

ಶೃಂಗೇರಿ: ಶ್ರಾವಣ ಶುಕ್ಲ ಪಂಚಮಿಯಾದ ಸೋಮವಾರ ನರಸಿಂಹವನದ ಗುರುನಿವಾಸದಲ್ಲಿ ಜಗದ್ಗುರು
ಶ್ರೀ ವಿಧುಶೇಖರಭಾರತೀ ಸ್ವಾಮೀಜಿ ಅವರ 31ನೇ ವರ್ಧಂತಿ ಮಹೋತ್ಸವ ನೆರವೇರಿತು. ನಾನಾಪ್ರಾಂತ್ಯಗಳಿದ ಆಗಮಿಸಿದ ಸದ್ಭಕ್ತರಿಗೆ ಕಿರಿಯ ಶ್ರೀಗಳು ಅಹ್ನಿಕ ದರ್ಶನ ನೀಡಿದರು. ವರ್ಧಂತಿ ಸಲುವಾಗಿ ಗುರುನಿವಾಸವನ್ನು ವಿವಿಧ ಪುಪ್ಪ ಹಾಗೂ ಬಣ್ಣಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಯತಿಗಳಿಗೆ ಭಿಕ್ಷಾವಂದನೆ, ವಸಕಾಣಿಕೆ, ಲಪುಪ್ಪಗಳನ್ನು ನೀಡಿ ಭಕ್ತರು ಶ್ರದ್ಧಾಭಕ್ತಿ ಮೆರೆದರು. ಅನುಗ್ರಹಭಾಷಣ ಬಳಿಕ ಯತಿಗಳು ಶ್ರೀ ಚಂದ್ರಮೌಳೀಶ್ವರ ಸ್ವಾಮಿಗೆ ಪಂಚಾಮೃತ ಅಭಿಷೇಕ ನೆರವೇರಿಸಿ ವಿಶೇಷಪೂಜೆ ಸಲ್ಲಿಸಿದರು. ವರ್ಧಂತಿ ಸಲುವಾಗಿ ನಡೆದ ಮಹಾರುದ್ರ ಮಹಾಯಾಗದಲ್ಲಿ ಶ್ರೀಗಳು ಭಾಗಿಯಾದರು.