪರಮಾತ್ಮನು ಅಧರ್ಮ ಹೋಗಲಾಡಿಸಿ ಧರ್ಮ ರಾಜ್ಯ ಸ್ಥಾಪನೆಗೆ ಆಶೀರ್ವಾದ ಮಾಡಿದರು. ಶ್ರೀ ಕೃಷ್ಣನ ಧರ್ಮ ಮಾರ್ಗದಲ್ಲಿ ನಡೆದರೆ ಈ ಸಮಾಜಕ್ಕೆ ಒಳಿತಾಗುತ್ತದೆ ಎಂದು ತಿಳಿಸಿದರು.
ಮುಖಂಡರಾದ ಗೀತಾ ಗೋಪಾಲಸ್ವಾಮಿ, ಎಚ್.ಎಂ.ನಟರಾಜ್, ಎಚ್.ಎಂ.ಜಯರಾಮ್, ಪುಟ್ಟಸ್ವಾಮಿ, ಬಿ.ಆರ್. ದೊರೆಸ್ವಾಮಿ, ಸವಿತಾ ಕುಮಾರ್, ಸಂಪತ್ ಕುಮಾರ್, ಡಾ.ರಾಜಗೋಪಾಲ್, ಯಾದವ ಸಂಘದ ಸದಸ್ಯರಾದ ಎಂ. ಕುಮಾರ್, ಚಂದ್ರು ಯಾದವ್, ಶಂಕರೇಗೌಡ, ರಮೇಶ್, ಗೋಪಾಲ್, ಕಲಾನಾಥ್, ಗ್ರಾಮ ಪಂಚಾಯತಿ ಸದಸ್ಯರಾದ ನಟರಾಜ್, ಹೊನ್ನೇಗೌಡ, ಮಂಜುನಾಥ್, ಯಲ್ಲಪ್ಪ, ಕೋಳಿ ಮಂಜುನಾಥ್ ಇತರರು ಹಾಜರಿದ್ದರು.