

ಬಾಗಲಕೋಟೆ: ಸಮಾಜದಲ್ಲಿ ಅಂಧ, ಅನಾಥ, ನಿರ್ಗತಿಕ, ಬಡ ಮಕ್ಕಳಿಗೆ ಅನ್ನ, ವಸö, ವಸತಿ, ವ್ಯವಸ್ಥೆ ಮಾಡಿ ಅವರಿಗೆ ಸಂಗೀತ ಕಲಿಸುವುದರೊಂದಿಗೆ ಅವರನ್ನು ಮುಖ್ಯವಾಹಿನಿಗೆ ತರುವ ಮೂಲಕ ಸಂಗೀತ ಕ್ಷೇತ್ರಕ್ಕೆ ಬಹು ದೊಡ್ಡ ಕೊಡುಗೆ ನೀಡಿದ ಗಾನಯೋಗಿ ಪಂಚಾಕ್ಷರ ಗವಾಯಿಗಳ ಪ್ರತಿಷ್ಠಾನ ಶೀಘ್ರದಲ್ಲಿಯೇ ಮಾಡಲಾಗುವುದು ಎಂದು ಸಂಗೀತ ಶಿಕ್ಷಕ ಡಾ.ಶ್ರೀಕಾಂತ ಚಿಮ್ಮಲ ಹೇಳಿದರು.
ಇಲ್ಲಿನ ವಿದ್ಯಾಗಿರಿ ಸಾಯಿ ಮಂದಿರದಲ್ಲಿ ಈಚೆಗೆ ಗಾನಯೋಗಿ ಪಂಚಾಕ್ಷರ ಗವಾಯಿಗಳ ಶಿಷ್ಯರು ಹಾಗೂ ಅಭಿಮಾನಿಗಳು ಸೇರಿದ ಸಭೆಯಲ್ಲಿ ಮಾತನಾಡಿದ ಅವರು, ಪಂ ಪಂಚಾಕ್ಷರ ಗವಾಯಿಗಳು ಎಂಬ ಹೆಸರು. ಬಿರುದು ಬಂದಿರುವುದು ಬಾಗಲಕೋಟೆ ಜಿಲ್ಲೆ ಅಗಿರುವುದು ನಮ್ಮೆಲ್ಲರಿಗೆ ಹೆಮ್ಮೆಯ ವಿಷಯ. ಈ ಹಿನ್ನಲೆಯಿಂದಾಗಿ ಜಿಲ್ಲಾ ಮಟ್ಟದ ಎಲ್ಲ ಪ್ರಕಾರ ಕಲೆಗಳ ಕಲಾವಿದರು ಶಿಷ್ಯರು ಸೇರಿಕೊಂಡು ಅವರ ಹೆಸರಲ್ಲಿ ಪ್ರತಿಷ್ಠಾನ ಸ್ಥಾಪಿಸಲು ಎಲ್ಲ ಕಲಾವಿದರು ಸಹ ಮತ ವ್ಯಕ್ತಪಡಿಸಿರುವುದು ಸಂತಸ ತಂದಿದೆ.
ಕಲಾವಿದ ಆನಂದ ಕಂಬಳಿಹಾಳ ಮಾತನಾಡಿ, ಶೀಘ್ರದಲ್ಲಿಯೇ ಬಾಗಲಕೋಟೆಯಲ್ಲಿ ಪಂ ಪಂಚಾಕ್ಷರ ಗವಾಯಿಗಳ ಹೆಸರಲ್ಲಿ ಪ್ರತಿಷ್ಠಾನ ಸ್ಥಾಪಿಸುವ ಮೂಲಕ ಸಂಗೀತ ಹಾಗೂ ಎಲ್ಲ ಪ್ರಕಾರದ ಕಲೆಗಳ ಬೆಳವಣಿಗೆಗೆ ಪ್ರೊತ್ಸಾಹಿಸುವುದು. ಕಲಾವಿದರ ಕುಂದು ಕೊರತೆಗಳ ಕುರಿತು ಚರ್ಚಿಸಿ ಸರ್ಕಾರದ ಗಮನಕ್ಕೆ ತರುವುದು. ರಾಜ್ಯ ಮತ್ತು ಜಿಲ್ಲಾಮಟ್ಟದಲ್ಲಿ ಸಾಧನೆ ಮಾಡಿದ ಹಿರಿಯ - ಕಿರಿಯ ಕಲಾವಿದರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸುವ ಕೆಲಸ ಕಾರ್ಯಗಳು ಪ್ರತಿಷ್ಠಾನ ಉದ್ದೇಶವಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಅಖಂಡೇಶ್ವರ ಪತ್ತಾರ, ಬಸವರಾಜ ಮುಗಳಖೋಡ, ಶಶಿಧರ ಜಗಜಿನ್ನಿ, ಬಸವರಾಜ ಸಿಂದಗಿಮಠ ಅಶೋಕ ಬಡಿಗೇರ, ಚಂದ್ರಶೇಖರ ಆಲೂರ, ಶಂಕರ ಲಮಾಣಿ, ಭೀಮಸಿಂಗ ರಾಠೋಡ, ಸರದಾರ ಮುಂದಿನಮನಿ, ಭೀಮಪ್ಪ ಹಳ್ಳೇಗೋಳ, ಪವಿತ್ರಾ ಜಕ್ಕಪನವರ, ದೇವೇಂದ್ರ ಬಡಿಗೇರ, ಗುಂಡಪ್ಪ ಕಟ್ಟಿ, ಸೋಮು ಗಡೇದಗೌಡರ, ಕಲ್ಯಾಣಕುಮಾರ ಗೂಗಿ, ಗೀತಾರಾಣಿ ಚಿಮ್ಮಲ, ಬಸವರಾಜ ಜಿಡಗಿ, ವಿಜಯ ಹಿರೇಮಠ, ಶಿವಪತ್ರಯ್ಯ ಕೋಟಿ, ವಿದ್ಯಾ ಹೊದ್ಲೂರ ಸೇರಿದಂತೆ ಇತರರು ಇದ್ದರು.