ಶ್ರೀ ಸಿದ್ದರಾಮೇಶ್ವರ ಜಯಂತಿ ಆಚರಣೆ

14HDK00005
Published on

ಎಚ್.ಡಿ.ಕೋಟೆ: ತಾಲೂಕು ಆಡಳಿತ ವತಿಯಿಂದ ಶ್ರೀ ಸಿದ್ದರಾಮೇಶ್ವರರ 853ನೇ ಜಯಂತಿಯನ್ನು ಮಂಗಳವಾರ ಪಟ್ಟಣದ ತಾಲೂಕು ಆಡಳಿತಸೌಧದ ಸಭಾಂಗಣದಲ್ಲಿ ಆಚರಿಸಲಾಯಿತು.

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷರೂ ಆದ ತಹಸೀಲ್ದಾರ್ ಶ್ರೀನಿವಾಸ್, ಭೋವಿ ಸಮಾಜದ ಗೌರವ ಅಧ್ಯಕ್ಷ ರಾಜಣ್ಣ, ಅಧ್ಯಕ್ಷ ಐಡಿಯಾ ವೆಂಕಟೇಶ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ನಂತರ ಮಾತನಾಡಿದ ಭೋವಿ ಸಮಾಜದ ಅಧ್ಯಕ್ಷ ಐಡಿಯಾ ವೆಂಕಟೇಶ್, ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ತಾಲೂಕು ಆಡಳಿತದಿಂದ ಸರಳವಾಗಿ ಜಯಂತಿ ಆಚರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಎಚ್.ಡಿ.ಕೋಟೆ ಮತ್ತು ಸರಗೂರು ತಾಲೂಕಿನ ಸಮುದಾಯದವರು ಸೇರಿ ವಿಜೃಂಭಣೆಯಿಂದ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ ಎಂದರು.

ಭೋವಿ ಸಮಾಜದ ತಾಲೂಕು ಉಪಾಧ್ಯಕ್ಷ ರವಿಕುಮಾರ್, ಪದಾಧಿಕಾರಿಗಳಾದ ಕಂದಸ್ವಾಮಿ, ರಾಮಕೃಷ್ಣ, ವೆಂಕಟರಾಮ್, ಪುರಸಭ ಸದಸ್ಯ ಸೋಮಶೇಖರ್, ಸಮಾಜದ ಮುಖಂಡರಾದ ನಾಗೇಂದ್ರ, ಬಸಪ್ಪ, ಶೇಖರ್, ಕಾಳಪ್ಪ, ಭೋಜಣ್ಣ, ಕೃಷ್ಣಪ್ಪ, ಶಿವಪುರ,ನಾಗರಾಜು, ರಘು, ಹೊಮ್ಮರಗಳ್ಳಿ ಪಾಳ್ಯ ಶ್ರೀನಿವಾಸ, ನಾಗರಾಜು, ನಿಂಗಣ್ಣ, ನಾಗರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net