ಶ್ರೀಕೃಷ್ಣ ಜನ್ಮಾಷ್ಟಮಿಯ ಸಂಭ್ರಮ

08 gkp 01
ಪೊನ್ನಂಪೇಟೆ ಮದರ್ಸ್ ಆರ್ಮ್ ಮಾಂಟೆಸ್ಸರಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಸಂಭ್ರಮದಲ್ಲಿ ಭಾಗಿಯಾದ ಚಿಣ್ಣರು.
Published on

ಗೋಣಿಕೊಪ್ಪ: ಪೊನ್ನಂಪೇಟೆಯ ಮದರ್ಸ್ ಆರ್ಮ್ ಮಾಂಟೆಸ್ಸರಿ ಪ್ಲೇ ಹೋಂನಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಸಂಭ್ರಮದಿಂದ ಆಚರಿಸಲಾಯಿತು.

ರಾಧೆ, ಕೃಷ್ಣನ ವೇಷಧಾರಿಗಳಾಗಿ ಪುಟಾಣಿಗಳು ಮಿಂಚಿದರು. ಶ್ಲೋಕ ಮತ್ತು ಹಾಡುಗಳನ್ನು ಹೇಳಿ ಗಮನ ಸೆಳೆದರು. ಬೆಣ್ಣೆ, ಚಕ್ಕುಲಿ, ರವೆ ಉಂಡೆ ಮುಂತಾದ ಖಾದ್ಯಗಳನ್ನು ಸವಿದು ಪಾಲಕರೊಂದಿಗೆ ಸಂಭ್ರಮಿಸಿದರು. ಪ್ಲೇಹೋಂ ಆಡಳಿತ ಮಂಡಳಿ, ಸಿಬ್ಬಂದಿ ವರ್ಗ ಹಾಗೂ ಪುಟಾಣಿಗಳ ಪಾಲಕರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net