ಶ್ರೀ ಚೌಡೇಶ್ವರಿದೇವಿ ವರ್ಧಂತಿ ಸಂಭ್ರಮ

IMG-20250724-WA0206
Published on

ಕೆ.ಆರ್.ಪೇಟೆ: ಪಟ್ಟಣದ ಹೊರವಲಯದ ಹೇಮಗಿರಿ ರಸ್ತೆ ಸಮೀಪದ ಬೆಂಗಳೂರು ಜಲಸೂರು ರಾಜ್ಯ ಹೆದ್ದಾರಿಯ ಪಕ್ಕದಲ್ಲಿರುವ ಶ್ರೀ ಚೌಡೇಶ್ವರಿ ಅಮ್ಮನವರ ದೇವಾಲಯದಲ್ಲಿ ದೇವಿಯ ವರ್ಧಂತಿ ಹಾಗೂ ಭೀಮನ ಅಮಾವಾಸ್ಯೆ ಅಂಗವಾಗಿ ಪ್ರಾಕಾರೋತ್ಸವ, ಅಡ್ಡಪಲ್ಲಕ್ಕಿ ಉತ್ಸವ, ಉಯ್ಯಲೋತ್ಸವ ಹಾಗೂ ವಿಶೇಷ ಪೂಜಾ ಕೈಂಕರ್ಯಗಳು ನಡೆದವು.

ಭೀಮನ ಅಮಾವಾಸ್ಯೆ ಜತೆಗೆ ಶ್ರೀ ಚೌಡೇಶ್ವರಿ ಅಮ್ಮನವರ ಜನ್ಮ ದಿನದ ಮಹೋತ್ಸವ ಇದ್ದ ಕಾರಣ ದೇವಾಲಯಕ್ಕೆ ಭಕ್ತರ ದಂಡೇ ಹರಿದು ಬಂದಿತ್ತು. ಸಾವಿರಾರು ಭಕ್ತರು ದರ್ಶನ ಪಡೆದರು. ವರ್ಧಂತಿ ಮಹೋತ್ಸವದ ಅಂಗವಾಗಿ ಭಕ್ತರಿಗೆ ಸಿಹಿ ಪೊಂಗಲ್, ಉಪ್ಪಿಟ್ಟು, ಅನ್ನ ಪ್ರಸಾದ ವಿತರಿಸಲಾಯಿತು. ತಾಯಿಯ ಶಿಲಾಮೂರ್ತಿಯನ್ನು ವಿಶೇಷವಾಗಿ ಬೆಳ್ಳಿ ಕವಚ, ವಿವಿಧ ಬಗೆಯ ಹೂವುಗಳಿಂದ ಸಿಂಗರಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net