

ಬಾಗಲಕೋಟೆ: ನವನಗರದ ಅನುಷ್ಕಾ ಪೆಟ್ರೋಲ್ ಬಂಕ ಸಮೀಪ ಈಗಾಗಲೇ ಗುರುತಿಸಿರುವ ಜಾಗದಲ್ಲಿ ಛತ್ರಪತಿ ಶಿವಾಜಿ ಹಾಗೂ ಎಪಿಎಂಸಿ ವೃತ್ತದಲ್ಲಿ ಬಸವೇಶ್ವರ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ನೀಡಬೇಕು ಎಂದು ಒತ್ತಾಯಿಸಿ,ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಬಿಜೆಪಿ ಪಕ್ಷದ ಮುಖಂಡರು, ಶಿವಾಜಿ ಅಭಿಮಾನಿಗಳು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಎದುರು ಪ್ರತಿಭಟನೆ ನಡೆಸಿದರು.
ರಾಜ್ಯ ಸಭೆ ಸದಸ್ಯ ನಾರಾಯಣಸಾ ಭಾಂಡಗೆ ಮಾತನಾಡಿ, ಫೆಬ್ರವರಿ 19 ರಂದು ಶಿವಾಜಿ ಜಯಂತಿ ಇರುತ್ತದೆ. ಆ ದಿನವೇ ನಿಮ್ಮ ( ಜಿಲ್ಲಾ ಉಸ್ತುವಾರಿ ಸಚಿವ) ಅಮೃತ ಹಸ್ತದಿಂದ ಪ್ರತಿಷ್ಟಾಪನೆ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಆರ್ ಬಿ ತಿಮ್ಮಾಪೂರ ಅವರಿಗೆ ಒತ್ತಾಯಿಸಿದರು. ಎಲ್ಲಾ ದಾಖಲೆ ಸರಿ ಇದ್ದರೂ,ಪ್ರತಿಷ್ಟಾಪನೆ ಗೆ ಅವಕಾಶ ನೀಡುತ್ತಿಲ್ಲ ಎಂದು ತಿಳಿಸಿದರು.