ಶ್ರೀ ಗುರುರಾಘವೇಂದ್ರ ಸ್ವಾಮಿ ಆರಾಧನಾ ಮಹೋತ್ಸವ

IMG-20250811-WA0233
Published on

ಅರಕಲಗೂಡು: ತಾಲೂಕಿನ ರಾಮನಾಥಪುರ ಉತ್ತರಾದಿ ಮಠದಲ್ಲಿ ಶ್ರೀ ಗುರುರಾಘವೇಂದ್ರ ಸ್ವಾಮಿ 354ನೇ ಆರಾಧನಾ ಮಹೋತ್ಸವ ಅಂಗವಾಗಿ ಸೋಮವಾರ ವಿವಿಧ ಪೂಜಾ ಕಾರ್ಯಕ್ರಮಗಳು ನಡೆದವು.

ಬೆಳಗ್ಗೆ ಧಾನ್ಯ ಪೂಜೆ, ಸುಪ್ರಭಾತ, ಅಷ್ಟೋತ್ತರ ಪಾರಾಯಣ, ಪಂಚಾಮೃತ ಅಭಿಷೇಕ, ಮಧ್ಯಾಹ್ನ ಮಹಾ ಪೂಜೆ, ಮಂಗಳಾರತಿ ನಂತರ ಪ್ರಸಾದ ವಿನಿಯೋಗ ನಡೆಯಿತು. ಬಳಿಕ ಶ್ರೀ ವಿಭುಧೇಶ ಮಂಟಪದಲ್ಲಿ ಮಕ್ಕಳು ಭರತನಾಟ್ಯ ಕಾರ್ಯಕ್ರಮ ನಡೆಸಿಕೊಟ್ಟರು.

ಮಠದ ವ್ಯವಸ್ಥಾಪಕ ವೇ.ಕನಕಾಚಾರ್ಯ ನೇತೃತ್ವದಲ್ಲಿ ಪೂಜಾ ವಿಧಾನಗಳು ನಡೆದವು. ಮುಖಂಡರಾದ ಆರ್.ಕೆ.ಶ್ರೀನಿವಾಸ್ ಅಯ್ಯಂಗಾರ್, ಗುರುರಾಜಾಚಾರ್ಯ ಗಲಿಗಲಿ, ಅನಂತಪದ್ಮನಾಭ ಆಚಾರ್ಯ, ನರಸಿಂಹಮೂರ್ತಿ, ವಿಜಯಕುಮಾರ್, ನಾಗೇಶ್, ಸಿದ್ದಯ್ಯ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net