

ಬಾಗಲಕೋಟೆ: ಕೇಂದ್ರ ಸರ್ಕಾರ ಶೇ.೩೩ ಮಹಿಳಾ ಮೀಸಲಾತಿ ಮಸೂದೆ ಮಂಡಿಸುತ್ತಿರುವುದಕ್ಕೆ ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಸ್ವಾಗತಿಸಿದ್ದು, ಇದು ಹೊಸತಲ್ಲ. ನಮ್ಮ ಪಕ್ಷ ಇದಕ್ಕೆ ಹತ್ತು ವರ್ಷಗಳಿಂದ ಬೆಂಬಲಿಸುತ್ತ ಬಂದಿದೆ ಎಂದಿದ್ದಾರೆ.
ಬಾಗಲಕೋಟೆಯಲ್ಲಿ ಮಂಗಳವಾರ ಈ ವಿಚಾರವಾಗಿ ಮಾತನಾಡಿರುವ ಅವರು, ಮಹಿಳಾ ಮೀಸಲಾತಿ ಜನರಿಗೆ ಬರಬೇಕು ಎಂದು ನಮ್ಮ ಪಕ್ಷ ಹೇಳುತ್ತ ಬಂದಿದೆ. ಮನಮೋಹನ ಸಿಂಗ್ ಅವರ ಕಾಲದಿಂದಲೂ ಇದು ಇದೆ. ಹೀಗಾಗಿ ಇದನ್ನು ನಮ್ಮ ಪಕ್ಷ ಸ್ವಾಗತಿಸುತ್ತಿದೆ ಎಂದರು.
ಲೋಕಸಭೆ ಚುನಾವಣೆ ಹೊತ್ತಲ್ಲಿ ಕೇಂದ್ರ ಸರ್ಕಾರ ಇನ್ನು ಮಂಡಿಸುತ್ತಿರುವ ಬಗ್ಗೆ, ನೆಗಟಿವ ಆದರೂ ಅದನ್ನು ಪಾಸಿಟಿವ್ ಮಾಡಿಕೊಳ್ಳಬೇಕು. ರಾಜಕಾರಣ ಹಾಗೂ ರಾಷ್ಟ್ರೀಯ ಪಕ್ಷಗಳು ನೆಗಟಿವನ್ನು ಪಾಸಿಟಿವ್ ಮಾಡಿಕೊಳ್ಳುವುದನ್ನು ಕಲಿಯಬೇಕು. ಇದನ್ನು ನೆಗಟಿವï ಮಾಡಿಕೊಂಡರೆ ಗುದ್ದಾಟ ಶುರುವಾಗುತ್ತದೆ. ಮಹಿಳಾ ಮೀಸಲಾತಿಯನ್ನು ನಾವು ಮತ್ತು ನಮ್ಮ ಪಕ್ಷ ಸ್ವಾಗತಿಸುತ್ತದೆ ಎಂದು ಹೇಳಿದರು.