ಶೀಘ್ರದಲ್ಲಿ ಹೊಸ ಪ್ರಾದೇಶಿಕ ಪಕ್ಷ ಸ್ಥಾಪನೆ

bkt-20-8
ಬಾಗಲಕೋಟೆ ನಗರದ ಹೊಸ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರೈತ ಮುಖಂಡರಾದ ಮೋಹನರಾಜ ಆರ್., ಪುಟ್ಟರಾಜು ಗೌಡ, ವೀರಭದ್ರಸ್ವಾಮಿ ಎಚ್, ಹನುಮಂತಪ್ಪ ಬಿ.ಉಪಸ್ಥಿತರಿದ್ದರು.
Published on

ಬಾಗಲಕೋಟೆ: ಸದ್ಯ ರಾಜ್ಯದಲ್ಲಿ ಆಳ್ವಿಕೆ ಮಾಡುತ್ತಿರುವ ಯಾವುದೇ ರಾಜಕೀಯ ರಾಜಕೀಯ ಪಕ್ಷಗಳಿಗೆ ಬದ್ಧತೆ, ಪ್ರಮಾಣಿಕತೆ ಇಲ್ಲ. ನಾಡು, ನುಡಿ, ನೆಲ, ಜಲ, ಭಾಷೆ ರಕ್ಷಣೆ ವಿಚಾರದಲ್ಲಿ ಇಬ್ಬಗೆಯ ನೀತಿ ಅನುಸರಿಸುತ್ತಿದ್ದಾರೆ. ಕರ್ನಾಟಕದ ಸಮಗ್ರ ಅಭಿವೃದ್ಧಿಗೆ, ಪ್ರಾದೇಶಿಕ ಅಸಮಾನತೆ ಹೋಗಲಾಡಿಸಲು ಪ್ರಾದೇಶಿಕವನ್ನು ಸ್ಥಾಪಿಸಲಾಗುವುದು ಎಂದು ಕರ್ನಾಟಕ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಹೇಳಿದರು.

ನಗರದ ಹೊಸ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲ ರಾಷ್ಟಿçÃಯ ಪಕ್ಷಗಳು ಜಾತಿ ವಿಭಜನೆ, ಕಡು ಭ್ರಷ್ಟರಾಗಿದ್ದು, ಇಂತಹ ಪಕ್ಷಗಳನ್ನು ತೀರಸ್ಕರಿಸಲು ಪ್ರಾದೇಶಿಕ ಪಕ್ಷ ರಾಜ್ಯದಲ್ಲಿ ಅವಶ್ಯಕತೆ ಇದೆ. ಮುಂದಿನ ೨೦೨೮ ಚುನಾವಣೆಗೆ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗುವುದು. ಜನ ಅವಕಾಶ ನೀಡಿದರೇ ಸ್ವತಂತ್ರವಾಗಿ ಅಽಕಾರಕ್ಕೆ ಬರುತ್ತೇವೆ. ಇಲ್ಲವಾದಲ್ಲಿ ನಮ್ಮನ್ನು ಬಿಟ್ಟು ಯಾವುದೇ ಪಕ್ಷ ಅಽಕಾರಕ್ಕೆ ಬರಲು ಬಿಡುವದಿಲ್ಲ. ಅಷ್ಟೊಂದು ಸ್ಥಾನ ಪಡೆಯುವ ವಿಶ್ವಾಸವಿದೆ ಎಂದರು.

ಎಲ್ಲ ರಾಜಕೀಯ ಪಕ್ಷಗಳಲ್ಲಿ ಸೇವಾಮನೋಭಾವನೆ ಕೊರೆತೆ ಇದ್ದು, ಅಽಕಾರ ಹಿಡಿಯಲು ಹೊರಟಿದ್ದು, ರಾಜಕೀಯ ಗುಂಪುಗಳಾಗಿ ರಚನೆ ಯಾಗುತ್ತಿವೆ. ಗೊತ್ತು ಗುರಿ ಇಲ್ಲದಂತಹ ರಾಜಕೀಯ ಪಕ್ಷಗಳು ಈಗ ಇದ್ದು, ತತ್ವ ಸಿದ್ದಾಂತಗಳನ್ನು ಎಲ್ಲ ಪಕ್ಷಗಳು ಗಾಳಿಗೆತೂರಿವೆ. ಹೀಗಾಗಿ ಪ್ರಾದೇಶಿಕ ಪಕ್ಷ ಸ್ಥಾಪನೆಗೆ ಸೂಕ್ತ ಸಂದರ್ಭ ಇದಾಗಿದೆ. ಸಂಪನ್ಮೂಲ ನಮಗೆ ಅವಶ್ಯವಿಲ್ಲ. ಸಂಘಟನಾ ಶಕ್ತಿಯೇ ದೊಡ್ಡ ಬಲ ಇದೆ ಎಂದು ತಿಳಿಸಿದರು.

ಉಪ ಮುಖ್ಯಮಂತ್ರಿ ಡಿ.ಕೆ. ಶಿವುಕುಮಾರ ಅವರು ಮಂಡ್ಯ ಜನತೆ ಬಗ್ಗೆ ಹಗುರವಾಗಿ ಮಾತನಾಡಿರುವುದು ಶೋಭೆ ತರುವದಿಲ್ಲ. ಡಿ.ಕೆ.ಶಿವಕುಮಾರ ಒಬ್ಬ ಮೂರ್ಖ. ತನ್ನ ಚಾರಿತ್ರ‍್ಯವನ್ನು ನೋಡಿಕೊಳ್ಳಲಿ. ವಿಶ್ವದಲ್ಲಿಯೇ ಅತ್ಯಂತ ಶ್ರೀಮಂತ ಶಾಸಕ. ರೈತರ ಬಗ್ಗೆ ಇವರಿಗೆ ಏನು ಗೊತ್ತಿದೆ ಅಂತ ತೀವಿದರು.

ದಲಿತ ಸಮುದಾಯಕ್ಕೆ ಬಜೆಟ್‌ನಲ್ಲಿ ನೀಡಿದಂತಹ ಹಣವನ್ನು ಸರ್ಕಾರ ಪಂಚ ಗ್ಯಾರಂಟಿಗೆ ಬಳಕೆ ಮಾಡಿಕೊಳ್ಳುತ್ತಿರುವುದು ಎಷ್ಟು ಸರಿ. ವಾಲ್ಮೀಕಿ ನಿಗಮದಲ್ಲಿ ನಡೆದ ಹಗರಣ ದಲಿತ ಸಮುದಾಯಕ್ಕೆ ಮಾಡಿದಂತ ಅನ್ಯಾಯವಾಗಿದೆ ಎಂದು ಟೀಕಿಸಿದ ಅವರು, ವಾಟಾಳ ನಾಗರಾಜ್ ಅವರು ಮಾ.೨೨ ರಂದು ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಬೆಂಬಲ ವಿದ್ದು, ಆದರೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕಾಗಿದೆ ಎಂದರು.

ರೈತ ಮುಖಂಡರಾದ ಮೋಹನರಾಜ ಆರ್., ಪುಟ್ಟರಾಜು ಗೌಡ, ವೀರಭದ್ರಸ್ವಾಮಿ ಎಚ್, ಹನುಮಂತಪ್ಪ ಬಿ.ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net