ಶಿಷ್ಟಾಚಾರ ಉಲ್ಲಂಘನೆ!

MG
Published on

ಮಾಗಡಿ: ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನಾ ಕಾರ್ಯಕ್ರಮದಲ್ಲಿ ಸಿಎಂ ಪ್ರೊಟೋಕಾಲ್ ಉಲ್ಲಂಘಿಸಿ ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಸರೋಜಾದೇವಿ ದರ್ಪ ತೋರಿಸಿದರು ಎನ್ನಲಾಗಿದೆ.

ವೇದಿಕೆಯಲ್ಲಿ ರಾಜಕಾರಣಿಗಳ ಜತೆಗೆ ಚೇರ್ ಹಾಕಿಸಿಕೊಂಡು ಕುಳಿತಿದ್ದು, ಈ ವೇಳೆ ಜಿಲ್ಲಾಧಿಕಾರಿ ಯಶ್ವಂತ ವಿ ಗುರುಕರ್, ಸಿಇಒ ದಿಗ್ವಿಜಯ್ ಬೋಡ್ಕೆ ವೇದಿಕೆಯಿಂದ ನಿರ್ಗಮಿಸುವಂತೆ ಸೂಚನೆ ನೀಡಿದರೂ ತಲೆಕೆಡಿಸಿಕೊಂಡಿಲ್ಲ. ಯಾರು ಎಷ್ಟೇ ಹೇಳಿದರೂ ಚೇರ್ ಬಿಡದ ಅಧಿಕಾರಿ ಸಂಬಂಧವೇ ಇಲ್ಲದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಈ ಬಗ್ಗೆ ರಾಮನಗರ ಶಾಸಕ ಇಕ್ಬಾಲ್ ಹುಸೇನ್, ಮಾಜಿ ಸಚಿವ ಎಚ್.ಎಂ.ರೇವಣ್ಣ ವೇದಿಕೆಯಿಂದ ಕೆಳಗಿಳಿಯುವಂತೆ ಸಾಕಷ್ಟು ಬಾರಿ ಹೇಳಿದರೂ ಇದಕ್ಕೆ ಮನ್ನಣೆ ನೀಡದೆ ವೇದಿಕೆಯ ಮುಂದಿನ ಸಾಲಿನ ಆಸನದಲ್ಲಿ ಕುಳಿತರು.

ತಡವಾಗಿ ಆಗಮಿಸಿದ ಸಚಿವ ಸುಧಾಕರ್, ವಿಧಾನ ಪರಿಷತ್ ಸದಸ್ಯ ಎಸ್.ರವಿ ಕುಳಿತುಕೊಳ್ಳಲು ಆಸನ ಇಲ್ಲದೆ ನಿಂತಿದ್ದರೂ ಅವರಿಗೆ ಆಸನ ಬಿಡಲಿಲ್ಲ. ಇದನ್ನು ಮನಗಂಡ ಆಯೋಜಕರು ಸಚಿವರಿಗೆ ಬದಲಿ ಆಸನದ ವ್ಯವಸ್ಥೆ ಕಲ್ಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net