

ಕಲಬುರಗಿ: ಶೈಕ್ಷಣಿಕವಾಗಿ ಬೆಳೆಯಲು ಉನ್ನತ ಶಿಕ್ಷಣ ಸಂಸ್ಥೆಗಳ ಕೊಡುಗೆ ಅಮೂಲ್ಯ ಎಂದು ಶರಣಬಸವ ವಿಶ್ವವಿದ್ಯಾಲಯದ ಕುಲಸಚಿವ ಡಾ.ಎಸ್.ಜಿ.ಡೊಳ್ಳೆಗೌಡರ ಹೇಳಿದರು.
ಕಲಬುರಗಿಯ ಶರಣಬಸವೇಶ್ವರ ದೇವಸ್ಥಾನದಲ್ಲಿ ೩೦ ದಿನದ ಸಾಂಸ್ಕೃತಿಕ ಶಿವಾನುಭವ ಉಪನ್ಯಾಸ ಮಾಲಿಕೆಯಲ್ಲಿ ಭಾನುವಾರ ಶರಣಬಸವೇಶ್ವರ ಸಂಸ್ಥಾನ ಉನ್ನತ ಶಿಕ್ಷಣ ಸಂಸ್ಥೆಗಳು ವಿಷಯ ಕುರಿತು ಮಾತನಾಡಿದರು.
ಡಾ.ಶರಣಬಸವಪ್ಪ ಅಪ್ಪ ೮೦ಕ್ಕಿಂತ ಅಧಿಕ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಈ ಭಾಗ ರ‍್ಥಿಕ, ಸಾಮಾಜಿಕ ಬೆಳವಣಿಗೆಗೆ ಕಾರಣರಾಗಿದ್ದಾರೆ. ಶರಣಬಸವೇಶ್ವರ ಶಿಕ್ಷಣ ಸಂಸ್ಥೆ ಇಲ್ಲದಿದ್ದರೆ ಈ ಭಾಗ ಶೈಕ್ಷಣಿಕವಾಗಿ ಹಿಂದುಳಿಯುತ್ತಿತ್ತು. ೧೯೫೭ರಲ್ಲಿ ಎಂಎ ಫೈನ್‌ರ‍್ಟ್ ಶರಣಬಸವೇಶ್ವರ ಕಲಾ ಮಹಾವಿದ್ಯಾಲಯ, ೧೯೬೧ ರಲ್ಲಿ ಶರಣಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯ, ಬಸವಕಲ್ಯಾಣದಲ್ಲಿ ೧೯೬೭ ರಲ್ಲಿ ಎಸ್‌ಎಸ್‌ಕೆ ಬಸವೇಶ್ವರ ಕಾಲೇಜ್ ಆಫ್ ರ‍್ಟ್ ಸೈನ್ಸ್ ಕಾಲೇಜ್, ೧೯೭೩ರಲ್ಲಿ ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ ವಾಣಿಜ್ಯ ಪದವಿ ಮಹಿಳಾ ಮಹಾವಿದ್ಯಾಲಯ, ದೊಡ್ಡಪ್ಪ ಅಪ್ಪ ಬಿ.ಇಡಿ ಕಾಲೇಜ್, ಗೋದುತಾಯಿ ಬಿ.ಎಡ್ ಕಾಲೇಜ್, ಶರಣಬಸವೇಶ್ವರ ಬಿ.ಇಡಿ ಕಾಲೇಜ್, ಸ್ನಾತ್ತಕೋತ್ತರ ಕಂಪ್ಯೂಟರ್ ಸೈನ್ಸ್ ಶರಣಬಸವೇಶ್ವರ ಕಾಲೇಜ್ ಆಫ್ ಸೈನ್ಸ್ ಸೇರಿ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಪೂಜ್ಯ ಡಾ.ಅಪ್ಪ ಸ್ಥಾಪಿಸಿ, ಶೈಕ್ಷಣಿಕ ಪ್ರಗತಿಗೆ ಭದ್ರ ಬುನಾದಿ ಹಾಕಿ, ಬೆಳೆಸಿದ್ದಾರೆ.
ಗುರುಶಿಷ್ಯರ ಪರಂಪರೆಯನ್ನು ತಮ್ಮ ಶಿಕ್ಷಣ ಸಂಸ್ಥೆಯಲ್ಲಿ ಪೂಜ್ಯರು ಅಳವಡಿಸಿದ್ದಾರೆ. ಶಿಕ್ಷಣದ ಜತೆಗೆ ಮಾನವೀಯ ಮೌಲ್ಯ ವಿದ್ಯಾಥಿಗಳಲ್ಲಿ ಬೆಳೆಸಲಾಗುತ್ತಿದೆ. ವಿದ್ಯರ‍್ಥಿಗಳಿಗೆ ಮತ್ತು ಸಿಬ್ಬಂದಿಗೆ ಎಲ್ಲ ಸೌಲಭ್ಯ ಒದಗಿಸುತ್ತಾರೆ. ರಾಜ್ಯದಲ್ಲಿ ಎರಡನೇ ಅತಿ ದೊಡ್ಡ ಗ್ರಂಥಾಲಯ ಶರಣಬಸವೇಶ್ವರ ಸಂಸ್ಥಾನದಲ್ಲಿದೆ. ಇಲ್ಲಿ ಕಲಿತ ಲಕ್ಷಾಂತರ ವಿದ್ಯರ‍್ಥಿಗಳು ದೇಶ ವಿದೇಶಗಳಲ್ಲಿ ಉತ್ತಮ ಬದುಕು ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದಾರೆ ಎಂದರು.