ಶ್ರೀ ಮಳೆರಾಜೇಂದ್ರಸಾಮಿ ಜಾತ್ರೆ ಸಂಪನ್ನ

bkt-12-6
ಬಾಗಲಕೋಟೆ ತಾಲೂಕಿನ ಮುರನಾಳ ಮಳೆರಾಜೇಂದ್ರಸ್ವಾಮಿ ಜಾತ್ರಾ ಮಹೋತ್ಸವ ಪಿರಂಗಿ ಯಲ್ಲಮ್ಮ (ಬಗಲಾಮುಖಿ)ದೇವಿಗೆ ಊಡಿ ತುಂಬವ ಮೂಲಕ ಸಂಪಣ್ಣಗೊAಡಿತು. ಮುರನಾಳ ಶ್ರೀಮಠದಿಂದ ಪೂಜ್ಯರಾದ ಮೌನೇಶ್ವರ ಸ್ವಾಮೀಜಿ ಇದ್ದರು.
Published on

ಬಾಗಲಕೋಟೆ: ಸತತ ೧೧ ದಿನಗಳ ಕಾಲ ವಿಜೃಂಭಣೆಯಿAದ ಜರುಗಿದ ತಾಲೂಕಿನ ಮುರನಾಳ ಮಳೆರಾಜೇಂದ್ರಸ್ವಾಮಿ ಜಾತ್ರಾ ಮಹೋತ್ಸವ ಪಿರಂಗಿ ಯಲ್ಲಮ್ಮ (ಬಗಲಾಮುಖಿ)ದೇವಿಗೆ ಊಡಿ ತುಂಬವ ಮೂಲಕ ಸಂಪಣ್ಣಗೊ0ಡಿತು.

ಮಂಗಳವಾರ ರಾತ್ರಿ ಮುರನಾಳ ಶ್ರೀಮಠದಿಂದ ಪೂಜ್ಯರಾದ ಮೌನೇಶ್ವರ ಸ್ವಾಮೀಜಿ ಕುದರೆಯನ್ನೆರಿ ಸಕಲ ವಾದ್ಯ ವೈಭವಗಳೊಂದಿಗೆ ಮೆರವಣಿಗೆ ಮೂಲಕ ಸಕಲ ಭಕ್ತರೊಡನೆ ವೀರಪುರದಲ್ಲಿರುವ ಪಿರಂಗಿ ಯಲ್ಲಮ್ಮ (ಬಗಲಾಮುಖಿ) ದೇವಿ ದೇವಸ್ಥಾನಕ್ಕೆ ಆಗಮಿಸಿದರು. ಬಳಿಕ ದೇವಿಗೆ ಶ್ರೀಮಠದ ಸೀರೆ ಅರ್ಪಿಸಿ, ಉಡಿ ತುಂಬಿ ವಿಶೇಷ ಪೂಜೆ ಮಹಾಮಂಗಳಾರುತಿ, ದೇವಿಗೆ ಇಷ್ಟವಾದ ನೈವೇದ್ಯ ಸಮರ್ಪಿಸಲಾಯಿತು.

ನಂತರ ಶ್ರೀಮಠದ ಪೂಜ್ಯರಾದ ವಿಸ್ವನಾಥ ಸ್ವಾಮೀಜಿ, ಗುರುಲಿಂಗ ಸ್ವಾಮೀಜಿ, ನಿತ್ಯಾನಂದ ಸ್ವಾಮೀಜಿ, ಗುರುನಾಥ ಸ್ವಾಮೀಜಿ, ಜಗನ್ನಾಥ ಸ್ವಾಮೀಜಿ, ಮೌನೇಶ್ವರ ಸ್ವಾಮೀಜಿ, ಮೇಘರಾಜ ಸ್ವಾಮೀಜಿ ಪುರುಷೋತ್ತಮ ಸ್ವಾಮೀಜಿ ಸಾನ್ನಿಧ್ಯದಲ್ಲಿ ಮುರನಾಳ ಹಾಗೂ ವೀರಾಪುರ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಸಾವಿರಾರು ಭಕ್ತರೊಂದಿಗೆ ನಡೆದ ಅನ್ನಸಂತರ್ಪಣೆಯೊAದಿಗೆ ಜಾತ್ರಾ ಮಹೋತ್ಸವ ಸಂಪಣ್ಣಗೊ0ಡಿತು.

ಗ್ರಾಮದ ಮುಖಂಡರಾದ ಹುಚ್ಚಪ್ಪ ಶಿರೂರ, ಸಿದ್ದಪ್ಪ ಮುಚಖಂಡಿ, ಮಂಜುನಾಥ ಬಾರಕೇರ, ಅಶೋಕ ಪತ್ತಾರ, ವಿವೇಕಾನಂದ ಗೂಗಿಹಾಳ, ಸಿದ್ದಪ್ಪ ಮುಚಖಂಡಿ, ಶ್ರೀಶೈಲ ಬಾಳಿಕಾಯಿ, ರಂಗಪ್ಪ ರೊಳ್ಳಿ, ಮಲ್ಲಪ್ಪ ಗೋರವರ, ಮುತ್ತಪ್ಪ ಕರಮುದಿ, ಅಶೋಕ ಕುಡ್ಲೇಪ್ಪನವರ, ದೇವಸ್ಥಾನದ ಪೂಜಾರಿಗಳಾದ ಸಂಗಪ್ಪ ಪೂಜಾರ, ಈರಪ್ಪ ನಾಯ್ಕರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net