ಶೋಷಿತ ಹೆಣ್ಣು ಮಕ್ಕಳಿಗೆ ಸಹಾಯ ಮಾಡಿ

inner wheel
ಶೃಂಗೇರಿ ರೋಟರಿ ಕ್ಲಬ್‌ನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಇನ್ನರ್‌ವ್ಹೀಲ್ ರಾಜ್ಯಪಾಲೆ ಪೂರ್ಣಿಮಾ ರವಿ ಉದ್ಘಾಟಿಸಿದರು. ಸೌಮ್ಯ ವಿಜಯಕುಮಾರ್, ಮಂಜುಳಾ ಎಸ್.ಭಟ್, ಸುಜಾತಾ ನಟೇಶ್ ಇದ್ದರು.
Published on

ಶೃಂಗೇರಿ: ಸಮಾಜದಲ್ಲಿ ಶೋಷಿತ ಹೆಣ್ಣು ಮಕ್ಕಳಿಗೆ ಸಹಾಯ ಮಾಡುವ ಮೂಲಕ ಸೇವಾ ಕಾರ್ಯದಲ್ಲಿ ಇನ್ನರ್‌ವ್ಹೀಲ್ ಕ್ಲಬ್ ತೊಡಗಿಸಿಕೊಂಡಿದೆ ಎಂದು ಕ್ಲಬ್‌ನ ಜಿಲ್ಲಾ ರಾಜ್ಯಪಾಲೆ ಪೂರ್ಣಿಮಾ ರವಿ ಹೇಳಿದರು.

ಇನ್ನರ್‌ವ್ಹೀಲ್ ಕ್ಲಬ್‌ಗೆ ಶನಿವಾರ ಭೇಟಿ ಸಂದರ್ಭದಲ್ಲಿ ರೋಟರಿ ಭವನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಆಧುನಿಕ ತಂತ್ರಜ್ಞಾನಕ್ಕೆ ಹೆಚ್ಚು ಒತ್ತು ನೀಡಬೇಕಿದ್ದು ಯಾವುದೇ ಕಾರ್ಯಕ್ರಮವನ್ನು ಡಿಜಿಟಲೀಕರಣಗೊಳಿಸಬೇಕು. ಸಮಾಜದಲ್ಲಿ ವೃದ್ಧರನ್ನು ಹಲವೆಡೆ ಕಡೆಗಾಣಿಸುತ್ತಿರುವ ಪ್ರವೃತ್ತಿ ಹೆಚ್ಚುತ್ತಿದ್ದು ವಯಸ್ಸಾದವರ ನೆರವಿಗೆ ಕ್ಲಬ್ ಕಾರ್ಯಕ್ರಮ ರೂಪಿಸಬೇಕು. ಹಿಂದುಳಿದ ಗ್ರಾಮ ಅಥವಾ ಸರ್ಕಾರಿ ಶಾಲೆಯನ್ನು ದತ್ತು ತೆಗೆದುಕೊಳ್ಳುವ ಮೂಲಕ ಅವುಗಳ ಅಭಿವೃದ್ಧಿ ಮಾಡಬೇಕು ಎಂದರು.
ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷೆ ಸೌಮ್ಯ ವಿಜಯಕುಮಾರ್, ಕ್ಲಬ್ ಸದಸ್ಯರ ಸಹಕಾರದಿಂದ ಈಗಾಗಲೇ ಹಲವಾರು ಜನಪರ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಹೇಳಿದರು. ರಾಮಕೃಷ್ಣ ಆಂಗ್ಲ ಮಾಧ್ಯಮ ಶಾಲೆಗೆ ಕುಡಿಯುವ ನೀರಿನ ಫಿಲ್ಟರ್ ಹಾಗೂ ಚೆಸ್ ಸ್ಪರ್ಧೆಯಲ್ಲಿ ವಿಜೇತರಾದ ರಾಮದತ್, ಅಭಿಶೂರ್ ಮತ್ತು ಜಲ್‌ಗೆ ಬಹುಮಾನ ನೀಡಲಾಯಿತು. ಪತ್ರಿಕಾ ದಿನಾಚರಣೆ ಅಂಗವಾಗಿ ಪತ್ರಕರ್ತರಾದ ಶಿವಶಂಕರ್, ಕೆ.ವಿ.ರಮೇಶ್, ರಾಘವೇಂದ್ರ ಅವರಿಗೆ ಗೌರವಿಸಲಾಯಿತು.
ಕಾರ್ಯದರ್ಶಿ ಮಂಜುಳಾ ಎಸ್.ಭಟ್, ಸುಜಾತಾ ನಟೇಶ್, ಪೂರ್ಣಿಮಾ ಸಿದ್ದಪ್ಪ, ಪ್ರಿಯದರ್ಶಿನಿ ಹೆಗ್ಡೆ, ಡಾ.ಭುವನೇಶ್ವರಿ ಬಲ್ಲಾಳ್, ಸರಳಾ, ರೋಟರಿ ಕ್ಲಬ್ ಅಧ್ಯಕ್ಷ ಕೆ.ಸಿ.ಚರಣ್, ಗೌತಮ್, ಸಿದ್ದಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net