ಶೀಘ್ರದಲ್ಲೇ ಒಳ ಕ್ರೀಡಾಂಗಣ ಉದ್ಘಾಟನೆ

24KMD-1
Published on

ಕೆ.ಎಂ.ದೊಡ್ಡಿ: ವಿದ್ಯಾರ್ಥಿ ಮತ್ತು ಶಿಕ್ಷಕರ ಅನುಕೂಲಕ್ಕಾಗಿ 4 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಇನ್‌ಡೋರ್ ಸ್ಟೇಡಿಯಂ ಶೀಘ್ರದಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ವಿಧಾನ ಪರಿಷತ್ ಸದಸ್ಯ, ಭಾರತೀ ವಿದ್ಯಾಸಂಸ್ಥೆ ಚೇರ‌್ಮನ್ ಮಧು ಜಿ. ಮಾದೇಗೌಡ ತಿಳಿಸಿದರು.

ಇಲ್ಲಿನ ಭಾರತೀ ಕಾಲೇಜಿನ ಕ್ರೀಡಾಂಗಣದಲ್ಲಿ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗ ಮತ್ತು ಭಾರತೀ ಶಿಕ್ಷಣ ಮಹಾವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಭಾರತೀ ವಿದ್ಯಾಸಂಸ್ಥೆಯ ಅಂಗಸಂಸ್ಥೆಗಳ ನೌಕರರ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.

ಶಿಕ್ಷಕರು ಪಾಠದ ಜತೆಗೆ ಆಟವನ್ನು ರೂಢಿಸಿಕೊಂಡರೆ ಮಕ್ಕಳ ಮೇಲೆ ಪರಿಣಾಮ ಬೀರಲಿದೆ ಎಂದರು. ಸುಸಜ್ಜಿತ ಕ್ರೀಡಾಂಗಣಕಾಗಿ 18 ಕೋಟಿ ರೂ.ಗಳನ್ನು ನೀಡಿ ಜಮೀನು ಖರೀದಿಸಲಾಗಿದೆ. ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಂಗಣ ರೂಪಿಸಲು ಯೋಜನೆ ಸಿದ್ಧಪಡಿಸಲಾಗಿದೆ ಎಂದರು.

ಇವತ್ತಿನ ದಿನಗಳಲ್ಲಿ ಒತ್ತಡಗಳ ನಿವಾರಣೆಯಾಗಬೇಕಾದರೆ ಕ್ರೀಡೆಯಲ್ಲಿ ಭಾಗವಹಿಸಬೇಕು, ನಿತ್ಯ ವ್ಯಾಯಾಮ ಮಾಡುವ ಮೂಲಕ ಮನಸ್ಸಿಗೆ ಉತ್ಸಾಹ, ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು. ವಯಸ್ಸಾದ ಮೇಲೆ ಕಾಯಿಲೆಗಳು ಹೆಚ್ಚಾಗಿ ಬರುತ್ತವೆ. ಇಲ್ಲಿ ಯಾರೂ ಚಿರಂಜೀವಿಗಳಿಲ್ಲ, ಹಾಗಾಗಿ ಪ್ರತಿದಿನ ಜಂಕ್‌ಫುಡ್ ತಿನ್ನುವುದನ್ನು ನಿಲ್ಲಿಸಿ ಬೆಳಗ್ಗೆ ಸಂಜೆ ಜಿಮ್, ವಾಕ್ ಮಾಡಬೇಕು ಎಂದರು.

ಪುರುಷ ವಿಭಾಗ: 40 ವರ್ಷದ ಒಳಗಿನ, 40 ವರ್ಷದ ಮೇಲ್ಪಟ್ಟ ಪುರುಷ ಗುಂಪು ಆಟಗಳು

ಗುಂಪು ಆಟಗಳಾದ ಕ್ರಿಕೆಟ್, ಹಗ್ಗ ಜಗ್ಗಾಟ ವೈಯಕ್ತಿಕ ಸ್ಪರ್ಧೆಗಳು: 100 ಮೀಟರ್ ಓಟ, ಗುಂಡು ಎಸೆತ, 2ಕಿ.ಮೀ ವಾಕಿಂಗ್ ರೇಸ್, ಲಾಂಗ್ ಜಂಪ್.

ಮಹಿಳಾ ವಿಭಾಗ: 40 ವರ್ಷದ ಒಳಗಿನ, 40 ವರ್ಷದ ಮೇಲ್ಪಟ್ಟ ಮಹಿಳಾ ಗುಂಪು ಆಟಗಳು ಥೋಬಾಲ್, ಹಗ್ಗ ಜಗ್ಗಾಟ.

ವೈಯಕ್ತಿಕ ಸ್ಪರ್ಧೆಗಳು: ಲಾವ ವಾಕ್, ಲೆಮನ್ ಇನ್ ದಿ ಸ್ಪೂನ್, 100 ಮೀಟರ್ ಓಟ, ಗುಂಡು ಎಸೆತ, 1ಕಿ.ಮೀ ವಾಕಿಂಗ್ ರೇಸ್. ಸ್ಪರ್ಧೆಗಳಲ್ಲಿ ಶಿಕ್ಷಕರು ಭಾಗವಹಿಸಿದರು.

ಸಂಚಾಲಕ ಭಾರತೀ ಬಿಇಡಿ ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ಎಲ್.ಸುರೇಶ್, ಸಂಯೋಜಕರಾದ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗದ ಎಂ.ಕೆ.ಸುನೀಲ್ ಕುಮಾರ್, ಶೋಭಾ, ಎಸ್.ನಾಗರಾಜ, ವಿವಿಧ ಅಂಗ ಸಂಸ್ಥೆಯ ಪ್ರಾಂಶುಪಾಲರಾದ ಡಾ.ಎಂ.ಎಸ್.ಮಹದೇವಸ್ವಾಮಿ, ಪ್ರೊ.ಎಸ್.ನಾಗರಾಜ, ಡಾ.ಬಿ.ಆರ್.ಚಂದನ್, ಸಿ.ವಿ.ಮಲ್ಲಿಕಾರ್ಜುನ್, ಡಾ.ಬಾಲಸುಬ್ರಹ್ಮಣ್ಯಂ, ಡಾ.ತಮಿಜ್ ಮಣಿ, ಸಿ.ರಮ್ಯಾ, ಜಿ.ಬಿ.ಪಲ್ಲವಿ, ಪಿ. ರಾಜೇಂದ್ರ ರಾಜೇಅರಸು, ಅಂಗ ಸಂಸ್ಥೆಯ ಮುಖ್ಯಸ್ಥರು, ಅಧ್ಯಾಪಕರು ಹಾಗೂ ಅಧ್ಯಾಪಕೇತರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net