

ಗಂಡಸಿ: ಪುರಾತನ ಇತಿಹಾಸವುಳ್ಳ ಗಂಡಸಿಯ ಶ್ರೀ ಶಂಭುಲಿಂಗೇಶ್ವರ ಸ್ವಾಮಿ ಶ್ರಾವಣ ಮಾಸದ ವಿಶೇಷ ಪೂಜಾ ಮಹೋತ್ಸವ ಶ್ರೀ ಶಂಭುಲಿಂಗೇಶ್ವರ ಮಠದ ಶ್ರೀ ರೇವಣ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಸಮ್ಮುಖದಲ್ಲಿ ಸೋಮವಾರ ನಡೆಯಿತು.
ಬೆಳಗಿನ ಜಾವ 4 ಗಂಟೆಯಿಂದ 11 ಗಂಟೆಯವರೆಗೆ ಸ್ವಾಮಿಗೆ ರುದ್ರಾಭಿಷೇಕ, ಸಹಸ್ರನಾಮ ಬಿಲ್ವಾರ್ಚನೆ, ಸಹಸ್ರ ಕುಂಭಗಳಿಂದ ಜಲಾಭಿಷೇಕ, ಮಹಾ ಮಂಗಳಾರತಿ ನಡೆಸಲಾಯಿತು. ಶ್ರಾವಣ ಮಾಸದ ವಿಶೇಷ ಪೂಜೆಗೆ ಸುತ್ತ್ತಲ ಹಳ್ಳಿಗಳ ಸಹಸ್ರಾರು ಭಕ್ತರು ಆಗಮಿಸಿದ್ದರು. ಭಕ್ತಾದಿಗಳಿಗೆ ದಾಸೋಹ ಏರ್ಪಡಿಸಲಾಗಿತ್ತು.
ಗಂಡಸಿ ಗ್ರಾಪಂ ಅಧ್ಯಕ್ಷ ಚಂದ್ರಶೇಖರ್, ಜಿ.ಎನ್.ದ್ಯಾವೇಗೌಡ, ನಾಗರಾಜು, ವಿರೂಪಾಕ್ಷಪ್ಪ, ಮಂಜಣ್ಣ, ಪ್ರಧಾನ ಅರ್ಚಕರಾದ ನಂಜುಂಡಸ್ವಾಮಿ, ಪ್ರಸನ್ನ ಕುಮಾರ್, ನಾಗಭೂಷಣ್ ಹಾಜರಿದ್ದರು