ಶ್ರೀಗಂಧ ಬೆಳೆಸಲು ಪ್ರೋತ್ಸಾಹಿಸಿ

12KWR7
Published on

ಕಾರವಾರ: ಅರಣ್ಯ ವಲಯದಲ್ಲಿ ಶ್ರೀಗಂಧವನ್ನು ಬೆಳೆಸಿ, ಬೆಳೆಸಲು ಪ್ರೋತ್ಸಾಹಿಸಿ ಎಂದು ಡಿಎಫ್​ಒ ವಸಂತ ರೆಡ್ಡಿ ಎಂದು ಹೇಳಿದರು.

ಸ್ಯಾಂಡಲ್​ವುಡ್ ಸೊಸೈಟಿ ಆಫ್ ಇಂಡಿಯಾ ಹಾಗೂ ಸಾಮಾಜಿಕ ಅರಣ್ಯ ವಿಭಾಗದಿಂದ ಜಿಲ್ಲೆಯ ಅರಣ್ಯಾಧಿಕಾರಿಗಳಿಗಾಗಿ ನಗರದ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಗುರುವಾರ ಆಯೋಜಿಸಿದ ಶ್ರೀಗಂಧ, ರಕ್ತ ಚಂದನ ನೆಡುತೋಪು ಅಭಿವೃದ್ಧಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಶ್ರೀಗಂಧದ ನಾಡಲ್ಲಿ ಗಂಧ ಬೆಳೆಯಿರಿ ಎಂದು ಹೇಳುವ ಪರಿಸ್ಥಿತಿ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸಂಪನ್ಮೂಲ ವ್ಯಕ್ತಿಯಾಗಿದ್ದ ಸ್ಯಾಂಡಲ್ ವುಡ್ ಸೊಸೈಟಿ ಆಫ್ ಇಂಡಿಯಾದ ಹಿರಿಯ ವಿಜ್ಞಾನಿ ಡಾ.ಪಿ.ವಿ. ಸೋಮಶೇಖರ, ಅತಿ ಕಡಿಮೆ ಮಳೆ ಬೀಳುವ ಪ್ರದೇಶದಲ್ಲಿ ಪರಾವಲಂಬಿಯಾಗಿ ಬೆಳೆಯುವ ಸಸ್ಯ ಶ್ರೀಗಂಧ. 20 ಕ್ಕೂ ಹೆಚ್ಚು ಪ್ರಭೇದಗಳಿದ್ದರೂ ನಮ್ಮಲ್ಲಿ ಸದ್ಯ ಒಂದೇ ಪ್ರಭೇದ ಇದೆ. ನರ್ಸರಿಗಳಿಗಾಗಿ ನಾವು ಕೇರಳವನ್ನು ಆಶ್ರಯಿಸಿದ್ದೇವೆ ಎಂದು ವಿವರಿಸಿದರು. ಸಾಮಾಜಿಕ ಅರಣ್ಯ ವಿಭಾಗದ ಡಿಎಫ್​ಒ ಉದಯ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಸ್ಯಾಂಡಲ್​ವುಡ್ ಸೊಸೈಟಿ ಆಫ್ ಇಂಡಿಯಾದ ನಿರ್ದೇಶಕ ಡಾ. ಮಲ್ಲೇಶ ಲಿಂಗಾಚಾರಿ, ಹಿರಿಯ ವಿಜ್ಞಾನಿ ಡಾ.ಜಿ. ರವಿಕುಮಾರ್ ಅತಿಥಿಯಾಗಿದ್ದರು. ಎಸಿಎಫ್ ಮಂಜುನಾಥ ನಾವಿ ಸ್ವಾಗತಿಸಿದರು. ಆರ್​ಎಫ್​ಒ ದಾನಮ್ಮ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net