

ಕೊಳ್ಳೇಗಾಲ: ತಾಲೂಕು ಸೇರಿದಂತೆ ಪಟ್ಟಣದ ವಿವಿಧೆಡೆ ಭಾನುವಾರ ಶ್ರದ್ಧಾ-ಭಕ್ತಿಯಿಂದ ಶ್ರೀರಾಮ ನವಮಿ ಆಚರಿಸಲಾಯಿತು.
ಕಾವೇರಿ ರಸ್ತೆಯಲ್ಲಿರುವ ಶ್ರೀ ಪ್ರಸನ್ನ ರಾಮಮಂದಿರದಲ್ಲಿ ಕೊಳ್ಳೇಗಾಲ ತಾಲೂಕು ಬ್ರಾಹ್ಮಣ ಮಹಾಸಭಾ ವತಿಯಿಂದ ಶ್ರೀರಾಮನಿಗೆ ಅಭಿಷೇಕ, ಮಹಾ ಮಂಗಳಾರತಿ, ಪೂಜಾ ಕೈಂಕರ್ಯಗಳನ್ನು ನಡೆಸಲಾಯಿತು. ಮಹಾಸಭಾದ ಪದಾಧಿಕಾರಿಗಳು ಸಾಮೂಹಿಕವಾಗಿ ವೇದ ಪಾರಾಯಣ ಮಾಡಿದರು. ಪೂಜೆ ಬಳಿಕ ರಾಮ ಮಂದಿರದ ಭೋಜನ ಆಲಯದಲ್ಲಿ ಸಾರ್ವಜನಿಕರಿಗೆ ಮಜ್ಜಿಗೆ, ಪಾನಕ, ಕೋಸಂಬರಿ ವಿತರಣೆ ಮಾಡಲಾಯಿತು. ಕೊಳ್ಳೇಗಾಲ ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಆರ್.ಶೇಖರ್ ಶಾಸ್ತ್ರಿ, ಪದಾಧಿಕಾರಿಗಳಾದ ಪಶುಪತಿ, ನಟರಾಜನ್, ಶಶಿಧರ್, ಚಂದ್ರಚೂಡ, ವೆಂಕಟೇಶ್, ಮಂಜುನಾಥ್, ಕೃಷ್ಣ, ಶ್ರೀನಿವಾಸ, ಚಂದ್ರು, ನಾಗರಾಜು, ಮಂಜುನಾಥ್, ವಾಗ್ದೇವಿ ವಿಪ್ರ ಮಹಿಳಾ ಸಂಘದ ಅಧ್ಯಕ್ಷೆ ಮಲ್ಲಿಕಾ, ಸುಮಾ, ರೇಖಾ, ಲಕ್ಷ್ಮೀ, ವಾಣಿ, ನಾಗ ಕನ್ನಿಕಾ, ಸುರೇಖಾ, ರೋಹಿಣಿ, ನಳಿನಿ, ರೂಪಾ ಮತ್ತಿತರಿದ್ದರು.
ಪಟ್ಟಣದ ದೇವಲ ಮಹರ್ಷಿ ವೃತ್ತದಲ್ಲಿ ನಾಗ ಮಂಟಪ ಸೇವಾ ಸಮಿತಿಯಿಂದ ಶ್ರೀರಾಮ ನವಮಿ ಪ್ರಯುಕ್ತ ಮಜ್ಜಿಗೆ, ಪಾನಕ ವಿತರಣೆ ಮಾಡಲಾಯಿತು. ಶ್ರೀರಾಮ ದೇವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಬಳಿಕ ಸಮಿತಿ ಸದಸ್ಯರು ಸಾರ್ವಜನಿಕರಿಗೆ ಮಜ್ಜಿಗೆ, ಪಾನಕ ಹಾಗೂ ಕೊಸಂಬರಿ ವಿತರಿಸಿದರು. ನಾಗಮಂಟಪ ಸೇವಾ ಸಮಿತಿಯ ಗಿರೀಶ್ ಬಾಬು, ವಿಜಯಕುಮಾರ್, ಮಧು ಚಂದ್ರ, ಗೋವಿಂದರಾಜು, ಪ್ರಕಾಶ್ ಮತ್ತಿತರಿದ್ದರು.
ಕಾವೇರಿ ರಸ್ತೆಯಲ್ಲಿರುವ ಶ್ರೀ ವಾಲ್ಮೀಕಿ ವೃತ್ತದಲ್ಲಿ ಆಟೋ ಚಾಲಕ ಸಂಘದಿಂದ ಸಾರ್ವಜನಿಕರಿಗೆ ಮಜ್ಜಿಗೆ, ಪಾನಕ ವಿತರಣೆ ಮಾಡಲಾಯಿತು. ನಗರಸಭೆ ಸದಸ್ಯ ಜಿ.ಪಿ.ಶಿವಕುಮಾರ್, ನಾಮ ನಿರ್ದೇಶನ ಸದಸ್ಯ ನರಸಿಂಹನ್, ನಾಯಕ ಸಮುದಾಯದ ಯಜಮಾನರಾದ ಚಿಕ್ಕಮಾದನಾಯಕ, ಸುಂದರ್, ತಾಲೂಕು ನಾಯಕ ಸಂಘದ ಪ್ರಧಾನ ಕಾರ್ಯದರ್ಶಿ ಶಾಂತರಾಜು, ಆಟೋ ಚಾಲಕರ ಸಂಘದ ಅಧ್ಯಕ್ಷ ಪಾಡುರಂಗ, ನಾರಾಯಣ್, ಪುನೀತ್, ಸುಭಾಷ್ ಇತರರು ಇದ್ದರು.
ಪಟ್ಟಣದ ಕಾವೇರಿ ರಸ್ತೆಯಲ್ಲಿರುವ ವೀರಾಂಜನೇಯ ಸ್ವಾಮಿ ದೇವಾಲಯ, ಈಡೀಗರ ಬೀದಿಯ ರಾಮಮಂದಿರ, ಪಂಚರಂಗಿ ವೃತ್ತದಲ್ಲಿರುವ ವೀರಾಂಜನೇಯ ಸ್ವಾಮಿ ದೇವಾಲಯ, ಮುನೇಶ್ವರಗುಡಿ ಬೀದಿ, ಸಂತೇಬೀದಿ, ಗರಡಿ ಬೀದಿ, ನಡುಕಲ ಬೀದಿಯ ರಾಮಮಂದಿರ, ಚೌಡೇಶ್ವರಿ ಬೀದಿ ಇನ್ನಿತರ ಕಡೆಗಳಲ್ಲಿ ಸಾರ್ವಜನಿಕರಿಗೆ ಮಜ್ಜಿಗೆ-ಪಾನಕ ವಿತರಣೆ ಮಾಡಲಾಯಿತು.