

ಸುರೇಶ ಬಡಿಗೇರ ನೇತೃತ್ವದಲ್ಲಿ ಭಾರತ ಸೇವಾ ದಳ ತರಬೇತಿ ಕಾರ್ಯಕ್ರಮ
ವಿಜಯವಾಣಿ ಸುದ್ದಿಜಾಲ ಕಲಬುರಗಿ
ಶಿಸ್ತು ಮತ್ತು ಕ್ಷಮೆ ಇವು ಶಿಕ್ಷಕರಲ್ಲಿ ಇರಬೇಕಾಗಿರುವ ಮುಖ್ಯಗುಣಗಳು ಎಂದು ಇಲ್ಲಿನ ಸಾರ್ವಜನಿಕ ಶಿಕ್ಷಣ ಇಲಾಖೆ ಹೆಚ್ಚುವರಿ ಆಯುಕ್ತಾಲಯದ ದೈಹಿಕ ಶಿಕ್ಷಣ ಉಪ ನಿರ್ದೇಶಕ ವಸಂತ ಭಂಡಾರಿ ಹೇಳಿದರು.
ನಗರದ ಮಹಿಳಾ ಸರಕಾರಿ ಪಿಯು ಕಾಲೇಜಿನ ಸಭಾಂಗಣದಲ್ಲಿ ಭಾರತ ಸೇವಾದಳದ ¯್ಕ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಶಿP್ಷÀಕರ ಪುನಶ್ಚೇತನ ಮತ್ತು ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಶಿಕ್ಷಕರು ಶಿಸ್ತು ಮತ್ತು ಸಮಯಕ್ಕೆ ಹೆಚ್ಚು ಒತ್ತು ನೀಡಬೇಕು. ಮಕ್ಕಳಿಗೆ ತಿಳಿಹೇಳುವ ಕೆಲಸ ಮಾಡಬೇಕು ಎಂದರು.
ಸೇವಾ ದಳ ನಿಯಮಗಳು ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಬ್ಬರಿಗೂ ಆದರ್ಶವಾಗಿವೆ. ಸೇವಾ ದಳದವರು ಪ್ರತಿ ವರ್ಷವೂ ಶಿಕ್ಷಕರಿಗೆ ತರಬೇತಿ ಏರ್ಪಡಿಸುವ ಮೂಲಕ ಅವರನ್ನು ಮತ್ತೊಂದು ವರ್ಷದ ಕೆಲಸಕ್ಕೆ ಅಣಿಗೊಳಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಭಂಡಾರಿ ಶ್ಲಾಘಿಸಿದರು.
ಸೇವಾ ದಳ ಜಿ¯್ಲÁ ಪ್ರಧಾನ ಕಾರ್ಯದರ್ಶಿ ಸುರೇಶ ಬಡಿಗೇರ ಮಾತನಾಡಿ, ಜಿಲ್ಲೆಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಶಿಕ್ಷಕರಿಗೆ ರಾಷ್ಟçಧ್ವಜ, ರಾಷ್ಟçಗೀತೆ ಕುರಿತು ಮಾಹಿತಿ ನೀಡುವ ಉz್ದೆÃಶದಿಂದ ಕಾರ್ಯಾಗಾರ ಆಯೋಜಿಸಲಾಗಿದೆ. ಧ್ವಜವನ್ನು ಹೇಗೆ ಹಾರಿಸಬೇಕು, ಎಷ್ಟು ಎತ್ತರದಲ್ಲಿರಬೇಕು, ನಿಯಮಗಳು ಏನು ಎಂಬುದರ ಕುರಿತು ತಿಳಿಸಿಕೊಡುವುದರಿಂದ ದೈಹಿಕ ಶಿಕ್ಷಕರು ಮತ್ತು ಶಿಕ್ಷಕರು ಸರಿಯಾಗಿ ಕೆಲಸ ಮಾಡಿಕೊಂಡು ಹೋಗಲು ಪೂರಕವಾಗಲಿದೆ ಎಂದರು.
ಜಿಲ್ಲಾ ಸಂಘಟಕ ಚಂದ್ರಶೇಖರ ಜಮಾದಾರ, ತರಬೇತುದಾರರಾದ ರಾಜು ದೊಡ್ಡಮನಿ, ಜಯಪ್ರಕಾಶ ಇತರರಿದ್ದರು. ಕಾರ್ಯಾಗಾರದಲ್ಲಿ ೨೦೦ ಕ್ಕೂ ಹೆಚ್ಚು ಶಿಕ್ಷಕರು ಭಾಗಿಯಾಗಿದ್ದರು.
===