

ಹಳಿಯಾಳ: ಶಿವಾಜಿ ಮಹಾರಾಜರು ತೋರಿದ ರಾಷ್ಟ್ರಭಕ್ತಿ, ಸ್ವಾಭಿಮಾನ, ಶೌರ್ಯ ಇಂದಿಗೂ ಭಾರತೀಯರಿಗೆ ಸ್ಪೂರ್ತಿ ನೀಡುತ್ತಿದೆ. ಶಿವಾಜಿ ಮಹಾರಾಜರ ಜೀವನ ನಮ್ಮೆಲ್ಲರಿಗೆ ಪ್ರೇರಣೆಯಾಗಿದೆ ಎಂದು ಉತ್ತರ ಕನ್ನಡ ಡಿಸಿ ಡಾ. ಹರೀಶ ಕುಮಾರ ಕೆ. ಹೇಳಿದರು.
ಪಟ್ಟಣದ ಮರಾಠಾ ಭವನದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಬುಧವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ 393ನೇ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಅದ್ಭುತ ಆಡಳಿತಗಾರರಾಗಿದ್ದ ಶಿವಾಜಿ ಮಹಾರಾಜರು ಗುಣಶಾಲಿಗಳು, ಪ್ರತಿಭಾವಂತರು ಯಾರೇ ಇದ್ದರೂ ಅವರನ್ನು ಪೋ›ತ್ಸಾಹಿಸುತ್ತಿದ್ದರು ಎಂದರು. ಅಪ್ಪಾರಾವ್ ಕೃಷ್ಣಾ ಪೂಜಾರಿ ಅವರು ಛತ್ರಪತಿ ಶಿವಾಜಿ ಮಹಾರಾಜರ ಜೀವನ ಕುರಿತು ಉಪನ್ಯಾಸ ನೀಡಿದರು.
ಸನ್ಮಾನ: ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಮಾಜದ ಸೋಮನಿಂಗ ಪಾಕ್ರೆ, ಕೃಷ್ಣ ಪೂಜಾರಿ, ಶ್ರೀಕಾಂತ ಮಿರಾಶಿ, ಪರಶುರಾಮ ಪಾಳೇಕರ, ಮಂಗೇಶ ಪಾಟೀಲ, ಏಕನಾಥ ಚೌಗಲೆ ಹಾಗೂ ಕಳ್ಳರ ತಂಡವನ್ನು ಹಿಡಿದ ಪೊಲೀಸ್ ಮುಖ್ಯ ಪೇದೆ ಅಶೋಕ ಹುಬ್ಬಳ್ಳಿ ಅವರನ್ನು ಸನ್ಮಾನಿಸಲಾಯಿತು.
ಭವ್ಯ ಶೋಭಾ ಯಾತ್ರೆ: ಸಭಾ ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದಲ್ಲಿ ಭವ್ಯ ಶೋಭಾ ಯಾತ್ರೆ ನಡೆಯಿತು. ಬುಡಕಟ್ಟು ಸಿದ್ದಿ ಕಲಾವಿದರ ತಂಡ, ಗೌಳಿ ಕಲಾವಿದರ ಸಮೂಹ, ಕ್ಯಾಸಲ್ರಾಕ್ ಜಾಂಜ್ ಪಥಕ್ ವಾದ್ಯ ಮೇಳ, ಶಿವಪುರದ ಭಜನಾ ತಂಡಗಳು ಶೋಭಾಯಾತ್ರೆಗೆ ಮೆರುಗು ತಂದವು.
ತಹಸೀಲ್ದಾರ್ ವಿದ್ಯಾಧರ ಗುಳಗುಳೆ, ತಾಪಂ ಇಒ ಪ್ರಸನ್ನಕುಮಾರ ಸಾಲಿ, ಸಿಪಿಐ ಬಿ.ಎಸ್. ಲೋಕಾಪುರ, ಜೊಯಿಡಾ ಸಿಪಿಐ ಬಾಬಾಸಾಹೇಬ್ ಹುಳ್ಳೆಣ್ಣನವರ, ಜಿ.ಪಂ. ಸದಸ್ಯೆ ಮಹೇಶ್ವರಿ ಮಿಶಾಳೆ, ಲಲಿತಾ ಶ್ರೀಕಾಂತ ಘೊಟ್ನೇಕರ ಇದ್ದರು. ರಮೇಶ ಪಾಟೀಲ ನಿರ್ವಹಿಸಿದರು. ಮರಾಠಾ ಸಮಾಜದ ಪ್ರಮುಖರು, ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಛದ್ಮವೇಶ ಸ್ಪರ್ಧೆ ವಿಜೇತರು
ಶಿವಾಜಿ ಜಯಂತಿ ನಿಮಿತ್ತ ಆಯೋಜಿಸಿದ್ದ ಛದ್ಮವೇಶದಲ್ಲಿ ಜಗದೀಶ ಗರಗ ಪ್ರಥಮ, ರಾಜೇಶ್ವರಿ ಭಾಗವತಿ ದ್ವಿತೀಯ, ರಮಾಕಾಂತ ನಿಲೇಶ ಮಹಾಜನ ತೃತೀಯ, ಸುಕನ್ಯಾ ದಲಾಲ ನಾಲ್ಕನೇ, ಲೇಮಾಣಿ ಶಿರೂರ ಐದನೇ ಹಾಗೂ ಆರನೇಯ ಸ್ಥಾನ ಪಡೆದ ಬನಶಂಕರಿ ಹಳ್ಳೂರ ಅವರಿಗೆ ಬಹುಮಾನ ನೀಡಿ ಸತ್ಕರಿಸಲಾಯಿತು.