ಶೋಡಸ್ಕಾರ ನೊಂಪಿ, ದಶಲಕ್ಷಣ ಪರ್ವ ಸಂಪನ್ನ

01
Published on

ಕಾಗವಾಡ: ತಾಲೂಕಿನ ಶೇಡಬಾಳ ಪಟ್ಟಣದ ಮಹಾವೀರ ದಿಗಂಬರ ಜೈನ್ ಮಂದಿರದಲ್ಲಿ ಬುಧವಾರ ಶೋಡಸ್ಕಾರ ನೊಂಪಿ ಹಾಗೂ ದಶಲಕ್ಷಣ ಪರ್ವ ಕಾರ್ಯಕ್ರಮದ ಸಮಾರೋಪ ಹಾಗೂ ಜನಿವಾರ ವಿತರಣೆ ಕಾರ್ಯಕ್ರಮ ಜರುಗಿತು.

ವಿವಿಧ ವಾದ್ಯ ವೃಂದ, ಪೂರ್ಣಕುಂಭ ಹೊತ್ತ ಮಹಿಳೆಯರು ಮೆರವಣಿಗೆ ಮೂಲಕ ಪಲ್ಲಕ್ಕಿ ಉತ್ಸವಕ್ಕೆ ಮೆರಗು ನೀಡಿದರು. ಮೆರವಣಿಗೆಯು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಜೈನ ಮಂದಿರಕ್ಕೆ ಆಗಮಿಸಿದರು. ಇದೇ ವೇಳೆ ಮಹಾವೀರ ದಿಗಂಬರ ಜೈನ ಬಸದಿಗೆ ಈ ವರ್ಷ ದೇಣಿಗೆ ನೀಡಿದ ಗಣ್ಯರನ್ನು ಸನ್ಮಾನಿಸಿ, ಗೌರವಿಸಲಾಯಿತು.

ಪಂಡಿತರಾದ ಸನ್ಮತಿ ಉಪಾಧ್ಯೆ, ಕುಮಾರ ಅಲಗೌಡರ ಶಾಸ್ತ್ರೋಕ್ತವಾಗಿ ಪೂಜಾ ವಿಧಿ-ವಿಧಾನಗಳನ್ನು ಮಂತ್ರ ಪಠಣದೊಂದಿಗೆ ನೆರವೇರಿಸಿದರು.

ಮಾಮಾಸಾಬ ಪಾಟೀಲ, ಸುನೀಲ ಪಾಟೀಲ, ಅತಿಕ್ರಾಂತ ಪಾಟೀಲ, ಅಶ್ವತ ಪಾಟೀಲ, ಶುಭಂ ಪಾಟೀಲ, ನೇಮಗೌಡ ಘೆನಪ್ಪಗೋಳ, ಮಹಾವೀರ ಬಾಬಣ್ಣವರ, ಬಾಬಾಸಾಬ ಸವದತ್ತಿ, ಜಿನ್ನಪ್ಪ ನಾಂದಣಿ, ಕುಮಾರ ಮಾಲಗಾಂವೆ, ಎಂ.ಎ. ಗಣೆ, ದಾದಾಸಾಬ ಸಾಬಣ್ಣವರ, ತಾತ್ಯಾಸಾಬ ಮೂಲಿಮನಿ, ಅಣ್ಣಾಸಾಬ ಪದ್ಮಣ್ಣವರ, ಸುಕುಮಾರ ಮುಕುಂದ, ಶಶಿಕಾಂತ ಘೆನಪ್ಪಗೋಳ, ಶ್ರತೀಕಾ ಪಾಟೀಲ, ಜಯಶ್ರೀ ನಾಂದಣಿ, ಮಂಜುಶಾ ಪಾಟೀಲ, ಸುರೇಖಾ ಮಾಲಗಾಂವೆ, ಜ್ಯೋತಿ ಪಾಟೀಲ, ವಿಮಲ ಸವದಿ, ಸಂಜೀವಿನಿ ಸಮಾಜ, ಸಪ್ನಾ ಖುರಪೆ, ಶುಭಾಂಗಿ ಸವದಿ, ಸನ್ಮತಿ ಘೇನಪ್ಪಗೋಳ, ಸಾವಿರಾರು ಸಂಖ್ಯೆಯಲ್ಲಿ ಶ್ರಾವಕ-ಶ್ರಾವಕಿಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net