ಶ್ರೀಕಾಳಿಕಾಂಬ ದೇಗುಲ ಜೀರ್ಣೋದ್ಧಾರಕ್ಕೆ ದೇಣಿಗೆ

IMG-20250202-WA0172
Published on

ಗುಂಡ್ಲುಪೇಟೆ: ತಾಲೂಕಿನ ಕಬ್ಬಹಳ್ಳಿ ಗ್ರಾಮದಲ್ಲಿರುವ ಶ್ರೀಕಾಳಿಕಾಂಬ ದೇವಸ್ಥಾನ ಜೀರ್ಣೋದ್ಧಾರಕ್ಕೆ ಎಚ್.ಎಸ್.ಮಹದೇವಪ್ರಸಾದ್ ಟ್ರಸ್ಟ್ ಹಾಗೂ ಸಂಗಮ ಪ್ರತಿಷ್ಠಾನ ವತಿಯಿಂದ ದೇಣಿಗೆ ನೀಡಲಾಯಿತು.

ಗ್ರಾಮದಲ್ಲಿ ವಿಶ್ವಕರ್ಮ ಸಮುದಾಯದವರಿಂದ ಮರು ನಿರ್ಮಾಣವಾಗುತ್ತಿರುವ ಶ್ರಿ ಕಾಳಿಕಾಂಬ ದೇವಸ್ಥಾನ ಕಾಮಗಾರಿಗೆ ಆರ್ಥಿಕ ನೆರವು ಕೋರಿ ಕ್ಷೇತ್ರ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಅವರನ್ನು ಶ್ರೀಕಾಳಿಕಾಂಬ ಸೇವಾ ಟ್ರಸ್ಟ್ ಪದಾಧಿಕಾರಿಗಳು ಭಾನುವಾರ ಮೈಸೂರಿನ ಅವರ ನಿವಾಸದಲ್ಲಿ ಭೇಟಿ ಮಾಡಿದರು.

ಈ ವೇಳೆ ಶಾಸಕರು ವೈಯಕ್ತಿವಾಗಿ, ಎಚ್.ಎಸ್.ಮಹದೇವಪ್ರಸಾದ್ ಟ್ರಸ್ಟ್ ಹಾಗೂ ಸಂಗಮ ಪ್ರತಿಷ್ಠಾನ ವತಿಯಿಂದ ದೇಣಿಗೆ ನೀಡಿದರು. ಅಲ್ಲದೆ ಮುಂದಿನ ದಿನಗಳಲ್ಲಿ ಸರ್ಕಾರದ ಮೂಲಕ ದೇಗುಲ ಅಭಿವೃದ್ಧಿಗೆ ಅನುದಾನ ನೀಡುವ ಭರವಸೆ ನೀಡಿದರು.

ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕೆ.ಎಸ್.ಮಹೇಶ್, ಮುಖಂಡರಾದ ಪ್ರದೀಪ್‌ಕುಮಾರ್, ಯಜಮಾನ್ ನಾಗರಾಜಾಚಾರ್, ಶ್ರೀಕಾಳಿಕಾಂಬ ಸೇವಾ ಟ್ರಸ್ಟ್ ಅಧ್ಯಕ್ಷ ಕೆ.ಎಂ.ಪುರುಷೋತ್ತಮ್, ಕಾರ್ಯದರ್ಶಿ ಬಂಗಾರಾಚಾರಿ, ಸದಸ್ಯರಾದ ಸುರೇಶಾಚಾರಿ, ಗೋವಿಂದಾಚಾರಿ, ಸ್ವಾಮಿ, ರವೀಂದ್ರ, ಶ್ರೀಕಂಠಾಚಾರಿ, ಮಲ್ಲು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net