ಶ್ರೀ ಗುರು ಕಾಲೇಜಿನಲ್ಲಿ ಪ್ರತಿಭಾ ಪುರಸ್ಕಾರ : ಟಾಪರ್ ವಿದ್ಯಾರ್ಥಿಗೆ ಲಕ್ಷ ರೂ. ನೀಡಿ ಗೌರವ

IMG-20230715-WA0025
Published on


ವಿಜಯವಾಣಿ ಸುದ್ದಿಜಾಲ ಕಲಬುರಗಿ
ಜೀವನ ಎಂಬುದೇ ಶಿಕ್ಷಕ, ಪ್ರತಿ ಕ್ಷಣವೂ ಕಲಿಯುತ್ತಲೇ ಇರಬೇಕು. ಸಾಧನೆ ಮಾಡಲು ಶಾರ್ಟ್ಕಟ್ ಮಾರ್ಗಗಳಿಲ್ಲ. ನಿರಂತರ ಕಠಿಣ ಪರಿಶ್ರಮ ಹಾಗೂ ಕಷ್ಟುಪಟ್ಟು ಓದಿದರೆ ಮಾತ್ರ ಸಾಧಕರಾಗಲು ಸಾಧ್ಯ ಎಂದು ದಂತ ವೈದ್ಯ ಸಹೋದರರಾದ ಡಾ.ಸುಧೀಂದ್ರ ದೇಶಪಾಂಡೆ, ಡಾ.ಸಚಿನ್ ದೇಶಪಾಂಡೆ ಮತ್ತು ಸುಮಿತ್ ದೇಶಪಾಂಡೆ ಹೇಳಿದರು.
ನಗರದ ಶ್ರೀಗುರು ಸ್ವತಂತ್ರ ಪಿಯು ವಿಜ್ಞಾನ ಕಾಲೇಜಿನ ವತಿಯಿಂದ  ನೀಲಾಂಬಿಕಾ ಕಲ್ಯಾಣ ಮಂಟಪದಲ್ಲಿ ಶನಿವಾರ ಹಮ್ಮಿಕೊಂಡಿದ್ದ  ಪ್ರತಿಭಾ ಪುರಸ್ಕಾರ ಹಾಗೂ ಪ್ರಥಮ ವರ್ಷದ  ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಮುಖ್ಯ  ಅತಿಥಿಗಳಾಗಿ ಮಾತನಾಡಿ, ಗುರಿಯನ್ನು ಇಟ್ಟುಕೊಂಡು, ಗುರುವಿನ ಮಾರ್ಗದರ್ಶನದಲ್ಲಿ  ನಿರಂತರವಾಗಿ ಓದುವುದು, ಸಕಾರಾತ್ಮಕ ಚಿಂತನೆ ಜತೆಗೆ ಮುನ್ನಡೆದರೆ ಖಂಡಿತ ಸಾಧಕರಾಗುತ್ತಿರಿ ಎಂದರು.
ಡಾ.ಸುಧೀAದ್ರ ಮಾತನಾಡಿ, ಸಾಧಿಸುವ ಛಲ ಇರಬೇಕು. ಸಮಾಜದ ಮುಖ್ಯವಾಹಿನಿಯಲ್ಲಿರಬೇಕು ಎಂದುಕೊAಡು. ನಿಮ್ಮ ಸ್ಟೆçಂಥ್ ಏನು, ವೀಕ್ ನೆಸ್ ಏನು ಎಂಬುದನ್ನು ನೀವೆ ಅರಿತುಕೊಂಡು. ನಿಮ್ಮ ವೀಕ್‌ನೆಸ್‌ಗಳಿಗೆ ಕಡಿವಾಣ ಹಾಕಿ, ಶಕ್ತಿಯನ್ನು ಸರಿಯಾಗಿ ಬಳಕೆ ಮಾಡಿಕೊಂಡು ಸಾಧನೆ ಕಡೆಗೆ ಹೆಜ್ಜೆ ಹಾಕಿದರೆ ಯಶಸ್ವು ಗ್ಯಾರಂಟಿ ಎಂದು ಹೇಳಿದರು.
ಈ ಸಂಸ್ಥೆಯ ಸಂಸ್ಥಾಪಕರಾಗಿರುವ ಪ್ರೊ.ಎ.ವೈ.ನಾಯ್ಕ್ ಅವರು ೧೯೮೫ರಲ್ಲಿ ನಮಗೆ ಸ್ಪೂರ್ತಿ ನೀಡಿ ಚ್ಚಿದವರು. ಸರ್ಕಾರಿ ಕಾಲೇಜಿನ ಉಪನ್ಯಾಸಕರಾಗಿ ಸೇವೆ ಸಲ್ಲಿಸಿಲು ಉತ್ತರ ಕನ್ನಡದಿಂದ ಕಲಬುರಗಿಗೆ ಆಗಮಿಸಿ, ಅಪಾರ ಕೊಡುಗೆ ನೀಡಿದ್ದಾರೆ. ಅವರು ಸ್ಥಾಪಿಸಿರುವ ಶ್ರೀಗುರು ಕಾಲೇಜಿನಿಂದ ನೂರಾರು  ವಿದ್ಯಾರ್ಥಿಗಳು  ಸಾಧಕರಾಗಿ ಹೊರ ಹೊಮ್ಮಿದ್ದಾರೆ ಎಂದು ತಿಳಿಸಿದರು. ನಾಯ್ಕ್ ಸರ್ ಅವರ ಕಾರ್ಯ ಮತ್ತು  ಕೊಡುಗೆ ಜಿಲ್ಲೆಗೆ ಅಮೋಘವಾಗಿದೆ  ಎಂದು ಸ್ಮರಿಸಿದರು.  ನಾಯ್ಕ್ ಸರ್ ಟ್ಯೂಷನ್ ಹೇಳುವಾಗ ಹೆಚ್ಚಿನ ಅಂಕ ಪಡೆದುಕೊಂಡವರಿಗೆ ೧೦ ರೂ. ಬಹುಮಾನ ನೀಡುತ್ತಿದ್ದರು ಎಂದು ತಮ್ಮ ಕಾಲೇಜಿನ ದಿನಗಳ ನೆನಪಿನ ಬುತ್ತಿ ಬಿಚ್ಚಿಟ್ಟರು. ನಾವು ಮೂವರು ಸಹೋದರರ ವೈದ್ಯರಾಗಲು ನಾಯ್ಕ್ ಸರ್ ಕಾರಣ ಎಂದರು.
ಪ್ರತಿಭಾ ಪುರಸ್ಕಾರ ಸ್ವೀಕರಿಸಿದ ಸಾಧಕ ವಿದ್ಯಾರ್ಥಿಗಳು  ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಮಾತೋಶ್ರೀ ಕಲ್ಯಾಣಿ ಮೆಮೊರಿಯಲ್ ಎಜುಕೇಷನ್ ಟ್ರಸ್ಟ್ ಅಧ್ಯಕ್ಷೆ ನಳಿನಿ ನಾಯ್ಕ್, ಕಾರ್ಯದರ್ಶಿ ನಿತೀನ್ ನಾಯ್ಕ್, ಆಡಳಿತಾಧಿಕಾರಿ ನೇಹಾ ನಿತೀನ ನಾಯ್ಕ್, ಆಡಳಿತ ಮಂಡಳಿ ಸದಸ್ಯ ಗುರುರಾಜ ನಾಯ್ಕ್ , ಪ್ರಾಚಾರ್ಯ  ವಿದ್ಯಾಸಾಗರ ಗೋಗಿ ಮಾತನಾಡಿ ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಪ್ರೊ.ಬಾಳಿ ಸೇರಿದಂತೆ ಪಾಲಕರು, ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಸಮಾರಂಭದ ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. ಪ್ರಥಮ ವರ್ಷದ ವಿದ್ಯಾರ್ಥಿಗಳನ್ನು ಅರ್ಥಪೂರ್ಣವಾಗಿ ಸ್ವಾಗತಿಸಿಕೊಳ್ಳಲಾಯಿತು. ಅಮೂಲ್ಯ ಹಿರೇಮಠ ನಿರೂಪಿಸಿದರು.
===ಬಾಕ್ಸ್==
ಟಾಪರ್‌ಗೆ ಲಕ್ಷ ರೂ. ನೀಡಿ ಸನ್ಮಾನ
ಶ್ರೀಗುರು ಕಾಲೇಜಿನಲ್ಲಿ ಓದಿ ಪಿಯುಸಿ ದ್ವಿತೀಯ ಪರೀಕ್ಷೆಯಲ್ಲಿ ಅತಿ ಹೆಚ್ಚಿನ ಅಂಕ ಪಡೆದುಕೊಂಡು ನೀಟ್ ಮತ್ತು ಸಿಇಟಿಯಲ್ಲಿ ದಾಖಲೆ ಅಂಕ ಪಡೆದು ಸಾಧನೆ ಮೆರೆದ ವಿದ್ಯಾರ್ಥಿ ಸೊಹೆಲ್‌ಗೆ ಒಂದು ಲಕ್ಷ ರೂ. ನಗದು ಬಹುಮಾನ ನೀಡಿ ಪೋಷಕರನ್ನು ಹಾಗೂ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಆಡಳಿತ ಮಂಡಳಿಯಿAದ  ಸಾಧಕರಿಗೆ  ಅಂದಾಜು ೧೦ ಲಕ್ಷ ರೂ. ಮೌಲ್ಯದ ಪ್ರೋತ್ಸಾಹ ಧನ ವಿತರಿಸುವ ಮೂಲಕ ವಿದ್ಯಾರ್ಥಿಗಳಿಗೆ ಓದಲು ಮತ್ತಷ್ಟು ಪ್ರೇರಣೆ ನೀಡಿದರು.
ಹೆಚ್ಚಿನ ಅಂಕಗಳನ್ನು ಪಡೆದುಕೊಂಡಿರುವ ಜಯರಾಜ, ಸಾದಿಯಾ, ಆಕಾಶ ಮಾಲಿಪಾಟೀಲ್, ವೈಷ್ಣವಿ ಕುಲಕರ್ಣಿಗೆ  ಅವರಿಗೆ   ೫೦ ಸಾ.ರೂ.ಗಳಿಂದ ೨೦ ಸಾ.ರೂ.ಗಳವರೆಗೂ ನಗದು ಬಹುಮಾನ ವಿತರಿಸಿ ಗೌರವಿಸಲಾಯಿತು. ಪ್ರಥಮ ಪಿಯುಸಿಯಲ್ಲಿ ಕಾಲೇಜಿಗೆ ಮೊದಲ ರ‍್ಯಾಂಕ್ ಗಿಟ್ಟಿಸಿಕೊಂಡ ಸಾಕ್ಷಿ ಜಮಾದಾರಗೆ ೫೦ ಸಾ.ರೂ. ಸವಿತಾ. ಸಿಮ್ರನ್ ತಲಾ ೨೦ ಸಾ.ರೂ. ಹೀಗೆ ವಿವಿಧ ರ‍್ಯಾಂಕ್ ಪಡೆದುಕೊಂಡ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಲಾಯಿತು. ಅಲ್ಲದೆ  ವಿಷಯವಾರು ಹೆಚ್ಚಿನ ಅಂಕಗಳನ್ನು ಪಡೆದುಕೊಂಡ ವಿದ್ಯಾರ್ಥಿಗಳಿಗೆ ತಲಾ ೨ ಸಾ.ರೂ. ವಿತರಿಸಲಾಯಿತು. ಪ್ರತಿಭಾ ಪುರಸ್ಕಾರದಲ್ಲಿ ಸಾಧಕ ವಿದ್ಯಾರ್ಥಿಗಳ ಜತೆಗೆ ಅವರ  ಪೋಷಕರಿಗೂ ಗೌರವಿಸಲಾಯಿತು. ಸಭಾಂಗಣದಲ್ಲಿ ವಿದ್ಯಾರ್ಥಿಗಳು ಚಪ್ಪಾಳೆ ಹಾಕಿ ಸಾಧಕರ ಸಹೋದರರಿಗೆ ಅಭಿನಂದಿಸುವ ಜತೆಗೆ ಮುಂದಿನ ದಿನಗಳಲ್ಲಿ ತಾವು ಸಾಧಕರಾಗಲು ಆತ್ಮದೊಳಗೆ ಸಂಕಲ್ಪ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net