ಶೃಧ್ಧಾಭಕ್ತಿಯಿಂದ ಜರುಗಿದ ಶ್ರೀ ಕಾಳಿಕಾಂಭಾದೇವಿಯ ರಥೋತ್ಸವ

05e29799-aaff-4084-a1db-b82ccaea479e
ಶೃಧ್ಧಾಭಕ್ತಿಯಿಂದ ಜರುಗಿದ ಶ್ರೀ ಕಾಳಿಕಾಂಭಾದೇವಿಯ ರಥೋತ್ಸವ.
Published on

ಬಾಗಲಕೋಟೆ ವಿದ್ಯಾಗಿರಿಯಲ್ಲಿ ವಿಶ್ವಕರ್ಮ ಸಮಾಜ ಅಭಿವೃದ್ಧಿ ಸಂಘದಿಂದ ಹಮ್ಮಿಕೊಂಡ ಶ್ರೀ ಕಾಳಿಕಾಂಬಾ ದೇವಿಯ ೧೭ ನೇ ಪ್ರತಿಷ್ಠಾವರ್ಧಂತಿ ಜಾತ್ರಾ ಉತ್ಸವ,ಹಾಗೂ ಶ್ರೀ ಗಣೇಶ,ಶ್ರೀ ವಿರಾಟ ವಿಶ್ವಕರ್ಮ ಭಗವಾನ ದೇವರುಗಳ ೧೫ ನೇ ವಾರ್ಷಿಕ ಪ್ರತಿಷ್ಠಾಪನಾ ಸಮಾರಂಭದ ಅಂಗವಾಗಿ ನಡೆದ ಜಾತ್ರ ಮಹೋತ್ಸವದಲ್ಲಿ ಮಂಗಳಾವಾರ ಅದ್ದೂರಿಯಾಗಿ ರಥೋತ್ಸವ ಜರುಗಿತು.

ಬೇಳಿಗಿನ ಜಾವ ವಿರಾಟ ವಿಶ್ವಕರ್ಮ ಧ್ವಜಾರೋಹಣ, ಕಟಪಾಡಿಯ ವೇ.ಬ್ರಹ್ಮ ಶ್ರೀಧರ ಶರ್ಮಾ ಹಾಗೂ ವೇ.ಬ್ರ. ಶ್ರೀ ಬಾಳಕೇಷ್ಣಾಚಾರ್ಯ ಕಡ್ಲಾಸ್ಕರ ಪುರೋಹಿತರಿಂದ ವಾಸ್ತು ಹೋಮ,ರಾಕ್ಷೆಘ್ನ ಹೋಮ,ಹಾಗೂ ನವನಗ್ರಹ ಹೋಮ, ನವಕ ಕಲಾ ಹೋಮ,ಕ್ಷೇತ್ರಾಧೀದೇವತೆಗೆ ಹಾಗೂ ಪರಿವಾರ ದೇವತೆಗಳಿಗೆ ಪಂಚಾಮೃತಾಭಿಷೇಕ, ಅಲಂಕಾರ ಪೂಜೆ,ರಾಜೋಪಚಾರ,ಪ್ರಸನ್ನ ಮಹಾಪೂಜೆ,ಮಹಾಮಂಗಳಾರುತಿ ಮಾಡಿ ತೀರ್ಥ ಪ್ರಸಾದ ವಿತರಣೆ ಮಾಡಿಲಾಯಿತು, ನಂತರ ಮದ್ಯಾಹ್ನ ಭಕ್ತಾಧಿಗಳಿಂದ ಅನ್ನ ಸಂತರ್ಪಣೆ ಕಾರ್ಯಕ್ರಮ ಜರುಗಿತು, ಸಂಜೆ ಸಕಲ ಮಂಗಲವಾದ್ಯ ಹಾಗೂ ವೇದ ಘೋಷಗಳೊಂದಿಗೆ ಶ್ರೀ ಕಾಳಿಕಾ ದೇವಿಯ ರಥೋತ್ಸವ ಜರುಗಿತು.

ವಿದ್ಯಾಗಿರಿ ವಿಶ್ವಕರ್ಮ ಸಮಾಜದ ಅಭಿವೃದ್ಧಿ ಸಂಘದ ಅಧ್ಯಕ್ಷರಾದ ವಸಂತರಾವ ಕಮ್ಮಾರ,ಉಪಾಧ್ಯಕ್ಷರಾದ ಈರಪ್ಪ ಪತ್ತಾರ,ಪ್ರದಾನ ಕಾರ್ಯದರ್ಶಿ ಗುರುರಾಜ ಅಗಳತಕಟ್ಟಿ, ಸಹಕಾರ್ಯದರ್ಶಿ ಹೆಚ್,ಟಿ,ಪತ್ತಾರ. ಆರ,ಜಿ ಪತ್ತಾರ,ಗಂಗಾಧರ ಬಡಿಗೇರ,ದೇವಿಪ್ರಸಾದ ಮಾಯಾವಾರ,ಮಾನಪ್ಪ ಸೋನಾರ,ರಾಚಪ್ಪ ಬಡಿಗೇರ,ಈರಪ್ಪ ಬಡಿಗೇರ,ರವೀಂದ್ರ ಬಡಿಗೇರ. ವಿಶ್ವಕರ್ಮ ತರುಣ ಸಮಿತಿಯ ಅಧ್ಯಕ್ಷ ಯಂಕಪ್ಪ ಬಡಿಗೇರ,ಬಸವರಾಜ ಬಡಿಗೇರ,ಕಾಳಿಕಾಂಬಾ ಮಹಿಳಾ ಮಂಡಳ ಅಧ್ಯಕ್ಷೆ ಛಾಯಾ ಪತ್ತಾರ,ಭಾರತಿ ಪತ್ತಾರ,ವಿಮಲಾ ಅಗಳತಕಟ್ಟಿ,ರಾಜೇಶ್ವರಿ ಸೋನಾರ,ಕಲಾವತಿ ಮಾಯಾಚಾರ,ವಿದ್ಯಾವತಿ ಬಡಿಗೇರ,ಯಂಕೂಬಾಯಿ ಬಡಿಗೇರ ಸೇರಿದಂತೆ ವಿದ್ಯಾಗಿರಿಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಾಗವಬಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net