ಶೈಕ್ಷಣಿಕ ಅರಿವು ಮುಖ್ಯ

bkt-25-5 (2)
ಬಾಗಲಕೋಟೆಯಲ್ಲಿ ಕುರುಬರ ಸಂಘದಿಂದ ಹಮ್ಮಿಕೊಂಡ ಪ್ರತಿಭಾ ಪುರಸ್ಕಾರ ಸಮಾರಂಭ ಶಿರೂರಿನ ಕನಕ ಬ್ರಹ್ಮವಿದ್ಯಾಶ್ರಮದ ಚಿನ್ಮಯಾನಂದ ಸ್ವಾಮೀಜಿ, ಸೀತಿಮನಿಯ ಶ್ರದ್ಧಾನಂದ ಪೀಠದ ಬ್ರಹ್ಮಶ್ರೀ ವೈಶಿಷ್ಠಮುನಿ, ಬಾದಿಮನಾಳದ ಶಿವಸಿದ್ದೇಶ್ವರ ಸ್ವಾಮೀಜಿ ಉದ್ಘಾಟಿಸಿದರು. ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌದರಿ, ರಕ್ಷಿತಾ ಭರತಕುಮಾರ ಈಟಿ, ಡಿ.ಬಿ.ಸಿದ್ದಾಪುರ ಇತರರು ಇದ್ದರು.
Published on

ಬಾಗಲಕೋಟೆ: ಸಮುದಾಯ ಸಮಗ್ರ ಮುನ್ನಡೆ ಸಾಽಸಬೇಕಾದ ನಮ್ಮ ಮಕ್ಕಳು ರಾಜಕೀಯ, ಶೈಕ್ಷಣಿಕ, ಸಾಮಾಜಿಕ ಅರಿವು ಬೇಕು. ಅದಕ್ಕೆ ಶಿಕ್ಷಣ ಪಡೆಯುವುದು ಮುಖ್ಯ ಎಂದು ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ ಹೇಳಿದರು.

ನವನಗರದ ಕಲಾಭವನದಲ್ಲಿ ಭಾನುವಾರ ಕರ್ನಾಟಕ ಪ್ರದೇಶ ಕುರುಬರ ಸಂಘದ ಜಿಲ್ಲಾ ಘಟಕದಿಂದ ಎಸ್ಸೆಸ್ಸೆಲ್ಸಿ, ಪಿಯುಸಿ ಮಕ್ಕಳ ಪ್ರತಿಭಾಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಎಲ್ಲ ರಂಗದಲ್ಲೂ ಪ್ರಗತಿ ಹೊಂದಲು ಸಂಘಟನೆ ಹೋರಾಟ ಸರಿಯಾದ ಹಾದಿಯಲ್ಲಿರಬೇಕು. ಅದಕ್ಕೆ ಶಿಕ್ಷಣ ಅತಿ ಅವಶ್ಯವಾಗಿದ್ದು, ತಪ್ಪದೆ ಮಕ್ಕಳಿಗೆ ಶಿಕ್ಷಣ ಕೊಡಿಸುವ ಕೆಲಸವಾಗಬೇಕು ಎಂದರು.

ಹಾಲಮತ ಸಮಾಜದವರು ಮೊದಲು ಅಂತ ಹೇಳಿಕೊಳ್ಳಲು ಹಿಂಜರಿಕೆ ಕಾಣುತ್ತಿತ್ತು. ಸಿದ್ದರಾಮಯ್ಯ ಸಿಎಂ ಆದ ಬಳಿಕ ಅಭಿಮಾನ ಪಡುತ್ತಿದ್ದೇವೆ. ಸಂಘಟನೆ, ಹೋರಾಟದ ಫಲವಾಗಿ ಸಿದ್ದರಾಮಯ್ಯ ಎರಡನೇ ಬಾರಿ ಸಿಎಂ ಆಗಿದ್ದಾರೆ. ಅವರು ಸಮುದಾಯಕ್ಕೆ ಆದರ್ಶರಾಗಿದ್ದಾರೆ. ಹಳ್ಳಿಯಿಂದ ದೆಹಲಿ ವರೆಗೂ ಸಿದ್ದರಾಮಯ್ಯ ಹೆಸರು ಆಕಾಶದತ್ತೆರಕ್ಕೆ ಇದೆ. ವಿದ್ಯಾರ್ಥಿಗಳು ಆರಂಭದಿಂದಲೇ ಉತ್ತಮ ಶಿಕ್ಷಣ ಪಡೆದು ಜೀವನ ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.

ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌದರಿ, ನನಗೂ ಸಿಎಂ ಆಗಬೇಕೆಂಬ ಕನಸಿದೆ. ಬದುಕಿನಲ್ಲಿ ಅವಕಾಶ ದೊರೆತರೆ ಈ ರಾಜ್ಯದ ಚುಕ್ಕಾಣೆ ಹಿಡಿಯಲು ಸಿದ್ದಳಾಗಿದ್ದೇನೆ. ಸಿಎಂ ಸಿದ್ದರಾಮಯ್ಯ ಅವರು ಬಡವರ, ನಿರಾಶ್ರೀತರ, ದೀನದಲಿತರ ಪರ ಕಾಳಜಿಯುಳ್ಳವರು. ಅವರಂತೆ ಜನರ ಶ್ರೇಯಸ್ಸು ಬಯಸಲು ರಾಜಕಾರಣಿಯಾಗಬೇಕು. ಆವರ ಜೀವನ ನಮಗೆಲ್ಲ ಮಾದರಿ ಇದ್ದಂತೆ. ಕನಸು ಸಹಜ ಆದರೆ ಕನಸಿನಂತೆ ಗುರಿ ಸಾಧನೆಗೆ ಶ್ರಮ ಪಡಬೇಕು. ತಂದೆ-ತಾಯಿ, ನಿಮ್ಮೂರನ್ನು ಮರೆಯದೆ ಅವರ ಋಣ ತೀರಿಸಲು ಮುಂದಾಗಬೇಕು ಎಂದು ಹೇಳಿದರು.

ಶಿರೂರಿನ ಕನಕ ಬ್ರಹ್ಮವಿದ್ಯಾಶ್ರಮದ ಚಿನ್ಮಯಾನಂದ ಸ್ವಾಮೀಜಿ, ಸೀತಿಮನಿಯ ಶ್ರದ್ಧಾನಂದ ಪೀಠದ ಬ್ರಹ್ಮಶ್ರೀ ವೈಶಿಷ್ಠಮುನಿ, ಬಾದಿಮನಾಳದ ಶಿವಸಿದ್ದೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕುರುಬರ ಸಂಘದ ಜಿಲ್ಲಾಧ್ಯಕ್ಷ ಡಿ.ಬಿ.ಸಿದ್ದಾಪುರ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ರಾಜ್ಯ ಚುನಾವಣಾ ಆಯುಕ್ತ ಜಿ.ಎಸ್.ಸಂಗ್ರೇಶಿ, ಡಾ.ಎಚ್.ಡಿ.ಪಾಟೀಲ, ಕೆಎಂಎಫ್ ಅಧ್ಯಕ್ಷ ಈರನಗೌಡ ಕರಿಗೌಡರ, ಡಾ.ಕಿರಣಕುಮಾರ ಕುಳಗೇರಿ, ಸಂಗಣ್ಣ ಹಂಡಿ, ಎಂ.ಎಲ್.ಶಾಂತಗೇರಿ, ಬಸವಂತಪ್ಪ ಅಂಟರತಾನಿ, ನಗರಸಭೆ ಸದಸ್ಯರಾದ ಶಾಂತಾ ಹನಮಕ್ಕನ್ನವರ, ಸರಸ್ವತಿ ಕುರುಬರ ಸೇರಿದಂತೆ ಸಮಾಜದ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net