ಶಿವಾಜಿ ಮುಸ್ಲಿಂ ವಿರೋಧಿ ಅಲ್ಲ

bkt-4-8
ಬಾಗಲಕೋಟೆ ನಗರದಲ್ಲಿ ಕ್ಷತ್ರಿಯ ಒಕ್ಕೂಟದಿಂದ ಮಂಗಳವಾರ ಸಂಜೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕಾರ್ಮಿಕ ಇಲಾಖೆ ಸಚಿವ ಸಂತೋಷ ಲಾಡ್ ಅವರನ್ನು ಸನ್ಮಾನಿಸಲಾಯಿತು. ಮುಖಂಡರಾದ ಡಾ.ಶೇಖರ ಮಾನೆ, ಗಣಪತಿಸಾ ದಾನಿ ಸೇರಿದಂತೆ ಕ್ಷತ್ರಿಯ ಸಮಾಜದ ಮುಖಂಡರು ಇದ್ದರು.
Published on

ಬಾಗಲಕೋಟೆ: ಯಾವ ಸರ್ಕಾರ ಬಂದರೂ ಅಷ್ಟೇ, ನಾವು ಸರ್ಕಾರಗಳನ್ನು ನಿರ್ಣಯ ಮಾಡುವಂತಹ ಶಕ್ತಿ ಇದ್ದರೆ ಮಾತ್ರ ಆ ಸರ್ಕಾರ ನಮ್ಮಗೆ ಅನುಕೂಲ ಮಾಡಿಕೂಡುತ್ತದೆ ಎಂದು ಕಾರ್ಮಿಕ ಇಲಾಖೆ ಸಚಿವ ಸಂತೋಷ ಲಾಡ್ ತಿಳಿಸಿದ್ದಾರೆ.

ನಗರದಲ್ಲಿ ಕ್ಷತ್ರಿಯ ಒಕ್ಕೂಟದಿಂದ ಮಂಗಳವಾರ ಸಂಜೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೊದಲು ನಾವು ಇತಿಹಾಸ ತಿಳಿದುಕೊಳ್ಳಬೇಕಾಗಿದೆ. ಇತಿಹಾಸದ ಅರಿಯದೇ ಹೋದರೇ ತಪ್ಪು ಮಾಹಿತಿ ಸಂದೇಶ ರವಾನಿಸುತ್ತಾರೆ. ತಮ್ಮಗೆ ಅನುಕೂಲವಾಗುವ ಹಾಗೇ ಭಾಷಣ ಮಾಡುತ್ತಾರೆ. ಕ್ಷತ್ರಿಯ ಸಮುದಾದ ವಿವಿಧ ಒಳಪಂಗಡಗಳು ಒಂದಾಗಿ ಒಂದೇ ವೇದಿಕೆಯಲ್ಲಿ ಸೇರಬೇಕು ಎಂದರು.

ಛತ್ರಪತಿ ಶಿವಾಜಿಯವರು ಮುಸ್ಲಿಂ ಸಮುದಾಯ ವಿರೋಽ ಎಂದು ಬಿಂಬಿಸುವ ಕೆಲಸ ನಡೆಯುತ್ತಿದೆ. ಚುನಾವಣೆ ಬಂದಾಗ ಬಹಳಷ್ಟು ರೀತಿಯಲ್ಲಿ ಶಿವಾಜಿ ಅವರ ಹೆಸರು ಹೇಳುತ್ತಾರೆ. ಆದರೆ ನಮ್ಮನ್ನು ವೋಟ್ ಬ್ಯಾಂಕ್ ಆಗಿ ಬಳಸಿಕೊಳ್ಳಲಾಗುತ್ತಿದೆ. ಅಫಲ್ಜ್ ಖಾನ್ ಪಠಾಣ್ ಶಿವಾಜಿ ಮಹಾರಾಜರ ಆಪ್ತ ರಕ್ಷಕಾಗಿ ಕೆಲಸ ಮಾಡುತ್ತಿದ್ದರು. ಇವರಿಂದ ತೊಂದರೆ ಇದೆ. ಅವನ ಜೊತೆಗೆ ಹೋಗುವಾಗ ಯಾವ ರೀತಿಯಾಗಿ ಇರಬೇಕು ಎಂಬುವದರ ಬಗ್ಗೆ ಮುಸ್ಲಿಂ ಧರ್ಮದ ವ್ಯಕ್ತಿ ಶಿವಾಜಿ ಮಹಾರಾಜ್ ಗೆ ಸಲಹೆ ನೀಡುತ್ತಿದ್ದ, ಅಫಲ್ಜ್ ಖಾನ ಹೊಟ್ಟೆ ಹರಿಯುವ ಮಾರಕಾಸ್ತ್ರ ತಯಾರು ಮಾಡಿ ಕೊಟ್ಟಿದ್ದೆ ಮುಸ್ಲಿಂ ವ್ಯಕ್ತಿ. ಛತ್ರಪತಿ ಶಿವಾಜಿ ಮಹಾರಾಜ್ ಮೊದಲ ಚಿತ್ರ ಬಿಡಿಸಿರುವ ವ್ಯಕ್ತಿ ಮುಸ್ಲಿಂ ಸಮುದಾಯವರು, ಶಿವಾಜಿ ಮಹಾರಾಜ್ ಬಂಧನ ಮಾಡಿದ್ದ ಅಫಲ್ಜ್ ಖಾನ ದಿಂದ ಬಿಡುಗಡೆ ಮಾಡಿಸಿಕೊಂಡು ಬಂದಿದ್ದು ಮುಸ್ಲಿಂ ವ್ಯಕ್ತಿ. ವಿಜಯಪುರದಲ್ಲಿ ಶಿವಾಜಿ ಮಹಾರಾಜರು ಈಶ್ವನ ಲಿಂಗ ದೇವಾಲಯ ನಿರ್ಮಿಸಿದರು. ಆಗ ಪ್ರಾರ್ಥನಾ ಮಂದಿರವು ಕಟ್ಟಿಸಿದರು. ಛತ್ರಪತಿ ಶಿವಾಜಿ ಮಹಾರಾಜರು ಇಡೀ ದೇಶಕ್ಕೆ ಮಾದರಿ ಆಗಿರುವ ಲೀಡರ್ ಆಗಿದ್ದರು. ಹೊರತು ಮುಸ್ಲಿಂ ವಿರೋಽ ಆಗಿರಲಿಲ್ಲ ಎಂದು ತಿಳಿಸಿದರು.
ಮುಖಂಡರಾದ ಡಾ.ಶೇಖರ ಮಾನೆ, ಗಣಪತಿಸಾ ದಾನಿ ಸೇರಿದಂತೆ ಕ್ಷತ್ರಿಯ ಸಮಾಜದ ಮುಖಂಡರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net