ಶ್ರೀ ಕಂಬದ ರಾಮಸ್ವಾಮಿ ದೇಗುಲದಲ್ಲಿ ಸ್ವಚ್ಛತಾ ಕಾರ್ಯ

29 apr tnp 01
Published on

ತಿ.ನರಸೀಪುರ: ತಾಲೂಕಿನ ತುಂಬಲ ಗ್ರಾಮದ ಬಳಿಯಿರುವ ಶ್ರೀ ಕಂಬದ ರಾಮಸ್ವಾಮಿ ಬೆಟ್ಟದಲ್ಲಿ ಇತ್ತೀಚೆಗೆ ಚಾರಣ ಕೈಗೊಂಡಿದ್ದ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ಕೌಟ್ಸ್ ಅಂಡ್ ಗೈಡ್ಸ್‌ನ ವಿದ್ಯಾರ್ಥಿಗಳು ದೇವಾಲಯದ ಸ್ವಚ್ಛತಾ ಕಾರ್ಯ ನಡೆಸಿದರು.

ದೇವಸ್ಥಾನದ ಸುತ್ತಮುತ್ತಲಿನ ಗಿಡಗಳನ್ನು ಕಿತ್ತು ಹಾಗೂ ಕಸ ತೆಗೆದು ಸ್ವಚ್ಛಗೊಳಿಸಿದರು. ವಿದ್ಯಾರ್ಥಿಗಳ ಶ್ರಮದಾನವನ್ನು ಮೆಚ್ಚಿದ ತುಂಬಲ ಗ್ರಾಮದ ರೇವಣ್ಣ ಅವರು ಮಧ್ಯಾಹ್ನದ ಉಪಾಹಾರದ ವ್ಯವಸ್ಥೆ ಮಾಡಿದ್ದರು.

ಪ್ರಾಂಶುಪಾಲ ಡಾ.ಎಚ್.ವಿ.ಉದಯಕುಮಾರ್, ಸ್ಕೌಟ್ಸ್ ಅಂಡ್ ಗೈಡ್‌ನ ಸಂಚಾಲಕಿ ಡಾ.ಕೆ.ಕೆ.ಮುತ್ತಮ್ಮ, ಸಹ ಪ್ರಾಧ್ಯಾಪಕ ಮಹೇಶ್, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ರೇಷ್ಮಾ ಚಂಗಪ್ಪ, ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ರಾಮಮೂರ್ತಿ, ಸಹ ಗ್ರಂಥಪಾಲಕ ಡಾ.ಪುಟ್ಟಸ್ವಾಮಿ ಹಾಗೂ ರೇಂಜರ್, ರೋವರ್ ವಿದ್ಯಾರ್ಥಿಗಳಿಗೆ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net