ಶೈಕ್ಷಣಿಕ, ಸಾಂಸ್ಕೃತಿಕ ಚಟುವಟಿಕೆಗೆ ಜಮೀನು ಕೊಡಿ

Modi
Published on

ಕಲಬುರಗಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾಗೆ ಶೈP್ಷÀಣಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆ ಕೈಗೊಳ್ಳಲು ಅನುಕೂಲವಾಗುವಂತೆ ಶರಣಸಿರಸಗಿ ಬಳಿ ಐದು ಎಕರೆ ಸರ್ಕಾರಿ ಜಮೀನು ನೀಡಬೇಕು ಎಂದು ಆಗ್ರಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಂಗಳವಾರ ಮನವಿಪ್ರ ಸಲ್ಲಿಸಲಾಯಿತು.
ಶರಣಸಿರಸಗಿ ಸಮೀಪದ ಸರ್ವೇ ನಂ.೨೪೩ರಲ್ಲಿ ೨೯.೨೧ ಎಕರೆ, ಮತ್ತೊಂದೆಡೆ ಸರ್ವೇ ನಂ.೨೪೫/೨ರಲ್ಲಿ ೧೬ ಎಕರೆ ಲಭ್ಯವಿದೆ. ಈ ಜಮೀನುಗಳ ಪೈಕಿ ಒಂದೆಡೆ ಐದು ಎಕರೆ ಜಮೀನು ಒದಗಿಸಬೇಕು ಎಂದು ಕೋರಿತು.
ಸಚಿವರಾದ ಶರಣಬಸಪ್ಪ ದರ್ಶನಾಪುರ, ಡಾ.ಶರಣಪ್ರಕಾಶ ಪಾಟೀಲ್, ಸಿಎಂ ಸಲಹೆಗಾರ ಬಿ.ಆರ್. ಪಾಟೀಲ್, ಶಾಸಕ ಎಂ.ವೈ.ಪಾಟೀಲï, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲï ನರಿಬೋಳ, ಮಹಾಸಭಾ ಜಿಲ್ಲಾಧ್ಯಕ್ಷ ಶರಣಕುಮಾರ ಮೋದಿ, ಸಮುದಾಯದ ರಾಜಶೇಖರ ಸಿರಿ, ಶಿವಾನಂದ ಪಾಟೀಲï ಮರತೂರ ನಿಯೋಗದಲ್ಲಿದ್ದರು.
ಮನವಿಪತ್ರ ಪರಿಶೀಲಿಸಿದ ಸಿಎಂ ಸಿದ್ದರಾಮಯ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸ್ಥಳದ¯್ಲೆÃ ಇದ್ದ ಜಿ¯್ಲÁಧಿಕಾರಿಗಳಿಗೆ ನಿರ್ದೇಶನ ನೀಡಿ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಸಚಿವ ಪ್ರಿಯಾಂಕ್ ಖರ್ಗೆ ಡಿಸಿಗೆ ಸೂಚನೆ ನೀಡಿ ತುರ್ತಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ನಿರ್ದೇಶನ ನೀಡಿದರಲ್ಲದೆ ನಾನು ಮೇಲುಸ್ತುವಾರಿ ವಹಿಸುವುದಾಗಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net